September 5, 2026
Uncategorizedಕಲೆ/ಸಾಹಿತ್ಯರಾಜ್ಯ/ದೇಶವಾಣಿಜ್ಯ/ಉದ್ಯಮಸಿನಿಮಾ/ಮನರಂಜನೆ

ರಾಷ್ಟ್ರೀಯ ಸಿನಿಮಾ ಪುರಸ್ಕಾರ,ಕನ್ನಡಕ್ಕೆ 4, ತುಳುಗೆ 1 ಗೌರವಕನ್ನಡಕ್ಕೆ ಮೊದಲ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ,ಮಿಥ್ಯ ಚಿತ್ರಕ್ಕೆ ರೂಪಶ್ರೀಗೆ ಅತ್ಯುತ್ತಮ ಪೋಷಕ ನಟಿ ಗೌರವ , ಆತಿಶ್ ಶೆಟ್ಟಿ ಅತ್ಯುತ್ತಮ ಬಾಲ ನಟಮಿಥ್ಯ ಅತ್ಯುತ್ತಮ ಚಿತ್ರ ,ಉತ್ತಮ ಪುಸ್ತಕ: ಕೆಂಜಾರು ಪ್ರದೀಪ್ ಶೆಟ್ಟಿ ,ಉತ್ತಮ ತುಳು ಚಿತ್ರ ಇಂಬು ;

ನವದೆಹಲಿ/ಬೆಂಗಳೂರು: ಪ್ರತಿಷ್ಠಿತ ರಾಷ್ಟ್ರೀಯಚಲನಚಿತ್ರ ಪ್ರಶಸ್ತಿಗಳು ಶನಿವಾರ ಪ್ರಕಟಗೊಂ ಡಿದ್ದು, ಕನ್ನಡಕ್ಕೆ 4 ಹಾಗೂ ತುಳುವಿಗೆ ಒಂದು ಪ್ರಶಸ್ತಿ ಸಂದಿವೆ. ಈ ಪೈಕಿ ‘ಮಿಥ್ಯ’ ಸಿನಿಮಾದ ನಟನೆಗೆ ರೂಪಶ್ರೀ ವರ್ಕಾಡಿಯವರಿಗೆ ಅತ್ಯು ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಸಂದಿದೆ. ಇದು ಕನ್ನಡ ಚಿತ್ರರಂಗಕ್ಕೆ ದೊರೆತ ಮೊದಲ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ,

2024ರಲ್ಲಿ ತೆರೆಕಂಡ, ಅನಾಥ ಬಾಲಕನ ನೋವಿನ ಕತೆ ತೆರೆದಿಟ್ಟ ಕನ್ನಡದ ‘ಮಿಥ್ಯ’ ಸಿನಿಮಾಗೆ 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ. ಕೆಂಚನೂರು ಪ್ರದೀಪ್ ಕುಮಾರ್ ‘ ಶೆಟ್ಟಿ ಅವರ ‘ನಾನಿರುವುದೆ ನಿಮಗಾಗಿ ನಾಡಿರು ವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಸಿನಿಮಾ ಬಗೆಗಿನ ಉತ್ತಮ ಪುಸ್ತಕವೆಂಬ ಗೌರವಕ್ಕೆ ಪಾತ್ರವಾಗಿದೆ.

ಮಮ್ಮುಟ್ಟಿ, ಕಾರ್ತಿಕ್ ಶ್ರೇಷ್ಠ ನಟರು, ಯಾಮಿ ಶ್ರೇಷ್ಠ ನಟಿ’ ಆರ್ಟಿಕಲ್ 370′ ಅತ್ಯುತ್ತಮ ಚಿತ್ರ ರಾಜ್‌ಕುಮಾರ್ ಶ್ರೇಷ್ಠ ನಿರ್ದೇಶಕ:

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶನಿವಾರ ಘೋಷಣೆಯಾಗಿವೆ. ಮಮ್ಮುಟ್ಟಿ (ಬ್ರಹ್ಮಯುಗಂ) ಹಾಗೂ ಕಾರ್ತಿಕ್ ಆರ್ಯನ್ (ಚಂದು ಚಾಂಪಿಯನ್) ಶ್ರೇಷ್ಠ ನಟರು ಹಾಗೂ ಯಾಮಿ ಗೌತಮ್ (ಆರ್ಟಿಕಲ್ 370) ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ. ‘ಆರ್ಟಿಕಲ್ 370’ಗೆ ಅತ್ಯುತ್ತಮ ಚಲನಚಿತ್ರ ಹಾಗೂ ತಮಿಳು ಚಿತ್ರ ‘ಆಮರನ್’ಗಾಗಿ ರಾಜ್‌ ಕುಮಾರ್ ಪೆರಿಯಸಾಮಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Related posts

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ” ನುವಾ” ವಜ್ರಾಭರಣ ಅನಾವರಣ: ವಜ್ರಾಭರಣ ಅನಾವರಣಗೊಳಿಸಿದ ರೂಪದರ್ಶಿಗಳಾದ ನಿಧಿ, ಅನುಷಾ, ನಿಹಾರಿಕಾ ಶೆಟ್ಟಿ, ಶ್ರಾವ್ಯ;

Voiceoftulunadu

ವಾಟ್ಸಾಪ್‌ನಿಂದ ಬಿಗ್ ಅಪ್‌ಡೇಟ್: ಇನ್ಮುಂದೆ ಚಾಟ್ ಮಾಡಲು ನಿಮ್ಮ ಫೋನ್ ನಂಬರ್ ನೀಡಬೇಕಾಗಿಲ್ಲ!

Voiceoftulunadu

ಈ ಬಾರಿ ಸಮಾಜ ಸೇವಕ ರವಿ ಕಟಪಾಡಿಯವರಿಂದ ಮರ್ಮೈಡ್’ ಅಂದರೆ ಮತ್ಮಕನ್ಯ ವೇಷ : 1.85 ಕೋಟಿ ರೂ. ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವಾದ ರವಿಯವರಿಗೆ, ಈಬಾರಿ 15 ಲಕ್ಷ ರೂ. ನಿರೀಕ್ಷೆ ;

Voiceoftulunadu

Leave a Comment