November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಮೊಗವೀರ ಕನ್ನಡ ಮಾಸಿಕದ ಆಯೋಜನೆಯಲ್ಲಿ ಉಡುಪಿ ಉಚ್ಚಿಲ ದಸರಾದಲ್ಲಿ ‘ದಸರಾ ಕವಿಗೋಷ್ಠಿ’ ಸತೀಶ್ ಅಮೀನ್ ಪಡುಕರೆ ಅವರ ಭಕ್ತಿ ಭಾವ ಬದುಕು ಕೃತಿ ಬಿಡುಗಡೆ ;

ವರದಿ/ ಚಿತ್ರ: ಈ ಮೀಡಿಯಾ

ಉಚ್ಚಿಲ:ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮತ್ತು ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಇವರ ಸಂಯುಕ್ತ ಆಶ್ರಯದಲ್ಲಿ ಮೊಗವೀರ ಕನ್ನಡ ಮಾಸಿಕದ 87 ಸಂಭ್ರಮದ ಪ್ರಯುಕ್ತ ಉಚ್ಚಿಲ ಮೊಗವೀರ ಭವನದಲ್ಲಿ ಉಡುಪಿ ಉಚ್ಚಿಲ ದಸರಾ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಸಾಹಿತ್ಯವೂ ಬದುಕಿಗೆ ಅನಿವಾರ್ಯ. ಈ ನಿಟ್ಟಿನಲ್ಲಿ ದಸರಾದ ಪ್ರಯುಕ್ತ ಕವಿಗೋಷ್ಠಿ ವಿಶೇಷವಾದ ಕಾರ್ಯಕ್ರಮವಾಗಿದೆ. ಮುಂದಿನ ವರ್ಷ ಇನ್ನಷ್ಟು ಉತ್ತಮ ರೀತಿಯಲ್ಲಿ ಆಯೋಜಿಸಲಾಗುವುದು ಎಂದರು.

