November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ನೆರವು ಅಭಿಯಾನ ;

ಮೂಲ್ಕಿ : ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಹುಟ್ಟು ಹಬ್ಬವನ್ನು ಅವರ ಹುಟ್ಟೂರು ಮೂಲ್ಕಿಯಲ್ಲಿ ಸ್ವಾಮೀಜಿಯವರ ಸೇವಾಶ್ರಮದ ಮೂಲಕ ವಿವಿಧ ಸಾಮಾಜಿಕ ಚಟುವಟಿಕೆಯನ್ನು ನಡೆಸಲಾಯಿತು.

ಮೂಲ್ಕಿಯ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾದ ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲು ಸಹಿತ ರೋಗಿಗಳಿಗೆ ನೀಡುವ ಉಪಹಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್ ಅವರನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಸಂಚಾಲಕ ಪುನೀತ್‌ಕೃಷ್ಣ ಮೂಲ್ಕಿ ಹಾಗೂ ವಕ್ತಾರ ನರೇಂದ್ರ ಕೆರೆಕಾಡು ಜಂಟಿಯಾಗಿ ಸನ್ಮಾನಿಸಿದರು.

ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ನರ್ಸಿಂಗ್ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆಯನ್ನು ಹಸ್ತಾಂತರಿಸಲಾಯಿತು.ಪತ್ರಕರ್ತ ಹರೀಶ್‌ಕುಮಾರ್ ಹೆಜ್ಮಾಡಿ ಸ್ವಾಮೀಜಿಯವರ ಸೇವಾ ಕಾರ್ಯಕ್ರಮವನ್ನು ವಿವರಿಸಿದರು.

ಸೇವಾಶ್ರಮದ ಶರತ್ ಕಾರ್ನಾಡು, ಉದ್ಯಮಿ ಮಿಥುನ್, ಪತ್ರಕರ್ತರಾದ ಪ್ರಕಾಶ್ ಸುವರ್ಣ, ಉದಯ ಪೂಂಜಾ ತಾಳಿಪಾಡಿಗುತ್ತು, ಗಣೇಶ್ ದೇವಾಡಿಗ ಮತ್ತಿತರರು ಇದ್ದರು.

ಹುಟ್ಟುಹಬ್ಬದ ಸಂಭ್ರಮದೊಂದಿಗೆ ನೆರವು ಅಭಿಯಾನ : ಶ್ರೀ ಚಂದ್ರಶೇಖರ ಸ್ವಾಮೀಜಿಪ್ರತೀ ವರ್ಷವು ಹುಟ್ಟು ಹಬ್ಬವನ್ನು ವಿವಿಧ ಸೇವಾ ಚಟುವಟಿಕೆಯನ್ನು ನಿರಂತರವಾಗಿ ನೆರವು ನೀಡುವ ಕಾರ್ಯಕ್ರಮವನ್ನು ಅಭಿಯಾನದ ಮೂಲಕ ಜಿಲ್ಲೆ, ರಾಜ್ಯ ಮಂತ್ತು ರಾಷ್ಟ್ರೀಯ ಮಟ್ಟದಲ್ಲಿ ಮಾಡಲು ಸಾದ್ಯವಾಗುತ್ತಿದೆ.

ಆಶ್ರಮದ ಆಶ್ರಮದ ಭಕ್ತಾಧಿಗಳು, ಅಭಿಮಾನಿಗಳು ಕುಟುಂಬಿಕರೊಂದಿಗೆ ಹುಟ್ಟೂರು ಹಾಗೂ ಬೆಂಗಳೂರಿನಲ್ಲಿ ನಡೆಸಿದರೇ, ನನ್ನ ಸಮಕ್ಷಮದಲ್ಲಿ ವಿದೇಶದಲ್ಲಿಯೂ ಧಾರ್ಮಿಕ ಚಿಂತನೆಯ ಕಾರ್ಯಕ್ರಮ ಸಂಘಟಿಸುತ್ತಾ, ಸಂಭ್ರಮದೊಂದಿಗೆ ನೆರವಿನ ಅಭಿಯಾನ ನಡೆಯುತ್ತಿದೆ.

ತಮ್ಮ ಆರಾಧ್ಯ ಕ್ಷೇತ್ರವಾಗಿರುವ ತಿರುಪತಿ ತಿಮ್ಮಪ್ಪ ದೇವಳಕ್ಕೆ ಮುಂಜಾನೆಯ ದರ್ಶನದೊಂದಿಗೆ ನಮ್ಮ ದಿನಚರಿ ಆರಂಭಗೊಂಡು ನಿಸ್ವಾರ್ಥ ಸೇವೆಯ ಮೂಲಕವೇ ದಿನವನ್ನು ಕಳೆಯುತ್ತೇವೆ ಎಂದು ತಮ್ಮ ಹುಟ್ಟು ಹಬ್ಬದ ದಿನಚರಿಯನ್ನು ಸ್ವಾಮೀಜಿ ವಿವರಿಸಿದರು.

Related posts

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಕದ್ರಿ ಮಂಜುನಾಥ ದೇವಾಲಯದಲ್ಲಿ ಸಂಸದರಾದ ಕಾಪ್ಟನ್ ಬ್ರಿಜೇಶ್ ಚೌಟ ಮತ್ತು ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ;

Voiceoftulunadu

ಮಂಗಳೂರಿನಲ್ಲಿ ಎಂಆರ್‌ಪಿಎಲ್ ಎಸ್‌ಸಿ/ಎಸ್‌ಟಿ ನೌಕರರ ಕಲ್ಯಾಣ ಸಂಘದ ವತಿಯಿಂದ ವಿಶೇಷ ಪೂರೈಕೆಯ ಮಾಹಿತಿ ಶಿಬಿರ ಯಶಸ್ವಿ ;

Voiceoftulunadu

ಮೊಡಂಕಾಪು: ಕಾರ್ಮೆಲ್ ಪ್ರೌಢಶಾಲೆ ಶಿಕ್ಷಕ ರೋಷನ್ ಪಿಂಟೋ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ;

Voiceoftulunadu

Leave a Comment