November 3, 2026
Uncategorizedಜಿಲ್ಲಾ ಸುದ್ದಿರಾಜಕೀಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಹೆಜಮಾಡಿ : ಬೃಹತ್ ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ : ಹೆಜಮಾಡಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ;

ವರದಿ/ ಚಿತ್ರ ::ಈ ಮೀಡಿಯಾ

ಹೆಜಮಾಡಿ : ಸಮಾಜಮುಖಿ ಸೇವೆ,ಆರೋಗ್ಯ ಜಾಗೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಉದ್ದೇಶದಿಂದ ಉತ್ತೇಜಿಸುವ ಆರಂಭಗೊಂಡ ವಿಹಾನ್ ಚಾರಿಟೇಬಲ್ ಟ್ರಸ್ಟ್ (ರಿ.), ಹೆಜಮಾಡಿ ಸಂಸ್ಥೆಯ ಉದ್ಘಾಟನಾ ಸಮಾರಂಭದ ಅಂಗವಾಗಿ ಹೆಜಮಾಡಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು.ಅವರು ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಆರೋಗ್ಯದ ಸಮಸ್ಯೆಗಳಿಂದ ಬಳಲುವವರಿಗೆ ನೆರವಾಗುವುದು, ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ವೈದ್ಯಕೀಯ ತಲುಪಿಸುವುದು ಸೇವೆಗಳನ್ನು ಶ್ಲಾಘನೀಯ ಕಾರ್ಯವಾಗಿದೆ.

ಇಂತಹ ಜನಪರ ಕಾರ್ಯಕ್ರಮಗಳು ಸಮಾಜದಲ್ಲಿಸಹಕಾರ ಮತ್ತು ಮಾನವೀಯತೆಯ ಮನೋಭಾವವನ್ನು ಬಲಪಡಿಸುತ್ತವೆ ಎಂದು ಹೇಳಿದರು.ಆಶೀರ್ವಚನ ನೀಡಿದ ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಮಾನವ ಸೇವೆಯೇ ನಿಜವಾದ ಸೇವೆ ಎಂಬ ಸಂದೇಶವನ್ನು ಸಾರುತ್ತಾ, ಸಮಾಜದ ನೋವಿಗೆ ಸ್ಪಂದಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು.

ಸೇವಾ ಕಾರ್ಯಗಳು ಜಾತಿ, ಧರ್ಮ ಹಾಗೂ ಆರ್ಥಿಕ ಭೇದಗಳನ್ನು ಮೀರಿ ಎಲ್ಲರಿಗೂ ತಲುಪಿದಾಗ ಸಮಾಜದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಮಾನವೀಯತೆ ವೃದ್ಧಿಯಾಗುತ್ತದೆ ಎಂದು ಆಶಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷೆ ದೀಕ್ಷಾ ಕೆ. ವಹಿಸಿದ್ದರು.

ಕಾರ್ನಾಡು ಇಮ್ಯಾಕ್ಯುಲೇಟ್ ಕನ್ಸೆಪ್ಟನ್ ಚರ್ಚ್‌ ಧರ್ಮಗುರು ರೆ. ಫಾ. ಅಂಟನಿ ಶೇರಾ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜಿ. ಶೆಟ್ಟಿ, ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಯಶೋಧ ಪಡುಬಿದ್ರಿ, ಕಾಪು ತಾಲೂಕು ಭೂ ನ್ಯಾಯಮಂಡಳಿ ಸದಸ್ಯ ರಮೀಜ್ ಹುಸೇನ್, ಕಟಪಾಡಿ ಶ್ರೀ ವಿಶ್ವನಾಥಕ್ಷೇತ್ರದ ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ರವಿ ಕೋಟ್ಯಾನ್, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ಹಾಗೂ ಜೈ ಕರ್ನಾಟಕ ಯುವ ಸಂಸ್ಥೆಯ ಅಧ್ಯಕ್ಷ ಪ್ರಬೋಧ ಚಂದ್ರ ಹೆಜಮಾಡಿ ಸಂದರ್ಭೋಚಿತವಾಗಿ ಮಾತನಾಡಿ, ಟ್ರಸ್ಟ ಸಮಾಜಮುಖಿ ಪ್ರಯತ್ನಕ್ಕೆ ಶುಭಹಾರೈಸಿದರು.ಗ್ರಾಮ ಸದಸ್ಯೆ ಈ ಸಂದರ್ಭ ಅಬ್ದುಲ್ ಅಜೀಜ್ ಹೆಜಮಾಡಿ, ಹೆಜಮಾಡಿ ಪಂಚಾಯತ್ ಮಾಜಿ ನಿರ್ಮಲಾ, ಹೆಜಮಾಡಿ ಸಂಘದ ಕರ್ಕೇರ, ಬಿಲ್ಲವರ ಉಪಾಧ್ಯಕ್ಷ ಸುಧೀರ್ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಾರದ ಪ್ರಸಾದ್ ಹಾಗೂ ಸಾಗರ್ ಆಸ್ಪತ್ರೆಯ ನೇತ್ರ ವಿಭಾಗದ ವೈದ್ಯಾಧಿಕಾರಿ ಡಾ. ಸಾಗರ್ ಉಪಸ್ಥಿತರಿದ್ದರು.

ರಕ್ತನಿಧಿ ಕೇಂದ್ರದದೀಕ್ಷಾ ಕೆ. ಸ್ವಾಗತಿಸಿದರು. ವಿಶಾಲ್ ಬಂಗೇರ ವಂದಿಸಿದರು. ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

Related posts

ಕೃತಕ ಬುದ್ಧಿಮತ್ತೆ (AI): ನಮ್ಮ ಮನೆಯ ಹೊಸ ಬುದ್ಧಿವಂತ ಸಹಾಯಕ : (ಡಾ.) ತೇಜಸ್ವಿನಿ ಎಚ್‌ ಶ್ರೀ ಮಧ್ಯ ವಾದಿರಾಜ ತಾಂತ್ರಿಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯವರಿಂದ ವಿಶೇಷ ಲೇಖನ ;

Voiceoftulunadu

ಕುಲಾಲ ಫ್ಯಾಮಿಲಿ ಯುಎಇ ವತಿಯಿಂದ ಯಶಸ್ವಿ ರಕ್ತದಾನ ಶಿಬಿರ;

Voiceoftulunadu

ಪುತ್ತೂರು ವಲಯ ಸಂಚಾಲಕರಾಗಿ ಮನೋಹರ ರೈ, ಮನವಳಿಕೆ ಗುತ್ತು, ನೇಮಕ ;

Voiceoftulunadu

Leave a Comment