November 3, 2026
Uncategorizedಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಪೂರ್ಣಿಮಾ ಜನಾರ್ದನ್ ರವರ ಅಂಚೆ ಚೀಟಿ ಪ್ರದರ್ಶನ, ಉದ್ಘಾಟನೆ : ಕೊಡವೂರಿನ ಭಾಮಾ ಫಿಲಾಟಲಿ ಗ್ಯಾಲರಿಯಲ್ಲಿ “ಆಧ್ಯಾತ್ಮಿಕ – ಸಾಂಸ್ಕೃತಿಕ ಫಿಲಾಟಲಿ ಪಯಣ” ;

ವರದಿ /ಚಿತ್ರ : ಈ ಮೀಡಿಯಾ

ಕೊಡವೂರು: ಭಾರತೀಯ ಅಂಚೆ ಉಡುಪಿ ಅಂಚೆ ವಿಭಾಗ, ಉಡುಪ ರತ್ನ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ತಾಲೂಕು ಪರಿಷತ್ ಉಡುಪಿ ಘಟಕ ಇದರ ಸಹಯೋಗದೊಂದಿಗೆ ಬನ್ನಂಜೆ ಉಪ ಅಂಚೆ ಕಚೇರಿಯ ಅಂಚೆ ಪಾಲಕಿ ಶ್ರೀಮತಿ ಪೂರ್ಣಿಮಾ ಜನಾರ್ದನ್ ಅವರ “ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಫಿಲಾಟಲಿ ಪಯಣ” ಅಂಚೆ ಚೀಟಿ ಪ್ರದರ್ಶನ ಕಾರ್ಯಕ್ರಮ ಕೊಡವೂರಿನಭಾಮಾ ಫಿಲಾಟಲಿ ಗ್ಯಾಲರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಅಂಚೆ ವಿಭಾಗದ ಅಧೀಕ್ಷಕರಾದ ಜಯರಾಮ ಶೆಟ್ಟಿ ಉದ್ಘಾಟಿಸಿದರು.ಅವರು ಮಾತನಾಡಿ, ಅಂಚೆ ವಿಭಾಗವು ಆಧುನಿಕ ಜಾಲತಾಣದ ಈ ಯುಗದಲ್ಲೂ ವಿವಿಧ ರೀತಿಯ ಹೊಸ ಆಯಾಮಗಳಿಗೆ ತೆರೆದುಕೊಂಡು ಜನಸ್ನೇಹಿ ಇಲಾಖೆಯಾಗಿ ಗುರುತಿಸಿಕೊಂಡಿದೆ. ಯುವ ಜನಾಂಗಕ್ಕೆ ಸೇವೆಗಳನ್ನು ಪರಿಚಯ ಹಾಗೂ ಫಿಲಾಟೆಲಿ ವಿಷಯದ ಅರಿವು ಮೂಡಿಸುವ ಸಲುವಾಗಿ ಫಿಲಾಟೆಲಿ ಪಾಸ್ ಪೋರ್ಟ್ ನ್ನು ಪರಿಚಯಿಸಿದ್ದೇ ಅಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ಅಂಚೆ ಇಲಾಖೆಯ ಇತರ ಸೇವೆಗಳ ಬಗ್ಗೆ ಸೂಕ್ತ ಪ್ರಚಾರ ನಡೆಸಲಾಗುತ್ತಿದೆ.

