November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಕೊಡ್ಮಾಣ್‌: 38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಾಪನ.;

ವರದಿ /ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ

ಕೊಡ್ಮಾಣ್/ಬಂಟ್ವಾಳ: ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇದರ ಆಶ್ರಯದಲ್ಲಿ ಅ.16ರಿಂದ 19ರ ವರೆಗೆ ನಾಲ್ಕು ದಿನಗಳ ಕಾಲ ಆಯೋಜಿಸಲಾದ 38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ. 19ರಂದು ಅರ್ಥಪೂರ್ಣವಾಗಿ ವೈಭವಯುತವಾಗಿ ಸಂಪನ್ನಗೊಂಡಿತು.

ಅಂದು ಬೆಳಿಗ್ಗೆ ಭಜನೆ, ಅಕ್ಷರಾಭ್ಯಾಸ, ದುರ್ಗಾಪೂಜೆ, ಆಯುಧಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಬಳಿಕ ದಿವ್ಯಾನಿಧಿ ರೈ ಎರಂಬು ಅವರ ನೇತೃತ್ವದಲ್ಲಿ ಸ್ವರ ಸಮರ್ಪಣೆ ಸಂಗೀತ ಕಾರ್ಯಕ್ರಮ ಜರುಗಿತು.

ಸಂಜೆ ಶ್ರೀ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ಉತ್ಸವದ ಸ್ಥಳದಿಂದ ಕೊಡ್ಮಾಣ್, ನೆತ್ತರಕೆರೆ, ಗೋವಿಂತೋಟ, ಕಾಪಿಕಾಡ್ ಹಾಗೂ ಕಬೇಲ ಮಾರ್ಗವಾಗಿ ಸಾಗಿತು. ಏಪೆದಗುರಿಯ ಅಪ್ಪಯ್ಯ ಮೂಲ್ಯರ ಮನೆತನದ ದೇವರ ಕೆರೆಯಲ್ಲಿ ವಿಸರ್ಜನಾ ಪೂಜೆ ನೆರವೇರಿಸಿದ ಬಳಿಕ ಶ್ರೀ ಶಾರದಾ ಮಾತೆಯವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು.

ಶೋಭಾಯಾತ್ರೆಯಲ್ಲಿ ಚೆಂಡೆ, ಶಂಖ, ಜಾಗಟೆ ಹಾಗೂ ಬೊಂಬೆ ಕುಣಿತ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಮಾರ್ಗದುದ್ದಕ್ಕೂ ತಳಿರು ತೋರಣ, ದೀಪಾಲಂಕಾರ ಹಾಗೂ ಭಗವಾಧ್ವಜಗಳಿಂದ ಅಲಂಕರಿಸಲಾಗಿತ್ತು. ಸಮಿತಿಯ ಪದಾಧಿಕಾರಿಗಳ ಸಹಿತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಶ್ರೀ ಶಾರದಾ ಮಾತೆಗೆ ಭಕ್ತಿಪೂರ್ವಕವಾಗಿ ವಿದಾಯ ಸಲ್ಲಿಸಿದರು.

Related posts

ಆಳ್ವಾಸ್ ಪ್ರಗತಿ-2026 ಬೃಹತ್ ಉದ್ಯೋಗ ಮೇಳ: ಪಕ್ಷಾತೀತ ಯುವ ನಾಯಕರ ಒಕ್ಕೂಟ ಸನ್ನದ್ಧ;

Voiceoftulunadu

‘ಮೀಡಿಯಾ ಮನಸುಗಳು’ ತಂಡದ ಸಮಾಜ ಸೇವೆ : ಪಣಂಬೂರಿನ ಕುದ್ರೆಮುಖ ಬಸ್ ತಂಗುದಾಣಕ್ಕೆ ಸಿಕ್ತು ಕಾಯಕಲ್ಪ ;

Voiceoftulunadu

ಹಿರಿಯ ಛಾಯಾ ಪತ್ರಕರ್ತ ಅಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಪಿಪಿಎಸ್ಎ ಗೌರವ

voiceoftulunadu

Leave a Comment