November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಅ.25 : ತುಳುನಾಡಿನ ಗರೋಡಿಗಳ ಪೂ ಪೂಜನೆಯವರು, ದರ್ಶನ ಪೂಜಾರಿ, ಕೂಡುಕಟ್ಟಿನ ಗುರಿಕಾರರ ಸಮ್ಮೇಳನಮಾಹಿತಿ ನೀಡಿದ ಅಧ್ಯಯನ ಕೇಂದ್ರದ ಗೌರವ ಸಲಹೆಗಾರ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ;

ವರದಿ/ ಚಿತ್ರ : ಈ ಮೀಡಿಯಾ

ಕಾಪು : ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಬೈದಶ್ರೀ ಸಂಸ್ಥೆ ವತಿಯಿಂದ ಕಾಪು ತಾಲೂಕಿನ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗಳ ಪೂ- ಪೂಜನೆಯವರು, ಬೈದರ ದರ್ಶನ ಪೂಜಾರಿಗಳು ಹಾಗೂ ಕೂಡುಕಟ್ಟಿನ ಗುರಿಕಾರರ ಸಮ್ಮೇಳನ ಮತ್ತು ಸಮಾಲೋಚನೆಯನ್ನು ಅ.25, ರವಿವಾರ ಬೆಳಿಗ್ಗೆ 10 ಗಂಟೆಗೆ ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಯನ ಕೇಂದ್ರದ ಗೌರವ ಸಲಹೆಗಾರರಾದ ಮಾಜಿ ಸಚಿವ ವಿನಯ ಕುಮಾ‌ರ್ ಸೊರಕೆ ಹೇಳಿದರು.

ಅವರು ಸೋಮವಾರ ಕಾಪು ನಡೆದ ಮಾಹಿತಿ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನೀಡಿದರು.ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕಅಧ್ಯಯನ ಕೇಂದ್ರದ ಅಧ್ಯಕ್ಷರಾದ ಸೂರ್ಯೋದಯ ಪೆರಂಪಳ್ಳಿ ಮಾತನಾಡಿ, ತಾಲೂಕುವಾರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗಳ ಪೂಪೂಜನೆಯವರು, ಬೈದರ ದರ್ಶನ ಪೂಜಾರಿಗಳು ಹಾಗೂ ಕೂಡುಕಟ್ಟಿನ ಗುರಿಕಾರರನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ತದನಂತರ ತುಳುನಾಡಿನ ಎಲ್ಲ ಗರೋಡಿಗಳ ಪ್ರತಿನಿಧಿಗಳನ್ನು ಒಟ್ಟು ಸೇರಿಸುವ ಬೃಹತ್ ಸಮ್ಮೇಳನವನ್ನು ಆಯೋಜಿಸುವ ಉದ್ದೇಶ ಸಂಸ್ಥೆಗಿದೆ.

ಕಾರ್ಯಕ್ರಮದಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಡಾ. ತುಕಾರಾಮ್ ಪೂಜಾರಿ ದಿಕ್ಕೂಚಿ ಭಾಷಣವನ್ನುಮಾಡಲಿದ್ದಾರೆ. ಕಳೆದ 4 ದಶಕಗಳಿಂದ ಕರಾವಳಿ ಕರ್ನಾಟಕದ ಸಂಸ್ಕೃತಿ, ಪರಂಪರೆ, ಕಟ್ಟುಕಟ್ಟಳೆ, ಪಾರ್ದನಗಳು ಹಾಗೂ ತುಳುನಾಡಿನಜನಪದೀಯ ಆಚರಣೆಗಳ ಅಧ್ಯಯನ ಹಾಗೂ ಮಾಹಿತಿಗಳನ್ನು ಳನ್ನು ಗ್ರಂಥ ರೂಪದಲ್ಲಿ ದಾಖಲಿಸುವ ಕಾರ್ಯ ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದಿಂದ ಆಗಿದೆ.

ಈ ಮೂಲಕ ಗರೋಡಿಗಳ ಇತಿಹಾಸ, ಆರಾಧನಾ ಪರಂಪರೆ, ಆಚರಣೆಗಳು ಹಾಗೂ ಮೌಖಿಕವಾಗಿ ಉಳಿದುಬಂದಿರುವ ಅಮೂಲ್ಯ ಸಾಂಸ್ಕೃತಿಕ ಮಾಹಿತಿಗಳನ್ನು ಸಂಗ್ರಹಿಸಿ, ವ್ಯವಸ್ಥಿತವಾಗಿ ದಾಖಲಿಸಿ, ಮುಂದಿನ, ಪೀಳಿಗೆಗೆ ಉಳಿಸುವುದು ಸಂಸ್ಥೆಯ ಮುಖ್ಯ ಆಶಯವಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ದಾಮೋದರ ಪ್ರಮುಖರಾದ ಕಲ್ಮಾಡಿ, ಹರೀಶ್ ಎಮ್.ಕೆ. ಕಲ್ಮಾಡಿ, ಸುಧಾಕರ ಡಿ. ಅಮೀನ್ ಪಾಂಗಾಳ ಉಪಸ್ಥಿತರಿದ್ದರು.

Related posts

ಬಂಟಕಲ್ ತಾಂತ್ರಿಕ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ : ಅಧ್ಯಕ್ಷತೆ ವಹಿಸಿದ ಶ್ರೀ ಸೋದೆ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷರಾದ ಪಿ ಶ್ರೀನಿವಾಸ ತಂತ್ರಿ ;

Voiceoftulunadu

ವಿದ್ಯಾ ಪ್ರಕಾಶ್‌ ಅಮ್ಮಣ್ಣಾಯರವರ ‘ಭಕ್ತಿ ಭಾವ ಲಹರಿ” ಗೀತಾ ಸಂಕಲನ ಬಿಡುಗಡೆ : ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಪು ತಾಲೂಕು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠ;

Voiceoftulunadu

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 59 ನೇ ವರ್ಧಂತ್ಯುತ್ಸವ : ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ಕಾರ್ಯಕ್ರಮ ;

Voiceoftulunadu

Leave a Comment