November 4, 2026
Uncategorizedಉದ್ಯೋಗ/ಶಿಕ್ಷಣಕ್ರೀಡೆಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸ

ತ್ರಿಶಾ ಕಾಲೇಜು ಕಟಪಾಡಿ : ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ವಾಲಿಬಾಲ್‌ ಪಂದ್ಯಾವಳಿ : ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಮೈದಾನದಲ್ಲಿ ನಡೆದ ಕ್ರೀಡಾಕೂಟ ;

ವರದಿ/ ಚಿತ್ರ: ಈ ಮೀಡಿಯಾ

ಕಟಪಾಡಿ: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಮೈದಾನದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಮಹಿಳೆಯರ ಅಂತರ ಕಾಲೇಜು ವಾಲಿಬಾಲ್ ಪಂದ್ಯಾವಳಿ ನಡೆಯಿತು.ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜೆಂಟ್ ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು, ಕಟಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು.

ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ವಿವಿಧ ಕಾಲೇಜುಗಳ ಮಹಿಳಾ ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿದೆ.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ತ್ರಿಶಾ ಗ್ರೂಪ್ ಆಫ್ ಇನ್ನಿಟ್ಯೂಷನ್ನ ಸಂಸ್ಥಾಪಕ ಸಿ.ಎ. ಗೋಪಾಲಕೃಷ್ಣ ಭಟ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜಾ, ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಉಡುಪಿ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜೆಂಟ್ನ ಪ್ರಾಂಶುಪಾಲ ವಿಶ್ಲೇಶ್ ಶೆಣೈ ಬಿ., ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಕುಲದೀಪ್ ವೈ ಯು, ತ್ರಿಶಾ ಕಾಲೇಜಿನ ಅಕಾಡೆಮಿಕ್ ಮ್ಯಾನೇಜರ್ ಶಾಂತಪ್ರಿಯ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶಶಿಕಿರಣ,ಎಸ್ಬಿಎಂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಉಪಸ್ಥಿತರಿದ್ದರು.

ಪಂದ್ಯಾವಳಿಯ ಸಂದರ್ಭ ಕ್ರೀಡಾ ಕ್ಷೇತ್ರ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಟಾರ್ಪೆ ಡೋಸ್ ಸ್ಪೋರ್ಟ್ಸ್ ಕ್ಲಬ್ಬ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಹಾಗೂ ಶಂಕರಪುರದ ಕೃಷಿಕ ಜೋಸೆಫ್ ಲೋಬೋ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಚಾಂಪಿಯನ್ಶಿಪ್ ಸುತ್ತಿನಲ್ಲಿ ಎಸ್ಟಿಎಂ ಕಾಲೇಜಿಗೆ ಜಯಕೊಳಕೆಬೈಲ್ ಚಂದ್ರಶೇಖರ ಶೆಟ್ಟಿ ಸ್ಮಾರಕ ಟ್ರೋಫಿಗಾಗಿ ನಡೆದ ಚಾಂಪಿಯನ್ಶಿಪ್ ಸುತ್ತಿನಲ್ಲಿ ಎಸ್ಟಿಎಂ ಕಾಲೇಜು ಉಜಿರೆ ಪ್ರಥಮ ಸ್ಥಾನ ಗಳಿಸಿತು. ఆళ్ళానో ಕಾಲೇಜು ಮೂಡುಬಿದಿರೆ ದ್ವಿತೀಯ, ಪದ್ದ ಕಾಲೇಜು ಮಂಗಳೂರು ತೃತೀಯ ಎಂಜಿಎಂ ಸಂಧ್ಯಾ ಕಾಲೇಜು ಉಡುಪಿ ಚತರ್ಥಂ ಸ್ಥಾನ ಪಡೆದುಕೊಂಡವು.

ಹಾಗೂ ವೈಯಕ್ತಿಕ ಪ್ರಶಸ್ತಿಗಳಲ್ಲಿ ಎಸ್ಟಿಎಂ ಕಾಲೇಜು ಉಜಿರೆಯ ಜಸ್ಟಿನ್ ಅತ್ಯುತ್ತಮ ಪಾಸರ್ ಹಾಗೂ ಶ್ರೀಯಾ ಅತ್ಯುತ್ತಮ ಅಟ್ಯಾಕರ್ ಪ್ರಶಸ್ತಿಗೆ ಭಾಜನರಾದರು. ಆಳ್ವಾಸ್ ಕಾಲೇಜು ಮೂಡುಬಿದಿರೆಯ ಚಂದ್ರಿಕಾ ಅತ್ಯುತ್ತಮ ಆಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು.ಪ್ರಿಲಿಮಿನರಿ ಸುತ್ತಿನಲ್ಲಿ ಪದ್ವ ಕಾಲೇಜು ಮಂಗಳೂರು ಪ್ರಥಮ, ಎಂಜಿಎಂ ಸಂಧ್ಯಾ ಕಾಲೇಜು ಉಡುಪಿ ದ್ವಿತೀಯ, ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ ತೃತೀಯ ಹಾಗೂ ಎಸ್ಟಿಪಿಟಿ ಕಾಲೇಜು ಕಟೀಲು ಚತರ್ಥ ಸ್ಥಾನ ಗಳಿಸಿದವು.

