ವರದಿ /ಚಿತ್ರ ::ಈ ಮೀಡಿಯಾ
ಉಡುಪಿ : ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಆಡಳಿತ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಸರ್ವೇಶ ತಂತ್ರಿ, ವೇದಮೂರ್ತಿ ವಿಖ್ಯಾತ್ ಭಟ್, ಗಣೇಶ ಸರಳಾಯರವರ ನೇತೃತ್ವದಲ್ಲಿ ನವರಾತ್ರಿ ಮಹೋತ್ಸವ ನಡೆಯುತ್ತಿದೆ.
ಪ್ರತಿದಿನ ಬೆಳಗ್ಗಿನಿಂದ ರಾತ್ರಿಯವರೆಗೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಉಪಾಹಾರ, ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ. ವಿಶೇಷ ಪಂಚಭಕ್ಷ್ಯ ಸಹಿತ ಭೋಜನವನ್ನು ದೇವಿಯ ಪ್ರಸಾದ ರೂಪದಲ್ಲಿ ಉಣಬಡಿಸಲಾಗುತ್ತಿದೆ. ಅನ್ನಪೂರ್ಣ ಭೋಜನಾಲಯ, ಸರಸ್ವತಿ ಭವನ, ಆದಿಶಕ್ತಿ ಸಭಾಭವನ ಸೇರಿದಂತೆ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.
ಬಡಿಸಿ ಉಣಿಸುವ ಅನ್ನಸಂತರ್ಪಣೆಕ್ಷೇತ್ರ ಸ್ಥಾಪನೆಯಾದ ದಿನದಿಂದಲೂ ಅನ್ನದಾನಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ವಿತರಣೆಯಲ್ಲಿ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಫೆ ಪದ್ಧತಿಗೆ ಅವಕಾಶ ನೀಡದೆ, ಭಕ್ತರಿಗೆ ಪ್ರೀತಿಯಿಂದ ಬಡಿಸಿ ಉಣಿಸುವ ಪರಂಪರೆಯನ್ನು ಇಂದಿಗೂ ಮುಂದುವರಿಸಲಾಗಿದೆ. ಅನ್ನದಾನದ ಈ ವ್ಯವಸ್ಥೆಯ ಬಗ್ಗೆ ಸ್ವತಃ ಮುತುವರ್ಜಿ ವಹಿಸಲಾಗುತ್ತಿದೆ ಎಂದು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ತಿಳಿಸಿದ್ದಾರೆ.
ಧಾರ್ಮಿಕ ವಿಧಿವಿಧಾನಕ್ಷೇತ್ರದಲ್ಲಿ ನಿತ್ಯ ಜೋಡಿ ಚಂಡಿಕಾಯಾಗ, ದುರ್ಗಾ ನಮಸ್ಕಾರ ಪೂಜೆ, ಸಹಸ್ರನಾಮಾರ್ಚನೆ, ಕಲೋಕ್ತ ಪೂಜೆ, ಶ್ರೀರಂಗ ಪೂಜೆ, ದೀಪಾರಾಧನೆ, ಭಜನೆ ಸಂಕೀರ್ತನೆಗಳು ನಡೆಯುತ್ತಿವೆ. ಬುಧವಾರ ಮುಂಬಯಿಯ ಭಾಗೀರಥಿ ಮತ್ತು ಮನೆಯವರು ಚಿಟ್ಟಾಡಿಯ ಶಶಿಕಲಾ ಗಣೇಶ್ ಮತ್ತು ಹಾಗೂಸೇವಾರೂಪವಾಗಿ ಮನೆಯವರ ಚಂಡಿಕಾಯಾಗಗಳು ನೆರವೇರಿದವು.
ಮುರಳೀಧರ ಮುದ್ರಾಡಿ ಮತ್ತು ಮನೆಯವರು ದುರ್ಗಾ ನಮಸ್ಕಾರ ಪೂಜೆ ಸಮರ್ಪಿಸಿದರು.ಧನ್ಯಶ್ರೀ, ಅನ್ನಪೂರ್ಣಿ, ಶ್ರೇಯಾ ಶ್ಯಾನುಭಾಗ್ ಸೇರಿದಂತೆ ನೃತ್ಯಾರ್ಥಿಗಳು ದೇವಿಗೆ ನೃತ್ಯಸೇವೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನವಶಕ್ತಿ ವೇದಿಕೆಯಲ್ಲಿ ಸ್ಥಳೀಯ ಕಲಾವಿದರು ಹಾಗೂ ಶಿಫಾಲಿ ಮತ್ತು ತಂಡದವರು ವಿವಿಧ ವಿನೋದಾವಳಿ ಪ್ರಸ್ತುತಪಡಿಸಿದರು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಆಚಾರ್ಯ ತಿಳಿಸಿದ್ದಾರೆ.ತ್ರಿಪುರ ಸುಂದರಿ ಮಹಾಯಾಗಅ. 15 ಮತ್ತು 16ರಂದು ಕ್ಷೇತ್ರದಲ್ಲಿ ಶ್ರೀ ಲಲಿತಾ ಮಹಾ ತ್ರಿಪುರ ಸುಂದರಿ ಮಹಾಯಾಗ ನೆರವೇರಲಿದೆ.
