September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕೃಷಿ/ಭೌಗೋಳಿಕಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕೊಳಲಗಿರಿ ಯುವ ವಿಚಾರ ವೇದಿಕೆ ಆಟಿಡೊಂಜಿ ದಿನಆಟಿ ತಿಂಗಳಿನಲ್ಲಿ ತಯಾರಿಸುತ್ತಿದ್ದ 28 ವಿವಿಧ ಬಗೆಯ ಖಾದ್ಯಗಳ ಸವಿರುಚಿ;

ವರದಿ /ಚಿತ್ರ: ಈ ಮೀಡಿಯಾ

ಉಡುಪಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಿಚಾರ ವೇದಿಕೆ ಕೊಳಲಗಿರಿ ವತಿಯಿಂದ “ಆಟಿಡೊಂಜಿ ದಿನ” ಕಾರ್ಯಕ್ರಮ ನಡೆಯಿತು.ಹಿರಿಯರಾದ ಗಿರಿಜಾ ಆಚಾರ್ಯ ನರ್ನಾಡು, ಚಿನ್ನು ಕೊಳಲಗಿರಿ ಇವರು ಸಿದ್ದೆಯಿಂದ ಸೇರಿಗೆ, ಸೇರಿನಿಂದ ಕಳೆಸೆಗೆ ಅಕ್ಕಿ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಳ್ಳೂರು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ರಮೇಶ ಕರ್ಕೇರ, ಉಳ್ಳೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ಶೆಟ್ಟಿ, ಹಿರಿಯರಾದ ಮಾಧವ ಪಾಣ, ಶಕುಂತಲಾ ಸುಕೇಶ್ ಉಪಸ್ಥಿತರಿದ್ದರು.ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ಸ್ವಾಗತಿಸಿದರು.

ಪದಾಧಿಕಾರಿಗಳಾದ ದಿನೇಶ್ ಶೆಟ್ಟಿ, ರವೀಂದ್ರಕುಮಾರ್, ಸುಕೇಶ್ ಪಾಣ, ಕೇಶವ್ ಪುಷ್ಪಲತಾ ನರ್ಸರಿ, ಶಿವಾನಂದ, ಶಶಿಕುಮಾರ್, ಹೇಮಂತ್, ವೈಭವ್, ಅವಿನಾಶ್, ಶಾಂತ ಸೆಲ್ವರಾಜ್, ಶೋಭಾ ಯೋಗೀಶ್, ಜಯಲಕ್ಷ್ಮೀ, ಸುಜಾತ ಟೀಚರ್, ಲಕ್ಷ್ಮೀ ಟೀಚರ್, ಸೌಮ್ಯ ಶೆಟ್ಟಿ, ಪ್ರಿಯಾಂಕಾ ಉಪಸ್ಥಿತರಿದ್ದರು.

ಸುಬ್ರಮಣ್ಯ ಅಚಾರ್ಯ ಕಾರ್ಯಕ್ರಮ ನಿರೂಪಿಸಿದರು.ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ತಯಾರಿಸುತ್ತಿದ್ದ 28 ವಿವಿಧ ಬಗೆಯ ಖಾದ್ಯಗಳನ್ನು ವೇದಿಕೆಯ ಸದಸ್ಯರು ತಯಾರಿಸಿ ತಂದು ಉಣ ಬಡಿಸಿದರು.ಕೃಷಿ ಪರಿಕರಗಳ ಜೊತೆಗೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಕೆಲವು ವಸ್ತುಗಳನ್ನು ಪ್ರದರ್ಶಿಸಿ ಮಾಹಿತಿ ನೀಡಲಾಯಿತು.

Related posts

ಮೀನುಗಾರಿಕಾ ಋತು ಆರಂಭ ಹಿನ್ನೆಲೆ ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ:ಬಂದರಿನ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ ಶಾಸಕ ಯಶ್ಪಾಲ್;

Voiceoftulunadu

ನೆತ್ತರಕೆರೆ: ಎಡುವೆಂಚರ್ ಪಿಯು ಕಾಲೇಜಿನಲ್ಲಿ “ಪ್ರತಿಭಾಮೃತ” ಪ್ರತಿಭೆಗಳ ಅನಾವರಣ ಕಾರ್ಯಕ್ರಮ

Voiceoftulunadu

ಶಿರ್ವ ಸಹಕಾರಿ ವ್ಯವಸಾಯಿಕ ಸಂಘ : “ಏಕ್ ಫೆಡ್ ಮಾ ಕೆ ನಾಮ್” ಕಾರ್ಯಕ್ರಮಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಣೆ ;

Voiceoftulunadu

Leave a Comment