November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಅಕ್ಟೋಬರ್ 26 ರಂದು ನೂತನ ತುಳು ಸಿನಿಮಾದ ಶೀರ್ಷಿಕೆ ಅನಾವರಣ : ಸಿನಿಮಾದ ನಿರ್ಮಾಣ ನಿರ್ವಹಣೆಯ ನರೇಂದ್ರ ಕೆರೆಕಾಡು ಹೇಳಿಕೆ;

ಮಂಗಳೂರು : ಸಮಾಜ ಸೇವಕ ಹಾಗೂ ಉದ್ಯಮಿ ಲೋಬೋ ಫೌಂಡೇಶನ್‌ನ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಜಾನ್ ವಿಲ್ಸನ್ ಲೋಬೊ ಅವರ ಲೋಬೊ ಪ್ರೋಡಕ್ಷನ್‌ನ ಮೂಲಕ ಸೋನುಲವಿ ಸಿನೇ ಕ್ರಿಯೇಶನ್ಸ್‌ನ ಸಹಯೋಗದಲ್ಲಿ ನೂತನ ತುಳು ಸಿನಿಮಾದ ಶೀರ್ಷಿಕೆಯು ಅಕ್ಟೋಬರ್ 26ರಂದು ಸೋಮವಾರ ಮಂಗಳೂರಿನ ಬಲ್ಮಠದ ಡಾನ್ ಬಾಸ್ಕೋ ಹಾಲ್‌ನಲ್ಲಿ ಸಂಜೆ 5-30ಕ್ಕೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಅನಾವರಣಗೊಳ್ಳಲಿದೆ ಎಂದು ಸಿನಿಮಾದ ನಿರ್ಮಾಣ ನಿರ್ವಹಣೆಯ ನರೇಂದ್ರ ಕೆರೆಕಾಡು ತಿಳಿಸಿದರು.

ಅವರು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಜಾನ್ ವಿಲ್ಸನ್ ಲೋಬೊ ಅವರು ಈಗಾಗಲೇ “ವೇಳ್ ಘಡಿ” ಕೊಂಕಣಿ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದು, ಇದೀಗ ತಮ್ಮದೇ ಬ್ಯಾನರ್ ಮೂಲಕ ಪ್ರಥಮವಾಗಿ ತುಳು ಭಾಷೆಯ ಸಿನಿಮಾವನ್ನು ನಿರ್ಮಿಸುವ ಯೋಜನೆ ರೂಪಿಸಿ, ತುಳುನಾಡಿನ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಆಸರೆಯಾಗಿದ್ದಾರೆ.

ಕಥೆಗೆ ತಕ್ಕಂತೆ ಸಿನಿಮಾಗೆ ಪೂರಕವಾದ ಸೀಮಿತ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, 2027ರಲ್ಲಿ ತೆರೆಕಾಣಲಿದೆ. ಗ್ರಾಮೀಣ ಭಾಗದ ತುಳು ರಂಗಭೂಮಿಯಲ್ಲಿನ ಆಗುಹೋಗುಗಳನ್ನೇ ಕಥೆಯ ರೂಪ ನೀಡಿ, ನವಿರಾದ ಹಾಸ್ಯದೊಂದಿಗೆ ಸಂದೇಶಭರಿತ ಸಿನಿಮಾವಾಗಿದ್ದು, ಸಂಪೂರ್ಣವಾಗಿ ಕುಟುಂಬ ಸಹಿತ ನೋಡಬೇಕಾದ ಸಿನಿಮಾವನ್ನು ನಿರ್ಮಾಣ ಮಾಡಲಿದ್ದೇವೆ ಎಂದು ತಿಳಿಸಿದರು.

