November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಉಚ್ಚಿಲ ದಸರಾ 2026 : ಮುದ್ದುಮಕ್ಕಳಿಗೆ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ : ತಪಸ್ಯ ನಾಗಾಪ್ರಸಾದ್ ಪ್ರಥಮ, ಸಾನಿಕ ಕಿದಿಯೂರು ದ್ವಿತೀಯ, ಪ್ರಶ್ವಿ ಎಸ್. ಪುತ್ರನ್ ತೃತೀಯ ;

ವರದಿ / ಚಿತ್ರ : ಈ ಮೀಡಿಯಾ

ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರಮಹಾಜನ ಸಂಘ ಸಂಚಾಲಕತ್ವದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಮಹಾಲಕ್ಷ್ಮಿ ದೇವಳದ ಶ್ರೀಮತಿ ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ 3 ವರ್ಷದಿಂದ 9 ವರ್ಷದೊಳಗಿನ ಮುದ್ದುಮಕ್ಕಳಿಗೆ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು.

ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ 76 ಮುದ್ದು ಮಕ್ಕಳು ಭಾಗವಹಿಸಿದ್ದರು.ಸ್ಪರ್ಧಾ ವಿಜೇತರು : ತಪಸ್ಯ ನಾಗಾಪ್ರಸಾದ್ ಮಲ್ಪೆ (ಪ್ರಥಮ),ಸಾನಿಕ ಕಿದಿಯೂರು (ದ್ವಿತೀಯ), ಪ್ರಶ್ನಿ ಎಸ್. ಪುತ್ರನ್ ಸುರತ್ಕಲ್ (ತೃತೀಯ) ಬಹುಮಾನ ಪಡೆದರು.. ಭಾಗವಹಿಸಿದ ಎಲ್ಲಾ ಮಕ್ಕಳನ್ನು ಗೌರವಿಸಲಾಯಿತು.

ಈ ಸಂದರ್ಭ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂದ್ರೆ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾಶರತ್, ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ನಾಲ್ಕುಪಟ್ಟ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಂಘ ಅಧ್ಯಕ್ಷೆ ಸುಗುಣ ಕರ್ಕೇರ, ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.

Related posts

ಕೃತಕ ಬುದ್ಧಿ ಮತ್ತೆ ಬಳಸಿ ಮೂತ್ರನಾಳದ ಸೊಂಕು ಪತ್ತೆ ಹಚ್ಚುವ ವ್ಯವಸ್ಥೆಯ ಅಭಿವೃದ್ಧಿ ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಸಾಧನೆ;

Voiceoftulunadu

ಅ.25 : ತುಳುನಾಡಿನ ಗರೋಡಿಗಳ ಪೂ ಪೂಜನೆಯವರು, ದರ್ಶನ ಪೂಜಾರಿ, ಕೂಡುಕಟ್ಟಿನ ಗುರಿಕಾರರ ಸಮ್ಮೇಳನಮಾಹಿತಿ ನೀಡಿದ ಅಧ್ಯಯನ ಕೇಂದ್ರದ ಗೌರವ ಸಲಹೆಗಾರ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ;

Voiceoftulunadu

ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ₹2,500 ಹಣ ಪಡೆಯಲು ‘ಗರ್ಭಕಂಠ ಕ್ಯಾನ್ಸರ್ ಲಸಿಕೆ’ ಪಡೆಯುವುದು ಕಡ್ಡಾಯ! ;

Voiceoftulunadu

Leave a Comment