November 3, 2026
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರ ಕೊಡುಗೆ ಅನನ್ಯ: ಸಿಎ ಗೋಪಾಲಕೃಷ್ಣ ಭಟ್ ‘ಅತ್ಯುತ್ತಮ ಅಡ್ಮಿನಿಸ್ಟೇಷನ್‌ ಪ್ರಶಸ್ತಿ’ ಸ್ವೀಕರಿಸಿದ ಭಟ್ ;

ವರದಿ / ಚಿತ್ರ : ಈ ಮೀಡಿಯಾ

ಉಡುಪಿ : “ಶಿಕ್ಷಕನಾಗಿ ನಿರಂತರವಾಗಿ ಕಲಿಯುತ್ತಾ, ಕಲಿತದ್ದನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಪ್ರಯತ್ನ ಮಾಡುತ್ತಿದ್ದೇನೆ. ನನಗೆ ದೊರೆತ ಈ ಗೌರವವು ಸಾಧನೆಗೆ ಸಿಕ್ಕ ಪ್ರಶಸ್ತಿಗಿಂತಲೂ ಹೆಚ್ಚಾಗಿ, ನನ್ನ ಕರ್ತವ್ಯಕ್ಕೆ ಸಿಕ್ಕಿದ ದೊಡ್ಡ ಜವಾಬ್ದಾರಿಯಾಗಿದೆ,” ಎಂದು ತ್ರಿಶಾ ಗ್ರೂಪ್ ಆಫ್ ಇನ್ಸಿಟ್ಯೂಷನ್ನ ಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಆಯೋಜಿಸಿದ್ದ ‘ಪ್ರೇರಣಾ ದಿವಸ್-26’ ಕಾರ್ಯಕ್ರಮದಲ್ಲಿ ‘ಅತ್ಯುತ್ತಮ ಅಡ್ಮಿನಿಸ್ಟೇಷನ್ ಪ್ರಶಸ್ತಿ। ಸ್ವೀಕರಿಸಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮಾಜವನ್ನು ಉದ್ದೇಶಿಸಿ ಅವರು ಪ್ರೇರಣಾದಾಯಿ ಮಾತುಗಳನ್ನಾಡಿದರು.”ಸಂಸ್ಕೃತಿ, ಆಹಾರ, ಆರೋಗ್ಯ ಮತ್ತು ಮಾನವೀಯತೆ ಉಳಿಯುವುದಿಲ್ಲವೇನೋ ಎಂಬ ಸಮಾಜದ ಆತಂಕಕ್ಕೆ ಶಿಕ್ಷಕರೇ ಭರವಸೆಯಾಗಬೇಕು.

ಒಳ್ಳೆಯದನ್ನು ಬಯಸುವ ಕೋಟ್ಯಾಂತರ ಕಣ್ಣುಗಳು ಹಾಗೂ ಕೆಟ್ಟದ್ದನ್ನು ಬೇಡವೆನ್ನುವ ನೂರಾರು ಹೃದಯಗಳ ನಡುವಿನ ವ್ಯತ್ಯಾಸವನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿಕೊಡಬೇಕು. ಸಮಸ್ಯೆಗಳನ್ನು ಮಾತ್ರ ಹೇಳದೆ, ಪರಿಹಾರದ ಸುಲಭ ಮಾರ್ಗಗಳನ್ನು ತೋರಿಸುವ ದರ್ಶಕರಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಶಿಕ್ಷಕ ವೃತ್ತಿ ಸಾರ್ಥಕವಾಗುತ್ತದೆ,” ಎಂದರು.

Related posts

ಪ್ರತೀ ಮತದಾರರ ಹಕ್ಕನ್ನು ಪ್ರತಿನಿಧಿಸೋಣ : ಇನಾಯತ್ ಅಲಿ;

Voiceoftulunadu

ಮಣಿಪಾಲ ಕೆಎಂಸಿಯಲ್ಲಿ ಪ್ರಣವ್ ಹೆಗ್ಡೆ ಕುಟುಂಬದಿಂದ ಅಂಗಾಂಗ ದಾನ, ಹಲವರಿಗೆ ಜೀವದಾನ ಪ್ರಣವ್‌ ಹೆಗ್ಡೆ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ;

Voiceoftulunadu

ರಾಷ್ಟ್ರೀಯ ಸಿನಿಮಾ ಪುರಸ್ಕಾರ,ಕನ್ನಡಕ್ಕೆ 4, ತುಳುಗೆ 1 ಗೌರವಕನ್ನಡಕ್ಕೆ ಮೊದಲ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ,ಮಿಥ್ಯ ಚಿತ್ರಕ್ಕೆ ರೂಪಶ್ರೀಗೆ ಅತ್ಯುತ್ತಮ ಪೋಷಕ ನಟಿ ಗೌರವ , ಆತಿಶ್ ಶೆಟ್ಟಿ ಅತ್ಯುತ್ತಮ ಬಾಲ ನಟಮಿಥ್ಯ ಅತ್ಯುತ್ತಮ ಚಿತ್ರ ,ಉತ್ತಮ ಪುಸ್ತಕ: ಕೆಂಜಾರು ಪ್ರದೀಪ್ ಶೆಟ್ಟಿ ,ಉತ್ತಮ ತುಳು ಚಿತ್ರ ಇಂಬು ;

Voiceoftulunadu

Leave a Comment