ಸಿನಿಮಾದ ಸಹ ನಿರ್ದೇಶಕ ರೋಶನ್ ನೆಲ್ಲಿಗುಡ್ಡೆ ಮಾತನಾಡಿ, ಅಕ್ಟೋಬರ್ 26ರಂದು ನಡೆಯುವ ಶೀರ್ಷಿಕೆ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸನ್ಮಾನ್ಯ ಶ್ರೀ ಯು.ಟಿ.ಖಾದರ್ ಅವರು ಅನಾವರಣಗೊಳಿಸಲಿದ್ದಾರೆ.

ರೆ.ಫಾ. ಆಂಡ್ರೋ ಲಿಯೊ ಡಿಸೋe ಪ್ರಧಾನ ಧರ್ಮಗುರುಗಳು: ಸೈ. ಸೆಬಾಸ್ಟಿಯನ್ ಚರ್ಚ್, ಪೆರ್ಮನ್ನೂರು, ತೊಕ್ಕೊಟ್ಟು ಇವರು ಆಶೀರ್ವಚನ ನೀಡಲಿದ್ದಾರೆ. ಸನ್ಮಾನ್ಯ ಶ್ರೀ ಜಾನ್ ವಿಲ್ಸನ್ ಲೋಬೊ ಮಾಲೀಕರು : ಲೋಬೊ ಪ್ರೋಡಕ್ಷನ್ಸ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಸನ್ಮಾನ್ಯ ಶ್ರೀ ಮಿಥುನ್ ರೈ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಬೆಂಗಳೂರು ಇವರು ಶೂಟಿಂಗ್ ಕ್ಲಾಪ್ ಹಸ್ತಾಂತರ ಮಾಡಲಿದ್ದಾರೆ, ಸನ್ಮಾನ್ಯ ಶ್ರೀ ವಾಲ್ಟರ್ ನಂದಳಿಕೆ ದೈಯ್ಜಿ ವರ್ಲ್ಡ್ ಮೀಡಿಯಾ, ಮಂಗಳೂರು ಇವರು ಕ್ಯಾಮರಾ ಚಾಲನೆ ನೀಡಲಿದ್ದಾರೆ. ಸನ್ಮಾನ್ಯ ಶ್ರೀ ತಾರಾನಾಥ ಗಟ್ಟಿ ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು, ಕರ್ನಾಟಕ ಸರ್ಕಾರ ಇವರು ಸಿನಿಮಾ ತಂತ್ರಜ್ಞರನ್ನು ಗೌರವಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಾಲೆಟ್ ಪಿಂಟೋ, ಅಧ್ಯಕ್ಷರು, ಪರಿಸರ ಮತ್ತು ಪ್ರವಾಸೋದ್ಯಮ ಮಂಡಳಿ, ಬೆಂಗಳೂರುಕರ್ನಾಟಕ ಸರ್ಕಾರ, ಶ್ರೀ ಕಿಶೋರ್ ಡಿ. ಶೆಟ್ಟಿ, ಅಧ್ಯಕ್ಷರು ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರುಶ್ರೀ ವಿಜಯಕುಮಾರ್ ಕೊಡಿಯಾಲ್‌ಬೈಲ್, ಕಲಾಸಂಗಮ, ಮಂಗಳೂರು, ಶ್ರೀ ದೇವದಾಸ್ ಕಾಪಿಕಾಡ್ ಚಾಪರ್‍ಕ ಕಲಾವಿದರು, ಮಂಗಳೂರು, ಶ್ರೀ ವಸಂತ ಬೆರ್ನಾಡ್, ಅಧ್ಯಕ್ಷರು ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ (ನಿ), ಹಳೆಯಂಗಡಿ, ಶ್ರೀ ಫ್ರಾನ್ಸಿಸ್ ಲೋಬೊ, ಮಾಲಕರು, ಡೀನೆಟ್-ಇಂಟರ್ ನೆಟ್ ಸರ್ವಿಸ್, ಪ್ರೈ.ಲಿ.ಶಕ್ತಿನಗರ, ಕುಲಶೇಖರ. ಶ್ರೀ ಕೆ.ಭುವನಾಭಿರಾಮ ಉಡುಪ, ಪ್ರಧಾನ ಸಂಪಾದಕರು, ಯುಗಪುರುಷ ಕಿನ್ನಿಗೋಳಿ, ತುಳುನಾಡ ಮಾಣಿಕ್ಯ ಶ್ರೀ ಅರವಿಂದ ಬೋಳಾರ್, ತುಳು-ಕನ್ನಡ ಚಲನಚಿತ್ರ ಕಲಾವಿದರು.ಶ್ರೀ ಈಶ್ವರ್ ಕೋಡಿಕಲ್, ಎಕ್ಸ್‌ಪ್ರೆಶನ್ ಆರ್ಟ್ಸ್, ಮಂಗಳೂರು ಇವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನಿರ್ದೇಶಕ ದೇವಿಪ್ರಕಾಶ್ ಎಸ್, ಮಾತನಾಡಿ, ತುಳು ಸಿನಿಮಾವನ್ನು ಜಾನ್ ವಿಲ್ಸನ್ ಲೋಬೊ ಅವರು ತಮ್ಮ ಲೋಬೊ ಪ್ರೋಡಕ್ಷನ್ಸ್‌ನ ಮೂಲಕ ನಿರ್ಮಿಸುತ್ತಿದ್ದಾರೆ, ಈಗಾಗಲೇ ಕನ್ನಡ-ತುಳು-ತೆಲುಗು ಸಿನಿಮಾದಲ್ಲಿ ಕಲಾನಿರ್ದೇಶಕರಾಗಿ, ನಟರಾಗಿ ಗುರುತಿಸಿಕೊಂಡಿರುವ ನಾನು, ಸಿನಿಮಾದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಜವಬ್ದಾರಿ ಹೊತ್ತಿದ್ದೇನೆ. ಗೀತಾ ಸಾಹಿತ್ಯವನ್ನು ವಿಜಯಕುಮಾರ್ ಕೊಡಿಯಾಲ್‌ಬೈಲ್ ರಚಿಸಲಿದ್ದಾರೆ.

