ವರದಿ / ಚಿತ್ರ : ಈ ಮೀಡಿಯಾ
ಕಾಪು: ದಕ್ಷಿಣ ಕನ್ನಡ ಛಾಯಾಗ್ರಾಹಕರ ಸಂಘದ (SKPA) ಕಾಪು ವಲಯದ ವತಿಯಿಂದ ಕೆನಾನ್ ಕಂಪನಿಯ ಕಾರ್ಯಾಗಾರ ಮಂಗಳವಾರ ಕಾಪು ಜೆಸಿ ಭವನದಲ್ಲಿ ನಡೆಯಿತು.ಕಾರ್ಯಾಗಾರವನ್ನು ಕಾಪು ವಲಯದ ಗೌರವಾಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಉಚ್ಚಿಲ ಉದ್ಘಾಟಿಸಿದರು.
ವಲಯ ಅಧ್ಯಕ್ಷ ಸಂತೋಷ್ ಕಾಪು ಅಧ್ಯಕ್ಷತೆ ವಹಿಸಿದ್ದರು. ಕೆನಾನ್ ಕಂಪನಿಯ ಸಂಪನ್ಮೂಲ ವ್ಯಕ್ತಿ ಮ್ಯಾಡ್ಯೂಸ್ ಅವರು ಕಾರ್ಯಾಗಾರ ನಡೆಸಿಕೊಟ್ಟು, ಛಾಯಾಗ್ರಹಣ ಕ್ಷೇತ್ರಕ್ಕೆ ಸಂಬಂಧಿಸಿದ ತಾಂತ್ರಿಕ ಮಾಹಿತಿ ಹಾಗೂ ಕೆಮರಾ ಬಳಕೆಯ ಕುರಿತು ಮಾರ್ಗದರ್ಶನ ನೀಡಿದರು.ಕಾರ್ಯಾಗಾರದಲ್ಲಿ 30ಕ್ಕೂ ಅಧಿಕ ಮಂದಿ ಛಾಯಾಗ್ರಾಹಕರು ಭಾಗವಹಿಸಿ ಪ್ರಯೋಜನ ಪಡೆದರು.
ಈ ಸಂದರ್ಭ ಜಿಲ್ಲಾ ಛಾಯಾ ಕಾರ್ಯದರ್ಶಿ ರಾಜೇಶ್ ಶಂಕರಪುರ, ವಲಯ ಉಪಾಧ್ಯಕ್ಷರಾದ ಸಂತೋಷ್ ಕಟಪಾಡಿ, ದೀಪಕ್ ಶೆಣೈ, ಕೋಶಾಧಿಕಾರಿ ಕಿರಣ್ ಕಾಪು, ವಲಯ ಛಾಯಾ ಕಾರ್ಯದರ್ಶಿ ಸಂತೋಷ್, ಪೂರ್ವ ಅಧ್ಯಕ್ಷರಾದ ರವಿ ಕುಮಾರ್ ಕಟಪಾಡಿ, ಕೃಷ್ಣ ರಾವ್ ಮತ್ತಿತರರು ಉಪಸ್ಥಿತರಿದ್ದರು.ವಲಯ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ವಂದಿಸಿದರು. ವಿನೋದ್ ಕಾಂಚನ್ ಕಾರ್ಯಕ್ರಮ ಪೂರ್ವಾಧ್ಯಕ್ಷ ನಿರೂಪಿಸಿದರು.