ಈ ಸುತ್ತಿನ ವೈಯಕ್ತಿಕ ಪ್ರಶಸ್ತಿಗಳಲ್ಲಿ ಪದ್ದ ಕಾಲೇಜು ಮಂಗಳೂರಿನ ಪವಿರ್ವಿಕಾ ಅತ್ಯುತ್ತಮ ಪಾಸರ್, ಎಂಜಿಎಂ ಸಂಧ್ಯಾ ಕಾಲೇಜು ಉಡುಪಿಯ ಸಾನಿಧ್ಯ ಅತ್ಯುತ್ತಮ ಅಟ್ಯಾಕರ್ ಹಾಗೂ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ ತನಿಷ್ಕಾ ಅತ್ಯುತ್ತಮ ಆಲೌಂಡರ್ ಪ್ರಶಸ್ತಿಗೆ ಪಾತ್ರರಾದರು.

ಸಮಾರೋಪ ಸಮಾರಂಭದಲ್ಲಿ ಕಿನ್ನಿಮುಲ್ಕಿಯ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಕಟಪಾಡಿಯ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಟ್ರಸ್ಟಿ ಬಿ. ಚಂದ್ರಕಾಂತ್ ಪೈ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಹಾಗೂ ಸಿದ್ಧಾಂತ ಫೌಂಡೇಶನ್ನ ಟ್ರಸ್ಟಿ ರಾಮಪ್ರಭು ಉಪಸ್ಥಿತರಿದ್ದರು.ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜೆಂಟ್ನ ಪ್ರಾಂಶುಪಾಲ ವಿಶ್ಲೇಶ್ ಶೆಣೈ ಬಿ., ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಕುಲದೀಪ್ ವೈ ಯು, ತ್ರಿಶಾ ಕಾಲೇಜಿನ ಅಕಾಡೆಮಿಕ್ ಮ್ಯಾನೇಜರ್ ಶಾಂತಪ್ರಿಯ, ತ್ರಿಶಾ ವಿದ್ಯಾ ಪಿಯು ಪ್ರಾಂಶುಪಾಲ ಹರಿಪ್ರಸಾದ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶಶಿಕಿರಣ, ಎಸ್ಥಿಎಂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಉಪಸ್ಥಿತರಿದ್ದರು.

ವಾಗೀಶ್ ಆಚಾರ್ಯಿ ಹಾಗೂ ಪಲ್ಲವಿ ಕೊಡಗು ನಿರೂಪಿಸಿದರು. ಧೀರಜ್ ಬೆಳ್ಳಾರೆ ವಂದಿಸಿದರು. ಆಲ್ಸನ್ ಪಿರೇರಾ, ರಾಮದಾಸ್ ನಾಯಕ್ ಸಹಕರಿಸಿದರು.

Related posts

ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಮಲ್ಲಿಕಾ ಶೆಟ್ಟಿ ಅವರಿಗೆ ಡಾಕ್ಟರೇಟ್ ಪ್ರಧಾನ;

Voiceoftulunadu

ವಾಲಿಕುಂಜ ಚಾರಣ : ಒಂದು ರುದ್ರ ರಮಣೀಯ ಅನುಭವ …!

Voiceoftulunadu

ಉಡುಪಿಯಲ್ಲಿ ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆಗೆ ಎರಡು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ , ಸಂಸದ ಕೋಟ ಶ್ರೀನಿವಾಸ ಪೂಜಾರಿ : ಮಣಿಪಾಲದ ಸಂಸದರ ಕಚೇರಿಯಲ್ಲಿ ಉಡುಪಿ ರೈಲ್ವೆ ಯಾತ್ರಿ ಸಂಘದ ಜೊತೆ ಸಮಾಲೋಚನೆ ಸಭೆ ;

Voiceoftulunadu

Leave a Comment