November 3, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಇಂದಿರಾ ಶಿವರಾವ್ ಟ್ರಸ್ಟ್, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಶಿಷ್ಯವೇತನ ವಿತರಣೆ : ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರಿಂದ ಕಾರ್ಯಕ್ರಮ ಉದ್ಘಾಟನೆ ;

ವರದಿ/ ಚಿತ್ರ ; ಈ ಮೀಡಿಯಾ

ಉಡುಪಿ: ಇಂದಿರಾ ಶಿವರಾಂ ಟ್ರಸ್ಟ್ ಮತ್ತು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ జంటి ಸಯೋಗದಲ್ಲಿ ಶಿಷ್ಯವೇತನ ವಿತರಣಾ ಸಮಾರಂಭವು ಗುಂಡಿಬೈಲಿನ ಬ್ರಾಹ್ಮ ಸಭಾಭವನದಲ್ಲಿ ನಡೆಯಿತು.ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು, ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅವರು ಆಶೀರ್ವಚನ ನೀಡುತ್ತಾ, ಸಮಾಜದ ಶ್ರೀಮಂತರು ತಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ಯೋಜನೆಗಾಗಿ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಇಂದಿರಾ ಶಿವರಾವ್ ಟ್ರಸ್ಟ್ಅನೇಕ ವರ್ಷಗಳಿಂದ ಈ ಶಿಷ್ಯವೇತನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದು, ಇತರ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

70 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೂ.1.30 ಲಕ್ಷ ಶಿಷ್ಯವೇತನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಷತ್ತಿನ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು.

ಇಂದಿರಾ ಶಿವರಾವ್ ಟ್ರಸ್ಟ್ ನ ಮುಖ್ಯಸ್ಥರಾದ ಯು. ರಮೇಶ್ ರಾವ್, ಟ್ರಸ್ಟಿಗಳಾದ ನಾಗರಾಜ ತಂತ್ರಿಚಂದ್ರಕಾಂತ ಕೆ. ಎನ್. ನಿವೃತ್ತ ಯೋಧ ಪಿ. ರಘುಪತಿ ರಾವ್, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಅಮಿತ ಕ್ರಮಧಾರಿ, ಪೂರ್ವಾಧ್ಯಕ್ಷರಾದ ಚೈತನ್ಯ ಎಂ.ಜಿ., ವಿಷ್ಣು ಪ್ರಸಾದ್ ಪಾಡಿಗಾ‌ರ್ ಉಪಸ್ಥಿತರಿದ್ದರು.

ಪರಿಷತ್ತಿನ ಅಧ್ಯಕ್ಷರಾದ ರಘುಪತಿ ರಾವ್ ಕಿದಿಯೂರು ಪ್ರಸ್ತಾವನೆಗೈದು ಸ್ವಾಗತಿಸಿದರು. ಕವಿತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪದ್ಮಲತಾ ವಿಷ್ಣು, ಸುನೀತ ಚೈತನ್ಯ, ರಾಧಿಕ ಚಂದ್ರಕಾಂತ್, ಸ್ವಾತಿ, ರಮ್ಯಾ ಭಾಗವತ್ ಸಹಕರಿಸಿದರು. ಕೋಶಾಧಿಕಾರಿ ರವೀಂದ್ರ ಆಚಾರ್ಯ ವಂದನಾರ್ಪಣೆಗೈದರು.

Related posts

ಕುಂದಾಪುರ : ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಇಡೀ ಅಂಗಡಿ ಭಸ್ಮ ಸುಮಾರು 40 ಲಕ್ಷಕ್ಕೂ ಅಧಿಕ ರೂಪಾಯಿ ನಷ್ಠದ ಅಂದಾಜು ;

Voiceoftulunadu

ಶಾಂತಿ ಸೌಹಾರ್ದದ ಸಂದೇಶ ಸಾರಿದ ತೊಕ್ಕೊಟ್ಟು ಮೊಸರು ಕುಡಿಕೆ ;

Voiceoftulunadu

ಮಾದರಿ ಕೋ-ಆಪರೇಟಿವ್ ಬ್ಯಾಂಕ್‌ಗೆ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ;

Voiceoftulunadu

Leave a Comment