November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಉಚ್ಚಿಲ ದಸರಾ : ಅಬ್ಬರದ ಪಿಲಿ ಪಂಥ – ಪುರುಷರ ಹುಲಿವೇಷ ಸ್ಪರ್ಧೆಸಾಮೂಹಿಕ ಕುಣಿತ ಭಜನೆ ಉದ್ಘಾಟಿಸಿದ ನಾಡೋಜ ಡಾ. ಜಿ ಶಂಕರ್ ;

ವರದಿ /ಚಿತ್ರ : ಈ ಮೀಡಿಯಾ

ಉಚ್ಚಿಲ : ದ.ಕ. ಮೊಗವೀರಮಹಾಜನ ಸಂಘ ಸಂಚಾಲಿತ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾದಲ್ಲಿ ಭಾನುವಾರ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ವತಿಯಿಂದ ಆಹ್ವಾನಿತ ತಂಡಗಳ “ಅಬ್ಬರದ ಪಿಲಿ ಪಂಥ 2026 ಸೀಸನ್ 1” ಪುರುಷರ ಹುಲಿವೇಷ ಸ್ಪರ್ಧೆ ಮತ್ತು ರಥಬೀದಿಯ ಸುತ್ತ ಆಹ್ವಾನಿತ ತಂಡದವರಿಂದ ಏಕಕಾಲದಲ್ಲಿ ಸಾಮೂಹಿಕ ಕುಣಿತ ಭಜನೆಯನ್ನು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ.ಶಂಕರ್ಉದ್ಘಾಟಿಸಿದರು.

ಈ ಸಂದರ್ಭ ಪಿಲಿ ಪಂಥದ ನೇತೃತ್ವ ವಹಿಸಿರುವ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾಸ್ ವಿ ಅಮೀನ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಉಡುಪಿ ಉಚ್ಚಿಲ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ವಿನಯ್ ಕರ್ಕೇರ, ಚಿತ್ರನಟಿ ಚಿರಶ್ರೀ ಅಂಚನ್, ಸಂಧ್ಯಾದೀಪ ಸುನೀಲ್, ಕರ್ಕೇರ, ಮನೋಜ್ ಸುಗುಣ ಕಾಂಚನ್, ರಚನ್ ಉಪಸ್ಥಿತರಿದ್ದರು.

ಎಂಟನೇ ದಿನವಾದ ಭಾನುವಾರದಂದು ಬೆಳಿಗ್ಗೆ ಉದಯಪೂಜೆ, ನಿತ್ಯ ಚಂಡಿಕಾ ಹೋಮ, ಮಧ್ಯಾಹ್ನ ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ ಜರಗಿತು.

ಸಂಜೆ ಪ್ರಸಾದ ವಿತರಣೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಶ್ರೀ ಸರಸ್ವತೀ ಕಲೋಕ್ತ ಪೂಜೆ ಜರಗಿತು.ಜೊತೆಗೆ ಭಜನಾ ಸಂಕೀರ್ತನೆ, ಸಂಜೆ ಧಾರ್ಮಿಕ ಸುಮಂಗಲೆಯರಿಂದ ಪ್ರವಚನ, ಸಾಮೂಹಿಕ ಕುಂಕುಮಾರ್ಚನೆ ನೆರವೇರಿತು.

Related posts

ಪರಿಮಳದ ಬಾಕಿ ಮೊತ್ತ ಕೃತಿಗೆ ಕವಿ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ 2026 : ಬೆಂಗಳೂರಿನ ಕವಿ ಡಾ. ಲಕ್ಷ್ಮಣ್ ವಿ. ಎ. ಅವರ ಕವನ ಸಂಕಲನ;

Voiceoftulunadu

ಗೆಳೆಯರ ಬಳಗ – ಕಾರಂತ ಪುರಸ್ಕಾರ – 2026 ರಾಮ ಮೊಗವೀರ ಕೋಟ ಆಯ್ಕೆ ಅ.11: ಸಾಲಿಗ್ರಾಮ ಶ್ರೀ ಗುರುನರಸಿಂಹ ಬಯಲು ರಂಗ ಮಂದಿರದಲ್ಲಿ ನಡೆಯಲಿರುವ ಸನ್ಮಾನ ;

Voiceoftulunadu

ಗುಟ್ಕಾ, ಪಾನ್ ಮಸಾಲಾ, ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಹಿಂಪಡೆತ ತಂಬಾಕು ಬೆಳೆಗಾರರ ಮನವಿ ಹಿನ್ನೆಲೆಯಲ್ಲಿ ಸಿಎಂ ಡಿಕೆಶಿಯವರಿಂದ ಆದೇಶ ಹಿಂಪಡೆಯುವ ಸೂಚನೆ ;

Voiceoftulunadu

Leave a Comment