28.5 C
ಮಂಗಳೂರು
September 4, 2026
Uncategorizedಅಂತಾರಾಷ್ಟ್ರೀಯಆರೋಗ್ಯಉದ್ಯೋಗ/ಶಿಕ್ಷಣಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸ

ಕುಲಾಲ ಫ್ಯಾಮಿಲಿ ಯುಎಇ ವತಿಯಿಂದ ಯಶಸ್ವಿ ರಕ್ತದಾನ ಶಿಬಿರ;

ವರದಿ/ಚಿತ್ರ:ಸಂತೋಷ್ ಶೆಟ್ಟಿ ಪೊಳಲಿ

ದುಬೈ: ಕುಲಾಲ ಫ್ಯಾಮಿಲಿ ಯುಎಇ ವತಿಯಿಂದ JULY 19 ರಂದು ಆಯೋಜಿಸಲಾದ “Donate Blood – Save Life” ಯು ಎ ಇ ಯ ರಕ್ತದಾನ ಶಿಬಿರದ ಆಯೋಜಕರಾದ ಬಾಲಕೃಷ್ಣ ಸಾಲಿಯಾನ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಿತು.

ಕುಲಾಲ ಸಮಾಜ ಯುಎಇ ತಂಡದ ಸಹಕಾರದೊಂದಿಗೆ ಆಯೋಜಿಸಿದ್ದ ಶಿಬಿರದಲ್ಲಿ ಸುಮಾರು 50 ಮಂದಿ ಸ್ವಯಂಪ್ರೇರಿತ ರಕ್ತದಾನಿಗಳು ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು. ಸಮಾಜಮುಖಿ ಕಾರ್ಯಕ್ರಮಕ್ಕೆ ಸದಸ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಶಿಬಿರದ ಯಶಸ್ವಿ ಆಯೋಜನೆಗೆ ಶ್ರಮಿಸಿದ ಯುಎಇ ರಕ್ತದಾನಿಗಳ ಸಂಘಟಕರಾದ ಬಾಲಕೃಷ್ಣ ಸಾಲಿಯಾನ್ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಂತೋಷ್ ಶೆಟ್ಟಿ ಪೊಳಲಿ ಅವರನ್ನು ಕುಲಾಲ ಫ್ಯಾಮಿಲಿ ಯುಎಇ ವತಿಯಿಂದ ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಸನ್ಮಾನಿಸಲಾಯಿತು.

ಕುಲಾಲ ಫ್ಯಾಮಿಲಿ ಯುಎಇ ಪರವಾಗಿ ವಿಟ್ಟಲ್ ಮೂಲ್ಯ ಹಾಗೂ ನಿಶ್ ಸುನಿಲ್ ಕುಲಾಲ್ ಅವರು ಗೌರವ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಕುಲಾಲ ಸಮಾಜದ ಸರ್ವ ಸದಸ್ಯರು ಉಪಸ್ಥಿತರಿದ್ದು, ರಕ್ತದಾನದ ಮಹತ್ವವನ್ನು ಪ್ರತಿಪಾದಿಸಿ, ಇಂತಹ ಸಮಾಜಮುಖಿ ಸೇವಾ ಕಾರ್ಯಕ್ರಮಗಳು ಮುಂದೆಯೂ ನಿರಂತರವಾಗಿ ನಡೆಯುವಂತೆ ಆಶಯ ವ್ಯಕ್ತಪಡಿಸಿದರು. ಅಕ್ಷಯ್ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿ,ವಂದಿಸಿದರು, ಮುಖೇಶ್ ಕುಲಾಲ್ ಸಹಕರಿಸಿದರು.

Related posts

ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಮಲ್ಲಿಕಾ ಶೆಟ್ಟಿ ಅವರಿಗೆ ಡಾಕ್ಟರೇಟ್ ಪ್ರಧಾನ;

Voiceoftulunadu

ಮೂಡುಬಿದಿರೆ: ಫ್ರೆಂಡ್ಸ್ ಇಲೆವೆನ್ ಬೆದ್ರ ಸಂಘಟನೆಯ ನೂತನ ಸಾರಥಿಗಳಾಗಿ ರಘುವೀರ್ ದೇವಾಡಿಗ ಮತ್ತು ಅಶ್ವಿನ್ ಜೆ. ಪಿರೇರಾ ಆಯ್ಕೆ ;

Voiceoftulunadu

ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯ ಬೆಲ್ಮಣ್ ವಲಯದಿಂದ ಸಾಮೂಹಿಕ ವರಮಹಾಲಕ್ಷ್ಮಿಪೂಜೆ ಧಾರ್ಮಿಕ ಸಭಾ ಅಧ್ಯಕ್ಷತೆ ವಹಿಸಿದ ಪೂಜಾ ಸಮಿತಿಯ ಅಧ್ಯಕ್ಷ ಸುರೇಶ್ ಭಟ್ ;

Voiceoftulunadu

Leave a Comment