28.5 C
ಮಂಗಳೂರು
September 4, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜ್ಯ/ದೇಶವಾಣಿಜ್ಯ/ಉದ್ಯಮಸ್ಥಳೀಯ/ಪ್ರಾದೇಶಿಕ ಸುದ್ದಿ

ಬೆಂಗಳೂರಿನ ಆರ್ ಟಿ ನಗರದಲ್ಲಿ ಬೇಕರಿಗೆ ಹಲ್ಲೆ, ದಾಂಧಲೆ – ಎಫ್ ಐ ಆರ್ ದಾಖಲು ;

ವರದಿ /ಚಿತ್ರ : ವಿನೋದ್ ಶೆಟ್ಟಿ ಉಡುಪಿ

ಬೆಂಗಳೂರು : ಆರ್ ಟಿ ನಗರದಲ್ಲಿ ಸಾಲ ಕೊಡಲು ನಿರಾಕರಿಸಿದಕ್ಕೆ ಸಣ್ಣ ಬೇಕರಿ ಮಾಲೀಕರ ಮೇಲೆ ಹಲ್ಲೆ ನಡೆದಿದೆ.

ಘಟನೆ ವಿವರ: ದಿನಾಂಕ 19/7/2026 ರಂದು ಆರ್ ಟಿ ನಗರದ “ಮಂಜುನಾಥ ಕಾಂಡಿಮೆಂಟ್ಸ್” ಬೇಕರಿಗೆ ಬಂದ 2 ಪುಂಡರು ಸಾಲ ಕೇಳಿದ್ದಾರೆ. ಮಾಲೀಕರಾದ ಚಂದ್ರಶೇಖರ್ ಶೆಟ್ಟಿ ಮತ್ತು ರೂಪ ಶೆಟ್ಟಿ ಅವರು ನಿರಾಕರಿಸಿದಾಗ, ಆಕ್ರೋಶಗೊಂಡ ಅವರು ಇನ್ನೂ ಕೆಲವು ರೌಡಿಗಳನ್ನು ಕರೆತಂದು ಅಂಗಡಿಯಲ್ಲಿ ದಾಂಧಲೆ ನಡೆಸಿದ್ದಾರೆ.

ಹಲ್ಲೆಗೈದಿದ್ದಲ್ಲದೆ ಅಂಗಡಿಯ ಸಂಪೂರ್ಣ ಸಾಮಾನುಗಳನ್ನು ಧ್ವಂಸ ಮಾಡಿದ್ದಾರೆ.

ದೂರು ಮತ್ತು ಕ್ರಮ: ಇದೇ ವಿಷಯವಾಗಿ ಇಂದು ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟದ ನೇತೃತ್ವದಲ್ಲಿ ದೂರು ನೀಡಲಾಗಿದೆ.ಒಕ್ಕೂಟದ ರಾಜ್ಯಾಧ್ಯಕ್ಷ ಡಿ ಬಿ ಪ್ರತಾಪ್ ಶೆಟ್ಟಿ, ಉಪಾಧ್ಯಕ್ಷರಾದ ಭೋಜರಾಜ ಶೆಟ್ಟಿ, ಸುನಿಲ್ ಶೆಟ್ಟಿ ಜೆ, ಚಂದ್ರಶೇಖರ್ ಶೆಟ್ಟಿ, ಸುಕೇಶ್ ಶೆಟ್ಟಿ ಜೆ ಮತ್ತು ತಂಡ ಅಂಗಡಿ ಮಾಲೀಕರೊಂದಿಗೆ ಠಾಣೆಗೆ ತೆರಳಿದ್ದರು.

ಪೊಲೀಸರು ತಕ್ಷಣವೇ FIR ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಹಲ್ಲೆಯಲ್ಲಿ ಗಾಯಗೊಂಡ ಅಂಗಡಿ ಮಾಲೀಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ಕರ್ನಾಟಕ ಪ್ರೆಸ್ ಕ್ಲಬ್ : ನಗರ, ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ, ಅಧಿಕೃತ ಆದೇಶ ವಿತರಣೆ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ರಮೇಶ್ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ನೇಮಕ ಪ್ರಕ್ರಿಯೆ ;

Voiceoftulunadu

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ಆದೇಶ: ಶುಲ್ಕ ಪಾವತಿಸಿದವರಿಗೆ 15 ದಿನಗಳಲ್ಲಿ ಮರುಪಾವತಿ

voiceoftulunadu

ರೋಟರಿ ಕ್ಲಬ್ ಕಲ್ಯಾಣಪುರ ವತಿಯಿಂದ ಪರೀಕ್ಷಾ ಪೂರ್ವ ತಯಾರಿಯ ಉಪನ್ಯಾಸ ಕಾರ್ಯಕ್ರಮ: ವಿನಯ ಕುಮಾ‌ರ್ ಕಬ್ಬಾಡಿ ಅವರಿಂದ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಎಂಬ ವಿಷಯದ ಕುರಿತು ಮಾಹಿತಿ ;

Voiceoftulunadu

Leave a Comment