ಸಹ-ನಿರ್ದೇಶನದಲ್ಲಿ ರೋಶನ್ ನೆಲ್ಲಿಗುಡ್ಡೆ, ಸಂಗೀತ ಗಗನ್ ಸುವರ್ಣ ಮೂಲ್ಕಿ, ಛಾಯಾಗ್ರಹಣ ಗಜೇಂದ್ರ ಕೋಲಾರ, ನಿರ್ಮಾಣ ನಿರ್ವಹಣೆಯಲ್ಲಿ ಪತ್ರಕರ್ತ-ರಂಗಭೂಮಿ ಕಲಾವಿದ ನರೇಂದ್ರ ಕೆರೆಕಾಡು ತೊಡಗಿಸಿಕೊಂಡಿದ್ದಾರೆ.

ಕಲಾವಿದರಾಗಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ನರೇಂದ್ರ ಕೆರೆಕಾಡು, ರೋಶನ್ ನೆಲ್ಲಿಗುಡ್ಡೆ, ಯುವರಾಜ್, ಸುರೇಶ್ ಶೆಟ್ಟಿಗಾರ್ ಕೆರೆಕಾಡು, ಜೆರೋಂ ಮೋರಸ್, ಸುನಿಲ್ ಡಿಸೋಜ ನೆಲ್ಲಿಗುಡ್ಡೆ, ಲಿಯೋ ರಾಣಿಪುರ, ಶರತ್ ಶೆಟ್ಟಿ ಕಿನ್ನಿಗೋಳಿ, ರಾಧಿಕಾ ಪೂಜಾರಿ, ಲೂಸಿ ಅರಾನ್ಹ, ಹರೀಶ್ ಕೋಟ್ಯಾನ್ ಪಡುಪಣಂಬೂರು, ಲಿಸ್ಟನ್ ಫಲಿಮಾರು, ಕಾವ್ಯ ಕೊಡೆತ್ತೂರು, ಹರಿಪ್ರಸಾದ್ ನಂದಳಿಕೆ, ಭಗವಾನ್ ಸುರತ್ಕಲ್, ಚಿತ್ರಲೇಖ, ಸಂತೋಷ್ ಕಾರ್ಕಳ, ಸ್ಯಾಂಡ್ರಾ ಮಂಗಳೂರು, ಪೂರ್ಣಿಮಾ ಸುರತ್ಕಲ್, ಜಯಕುಮಾರ್ ಕುಬೆವೂರು, ಸಾಕ್ಷಿ ಗುರುಪುರ, ಜೆ.ಪಿ.ಕೊರಿಂಗೆಟ್ಟು, ಉಮೇಶ್ ಬಂಟ್ವಾಳ, ಗಿರೀಶ್ ಪೆರಿಯಡ್ಕ, ಧರ್ಮಾನಂದ ತೋಕೂರು, ಉದಯಕುಮಾರ್ ಆಳ್ವಾ, ಸುರೇಶ್ ಬಿ.ವರ್ಕಾಡಿ, ಸುರೇಶ್ ಸುಂಕದಕಟ್ಟೆ, ಮೇಘ ರಾಣಿ ಕುದ್ರೋಳಿ, ಡಿ.ಕೆ.ಆಚಾರ್ಯ, ಕಿರಣ್ ಕಲಾಂಜಲಿ, ಯಶನ್ ಮಂಗಳೂರು, ಸಂತೋಷ್‌ಕುಮಾರ್ ಮಂಗಲ್ಪಾಡಿ, ಸಹಿತ ರಂಗಭೂಮಿಯ ಕಲಾವಿದರು ಅಭಿನಯಿಸಲಿದ್ದಾರೆ.

ಮಂಗಳೂರು, ಮೂಲ್ಕಿ, ಕಿನ್ನಿಗೋಳಿ ಸಹಿತ ಗ್ರಾಮೀಣ ಭಾಗದಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿಕಲಾವಿದ ಸುನಿಲ್ ಡಿಸೋಜಾ ನೆಲ್ಲಿಗುಡ್ಡೆ, ಸುರೇಶ್ ಬಿ. ವರ್ಕಾಡಿ ಅಧ್ಯಕ್ಷರು ಕಲಾಭಿ ಸಂಸ್ಥೆ, ಮಂಗಳೂರು.ಆರೀಫ್, ಪಬ್ಲಿಸಿಟಿ ಕೋ-ಆರ್ಡಿನೇಟರ್ ಉಪಸ್ಥಿತರಿದ್ದರು.

Related posts

ಉಡುಪಿ ಪರಿಸರಸ್ನೇಹಿ ವಸ್ತುಗಳ ಮಾರಾಟ ಶಾಪ್ “ವೀಕೆ ಸೊಲ್ಯೂಷನ್ಸ್” ಶುಭಾರಂಭಮಳಿಗೆ ಉದ್ಘಾಟಿಸಿದ ನ್ಯಾಯವಾದಿ ಎಂ. ಶಾಂತಾರಾಮ ಶೆಟ್ಟಿ;

Voiceoftulunadu

ಮಂಗಳೂರಿನ ಬಿಜೈ ನ್ಯೂ ರೋಡ್‌ನಲ್ಲಿ ಗೇಲ್ ಗ್ಯಾಸ್ ಪೈಪ್‌ಲೈನ್ ಸೋರಿಕೆ; ಸ್ಥಳೀಯರಲ್ಲಿ ಆತಂಕ ;

Voiceoftulunadu

ಯುವವಾಹಿನಿ ಪಡುಬಿದ್ರಿ ಘಟಕದ ನೂತನ ಅಧ್ಯಕ್ಷರಾಗಿ ನಿಖಿಲ್ ಪೂಜಾರಿ ಆಯ್ಕೆ :ಆಗಸ್ಟ್ 30ರಂದು ಪದಗ್ರಹಣ, ಪ್ರತಿಭಾ ಪುರಸ್ಕಾರ, ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ ;

Voiceoftulunadu

Leave a Comment