ಸಂಗ್ರಹಣ ಹವ್ಯಾಸವು “ಹವ್ಯಾಸಗಳರಾಜ” ಎಂದು ಕರೆಸಲ್ಪಡುತ್ತದೆ. ಉತ್ತಮ ಹವ್ಯಾಸಗಳು ನಮ್ಮನ್ನು ಎತ್ತರಕ್ಕೆ ಏರಿಸಲು ಸಹಕಾರಿ ಎಂದರು.ಮುಖ್ಯ ಅತಿಥಿ ಕೆಎಂಸಿ ಮಣಿಪಾಲದ ಎಲುಬು ಮತ್ತು ಮೂಳೆ ರೋಗ ವಿಭಾಗ ತಜ್ಞ ಹಾಗೂ ಮುಖ್ಯಸ್ಥ ಮತ್ತು ಮಣಿಪಾಲ ಫಿಲಾಟಲಿ ಮತ್ತು ನ್ಯೂಮಿಸ್ ಮ್ಯಾಟಿಕ್ ಕ್ಲಬ್ (ಎಮ್ ಪಿ ನ್ ಸಿ) ಅಧ್ಯಕ್ಷ ಡಾ. ಕಿರಣ್ ಆಚಾರ್ಯ ಮಾತನಾಡಿ, ಅಂಚೆ ಚೀಟಿ ಸಂಗ್ರಹಣ ಹವ್ಯಾಸವು ನಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಲು ಸಹಕಾರಿ ಅದರಲ್ಲಿಯೂ ಕೂಡ ಅಲ್ಲೀಮರ್ ನಂತಹ ಕಾಯಿಲೆಗಳು ಬರದಂತೆ ತಡೆಯಲು ಸಾಧ್ಯ. ನಾವೆಲ್ಲರೂ ಕೂಡ ಒಂದಲ್ಲ ಒಂದು ಹವ್ಯಾಸವನ್ನು ಬೆಳೆಸಿಕೊಂಡರೆ ನಮ್ಮ ಬದುಕನ್ನು ಉತ್ತಮವಾಗಿ ಬದುಕಬಹುದು ಎಂದರು.

ಈ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ ಮಾತನಾಡಿ, ಪೂರ್ಣಿಮಾ ಮತ್ತು ಜನಾರ್ದನ್ ಕೊಡವೂರು ಉಡುಪಿ ಜಿಲ್ಲೆಯ ಆಸ್ತಿಯಾಗಿದ್ದಾರೆ. ಯಾವುದೇ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಲು ಇವರ ಸಹಕಾರ ಅತ್ಯಗತ್ಯ ಅವರಿಗೆ ಶುಭವಾಗಲಿ ಎಂದು ಆಶಿಸಿದರುಕೊಡವೂರು ಶಂಕರ ನಾರಾಯಣದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಮತ್ತು ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಮಂಜುನಾಥ್ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಖ್ಯಾತ ಅಂಚೆ ಚೀಟಿ ಸಂಗ್ರಾಹಕ ಅಮ್ಮುಂಜೆ ಅವರನ್ನು ನಾಗೇಂದ್ರ ನಾಯಕ್ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪೂರ್ಣಿಮಾ ಜನಾರ್ದನ್ ಮತ್ತು ಜನಾರ್ದನ್ ಕೊಡವೂರು ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೌರವಿಸಲಾಯಿತು.

ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಚಂದ್ರ ನಾಯ್ ಹಾಗೂ ಕಸಾಪ ಉಡುಪಿ ತಾಲೂಕು ಪದಾಧಿಕಾರಿಗಳಾದ ರಂಜನಿ ವಸಂತ್, ಸತೀಶ್ ಕೊಡವೂರು, ಆರ್ ವಸಂತ್ ಕೊಡವೂರು ಬ್ರಾಹ್ಮಣ ಮಹಾಸಭಾ ಸದಸ್ಯರು ಉಪಸ್ಥಿತಿತರಿದ್ದರು.ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ಜನಾರ್ದನ್ ಕೊಡವೂರು ಸ್ವಾಗತಿಸಿದರು. ಸಾಹಿತಿ ಡಾ. ಕಾತ್ಯಾಯನಿ ಕುಂಜಿಬೆಟ್ಟು ರಂಗ ಗೀತೆ ಹಾಡಿದರು. ಅಂಚೆ ಚೀಟಿ ಸಂಗ್ರಾಹಕಿ ಪೂರ್ಣಿಮಾ ಜನಾರ್ದನ್ ಧನ್ಯವಾದವಿತ್ತರು.

Related posts

ಹಿರಿಯ ರಂಗ ಕಲಾವಿದೆ ಚಂದ್ರಪ್ರಭಾ ಉದ್ಯಾವರ ನಿಧನ ;

Voiceoftulunadu

ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗೆ ತೃತೀಯ ಸ್ಥಾನ ;

Voiceoftulunadu

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಖತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ;

Voiceoftulunadu

Leave a Comment