November 3, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 59 ನೇ ವರ್ಧಂತ್ಯುತ್ಸವ : ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ಕಾರ್ಯಕ್ರಮ ;

ಧರ್ಮಸ್ಥಳ : ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆಗೆ ಅನುಗುಣವಾಗಿ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ನಿಸ್ವಾರ್ಥ ಮನೋಭಾವದಿಂದ ಸಾತ್ವಿಕ ತ್ಯಾಗದೊಂದಿಗೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸೇವಾ ಕಾರ್ಯ ಹಾಗೂ ಹಾಗೂ ಸಾಧನೆ ಆದರ್ಶ ಅನುಕರಣೀಯಮತ್ತು ವಿಶ್ವಮಾನ್ಯವಾಗಿದೆ ಎಂದು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ, ರಾಘವೇಂದ್ರ ಶ್ರೀನಿವಾಸ ಭಟ್ ಹೇಳಿದರು.

ಅವರು ಶನಿವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 59 ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಶುಭಾಶಂಸನೆ ಗೈದರು.ಸಾರ್ವಜನಿಕ ಅಭಿನಂದನೆ ಸ್ವೀಕರಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ನೂತನ ಯೋಜನೆಗಳನ್ನು ಪ್ರಕಟಿಸಿದರು.

ಶ್ರವಣ ಬೆಳಗೊಳದಲ್ಲಿ ವಿದ್ಯಾರ್ಥಿನಿ ನಿಲಯ ನಿರ್ಮಾಣ, ಉಜಿರೆಯಲ್ಲಿವಿದ್ಯಾರ್ಥಿನಿಯರಿಗಾಗಿ ಕ್ರೀಡಾವಸತಿ ನಿಲಯ, ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಮತ್ತು ಫಿಸಿಯೋಥೆರಪಿ ಕಾಲೇಜು ಪ್ರಾರಂಭ, ಶಿಕ್ಷಣ ಸಂಸ್ಥೆಗಳ ಹಳೆ ಕಟ್ಟಡಗಳ ನವೀಕರಣ, ಉಜಿರೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್, ಶ್ರೀಕ್ಷೇತ್ರ ಯೋಜನೆಯಡಿ ಫಲಾನು ಇನುಭವಿಗಳ ಅನುಕೂಲಕ್ಕಾಗಿ ಎಟಿಎಂ ಬಳಕೆ, ಉಜಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ, ಕೆರೆಗಳ ಪುನಶ್ವೇತನ, ಎಸ್. ಎಸ್ ಡಿಎಂ ಆಸ್ಪತ್ರೆ, ಉಜಿರೆಯಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಸೌಲಭ್ಯ ಆರಂಭ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಹಯೋಗದೊಂದಿಗೆ ನಾರಾಯಣ ಹೆಲ್ತ್ ಸಂಸ್ಥೆಯ ಸಹಯೋಗ ಆಸ್ಪತ್ರೆ ಉಜಿರೆಯಲ್ಲಿ ಬೆಂಗಳೂರಿನ ದಿಗೆ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಸೌಲಭ್ಯ ಪ್ರಾರಂಭಿಸಲಾಗುತ್ತದೆ.

ಈ ಸೌಲಭ್ಯದ ಮೂಲಕ ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಆ್ಯಂಜಿಯೋಗ್ರಾಂ ಮತ್ತು ಆ್ಯಂಜಿಯೋಪ್ಲಾಸ್ಟಿ ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿದ್ದು ಯೋಜನೆಗಳನ್ನು ಸದ್ಯದಲ್ಲೇ ಅನು ಷ್ಠಾನ ಗೊಳಿಸಲಾ ಗುವು ದು ಎಂದು ಹೆಗ್ಗಡೆಯವರು ಪ್ರಕಟಿಸಿದರು. ಭಾನುವಾರ / ಸೋಮವಾರಗಳಲ್ಲಿ ಧರ್ಮಸ್ಥಳಕ್ಕೆ ಬಂದು ಚೀಕಿತ್ಸೆಗಾಗಿ ನೆರವು ಕೋರಿದವರಿಗೆ ಸೂಕ್ತ ಸಹಾಯ ನೀಡಲಾಗುತ್ತದೆ.

ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ಆಯುರ್ವೇದ ಆಸ್ಪತ್ರೆ ಹಾಗೂ ಧರ್ಮಸ್ಥಳ, ಪರೀಕ ಮತ್ತು ಬೆಂಗಳೂರಿನಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಪಾರಂಪರಿಕ ಚಿಕಿತ್ಸಾ ಪದ್ದತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೆಗ್ಗಡೆಯವರು ತಿಳಿಸಿದರು.ಈ ಸಂದರ್ಭ ಸಂಸ್ಥೆಯ ಹೊಸನೆಲ ಎಸ್ಟೇಟ್ನ ಪ್ರಬಂಧಕ ಶ್ರೀವರ್ಮ ಸೇರಿದಂತೆ 26 ಹಿರಿಯ ನೌಕರರನ್ನು ಹೆಗ್ಗಡೆಯವರು ಸನ್ಮಾನಿಸಿದರು.

ಡಾ. ಪವನ್ ಬರೆದ ‘ಮುಹೂರ್ತ ಪದವಿ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.ಹೇಮಾವತಿ ವೇದಿಕೆಯಲ್ಲಿ 2. ವೀ.ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾ‌ರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಡಿ. ಶ್ರೇಯಸ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮಾಜಿ ಎಂಎಲ್ಸಿ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.

ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್. ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ವಂದಿಸಿದರು. ಪದ್ಮಶ್ರೀ ಆರ್.ಜೈನ್ ಮತ್ತು ದಿವ್ಯಾ ಕಾರ್ಯಕ್ರಮ ನಿರ್ವಹಿಸಿದರು.

Related posts

ಭಜನೋತ್ಸವ’ ದಿಂದ ಮನೆ ಮನೆಗಳಲ್ಲಿ ಭಜನೆ ಮೊಳಗುವಂತಾಗಲಿ : ಡಾ. ನಿ.ಬೀ. ವಿಜಯ ಬಲ್ಲಾಳ್ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ‘ಭಜನೋತ್ಸವ-2026’ ಕ್ಕೆ ಚಾಲನೆ ;

Voiceoftulunadu

ಲೋಬೊ ಪ್ರೊಡಕ್ಶನ್ ಅನಾವರಣ-‘ವೇಳ್ ಘಡಿ’ ಕೊಂಕಣಿ ಸಿನೆಮಾದ ಪೋಸ್ಟರ್ ರಿಲೀಸ್ : ಕೊಂಕಣಿ ಸಿನೆಮಾಗಳು ಅದೃಷ್ಟಶಾಲಿಗಳಾಗಿವೆ : ಲಾರೇನ್ಸ್ ಡಿ’ಸೋಜಾ (ಸಾಜನ್) ;

Voiceoftulunadu

ನೂತನ ಸಿಎಂ ಡಿಕೆ ಶಿವಕುಮಾರ್ ಭರ್ಜರಿ ಕೊಡುಗೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಯುವ ಸಂಘಗಳಿಗೆ ತಲಾ 10 ಲಕ್ಷ ರೂ. ಅನುದಾನ!

Voiceoftulunadu

Leave a Comment