ಪುಸ್ತಕ /ಧ್ವನಿಸುರುಳಿ ಬಿಡುಗಡೆ :ಶ್ರೀ ಮಹಾಲಕ್ಷ್ಮಿ ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಅವರ ಭಕ್ತಿ ಭಾವ ಬದುಕುಕೃತಿ ಹಾಗೂ ಕವಿ, ಪತ್ರಕರ್ತ ಯಶವಂತ ಬೋಳೂರುರವರ ಮೊಗವೀರ ಕುಲಗುರು ಮಾಧವ ಮಂಗಳ ಪೂಜಾರ್ಯರ ಕುರಿತ ಧ್ವನಿ ಸುರುಳಿ ಲೋಕಾರ್ಪಣೆಗೊಂಡಿತು.ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಅಧ್ಯಕ್ಷರಾದ ಅಜಿತ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಟ್ರಸ್ಟಿಗಳಾದ ದೇವರಾಜ ಬಂಗೇರ, ಲಕ್ಷಣ ಶ್ರೀಯಾನ್, ಉಪಾಧ್ಯಕ್ಷೆ ದಯಾವತಿ ಸುವರ್ಣ, ಸಹ ಕಾರ್ಯದರ್ಶಿ ಪ್ರೀತಿ ಶ್ರೀಯಾನ್, ದ.ಕ.ಘಟಕದ ಉಪಾಧ್ಯಕ್ಷರಾದ ಮೋಹನ್ ಕೋಡಿಕಲ್, ಕಾರ್ಯದರ್ಶಿ ಭರತ್ ಎರ್ಮಾಳು, ಮೊಗವೀರ ಸಮಿತಿ ಕಾರ್ಯಧ್ಯಕ್ಷ ರಾಜೇಶ್ ಪುತ್ರನ್, ಮ್ಯಾನೇಜರ್ ಪ್ರಮೋದ್ ಪುತ್ರನ್, ವ್ಯವಸ್ಥಾಪಕ ಮಂಡಳಿಯ ಮಹಿಳಾ ವಿಭಾಗದ ಪ್ರಮುಖರಾದ ಮೋಹಿನಿ ಮಲ್ಪೆ, ಸುರೇಖ ಪುತ್ರನ್, ಕುಮಾರ್ ಮಟ್ಟು, ದಿನೇಶ್ ಎರ್ಮಾಳು, ಶರಣ್ಯಜೇಶ್ ಉಪಸ್ಥಿತರಿದ್ದರು.ಮೊಗವೀರ ಕನ್ನಡ ಮಾಸಿಕದ ಸಂಪಾದಕರಾದ ಅಶೋಕ್ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಉಚ್ಚಿಲ ದಸರಾ ಕವಿಗೋಷ್ಠಿ : ಹಿರಿಯ ಕವಿ, ಪತ್ರಕರ್ತ ಯಶವಂತ್ ಬೋಳೂರು ಅಧ್ಯಕ್ಷತೆಯಲ್ಲಿ ಜರಗಿದ ಕವಿಗೋಷ್ಠಿಯಲ್ಲಿ ಗುರುಪ್ರಸಾದ್ ಪಡುಬಿದ್ರಿ, ರವಿ ಕೊಟ್ಟಾರಗಸ್ತಿ, ದೀಪಕ್ ಎನ್ ದುರ್ಗ ಕಾರ್ಕಳ, ಚಂದ್ರಹಾಸ್ ಕಾನಂತೂರ್ ಉಳ್ಳಾಲ, ಸತೀಶ್ ಅಮೀನ್ ಪಡುಕರೆ, ಶುಭಲಕ್ಷ್ಮಿ ನಾಯಕ್, ಶಂಕರ್ ಪಡಂಗ ಮೂಲ್ಕಿ, ರಮೇಶ್ ಉಳಾಯ ಪುತ್ತೂರು, ವಾಸಂತಿ ಅಂಬಲಪಾಡಿ, ವಿಂದ್ಯಾ ಎಸ್‌. ರೈ, ಬಂಟ್ವಾಳ, ಐಕಳ ಕೃಷ್ಣಾನಂದ ಶೆಟ್ಟಿ ಕಿನ್ನಿಗೋಳಿ, ಅಂತೋಣಿ ಲೂಯಿಸ್, ಅಶೋಕ ತೆಕ್ಕಟ್ಟೆ, ಬಪ್ಪನಾಡು ವಿಜಯಕುಮಾರ್ ರಾವ್ ಬೆಂಗಳೂರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಡಾ.ವಿ.ಕೆ.ಯಾದವ್ ಸಸಿಹಿತ್ತು ಕವಿಗೋಷ್ಠಿ ನಿರ್ವಹಿಸಿದರು.

Related posts

ನಿಮಗೆ ಮಾರಿದ ನಕ್ಷೆ ಹಳೆಯದಾಗಿದೆ : ವಿಶೇಷ ಲೇಖನ : ಬಂಟಕಲ್ ತಾಂತ್ರಿಕ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಡಾ. ನೇಹಾ ಲಖೋಟಿಯಾ ಲೇಖನ!

Voiceoftulunadu

ಇಸ್ರೋ ಭಾರತದ ನ್ಯಾವಿಕ್ ವ್ಯವಸ್ಥೆಯನ್ನು ಬಲಪಡಿಸಿದೆ: NVS-03 ಉಪಗ್ರಹದ ಯಶಸ್ವಿ ಉಡಾವಣೆ ;

Voiceoftulunadu

ಬೆಳ್ಳಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂತನ ರಥಾಲಯಕ್ಕೆ ಶಿಲಾನ್ಯಾಸ : ನೂತನ ರಥಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದ ದೇವಳದ ಅರ್ಚಕರಾದ ಶ್ರೀಧ‌ರ್ ಭಟ್ ;

Voiceoftulunadu

Leave a Comment