28.5 C
ಮಂಗಳೂರು
September 4, 2026
Uncategorizedಕ್ರೈಮ್ಕ್ರೈಮ್/ಅವಘಡಜಿಲ್ಲಾ ಸುದ್ದಿರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಕುಂದಾಪುರ : ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಇಡೀ ಅಂಗಡಿ ಭಸ್ಮ ಸುಮಾರು 40 ಲಕ್ಷಕ್ಕೂ ಅಧಿಕ ರೂಪಾಯಿ ನಷ್ಠದ ಅಂದಾಜು ;

ವರದಿ/ ಚಿತ್ರ :ಈ ಮೀಡಿಯಾ

ಕುಂದಾಪುರ : ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66 ಶ್ರೀ ಬ್ರಹ್ಮಸ್ಥಾನ ಸಮೀಪದ ಗುರು ಬ್ರಹ್ಮ ಜನರಲ್ ಸ್ಟೋರ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಇಡೀ ಅಂಗಡಿ, ಬೆಂಕಿಗೆ ಆಹುತಿಯಾದ ಘಟನೆ ಸೋಮವಾರ ತಡರಾತ್ರಿ ಸುಮಾರು 1.30 ಕ್ಕೆ ಸಂಭವಿಸಿದೆ.

ಅಂಗಡಿ ಮಾಲೀಕರಾದ ಸಂತೋಷ್ ಅವರು ಎಂದಿನಂತೆ ವ್ಯಾಪಾರ ಮುಗಿಸಿ ಮನೆಗೆ ತೆರಳಿದ ಬಳಿಕ ತಡರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಇಡೀ ಅಂಗಡಿಗೆ ಹರಡಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ಸಾಮಾಗ್ರಿಗಳು, ಫ್ರಿಡ್ಜ್ ಹಾಗೂ ಪೀಠೋಪಕರಣಗಳು ಬೆಂಕಿಗೆ ಭಸ್ಮವಾಗಿವೆ.

ಅಂಗಡಿಯಲ್ಲಿದ್ದ ಮೂರು ಹೆಚ್ಚು ಫ್ರಿಡ್ಜ್ ಗಳ ಪೈಕಿ ಒಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡಿದೆ. ಎಂದು ಶಂಕಿಸಲಾಗಿದೆ.ಈ ಅಗ್ನಿ ಅವಘಡದಿಂದ ಸುಮಾರು 40 ಲಕ್ಷಕ್ಕೂ ರೂಪಾಯಿಗೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts

ಕೇರಳದ ಕೊಟ್ಟಿಯೂರು ಶಿವಕ್ಷೇತ್ರದ ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ

voiceoftulunadu

ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಕೆಎಸ್ ಸಿಎಸ್ ಟಿಯಿಂದ ಯೋಜನಾ ಪ್ರಶಸ್ತಿ : ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ, ಸಂಸ್ಥೆಯ ಪ್ರಾಂಶುಪಾಲರಿಂದ ಅಭಿನಂದನೆ;

Voiceoftulunadu

ಅವಳಿ ಮಕ್ಕಳ ಅಪೂರ್ವ ಸಾಧನೆ: ದಾಖಲೆ ಪುಸ್ತಕ ಸೇರಿದ ಪುಟ್ಟ ಪ್ರತಿಭೆಗಳು ;

Voiceoftulunadu

Leave a Comment