28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಮಲ್ಲಿಕಾ ಶೆಟ್ಟಿ ಅವರಿಗೆ ಡಾಕ್ಟರೇಟ್ ಪ್ರಧಾನ;

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಮಲ್ಲಿಕಾ ಶೆಟ್ಟಿಯವರಿಗೆ ಶ್ರೀನಿವಾಸ ವಿಶ್ವವಿದ್ಯಾಲಯವು ‘ಎಂಟನೇ ತರಗತಿಯ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಸಾಮರ್ಥ್ಯಗಳು, ಆಯ್ದ ಕನ್ನಡ ಭಾಷಾ ಸಾಮರ್ಥ್ಯಗಳು, ವೈಜ್ಞಾನಿಕ ತಾರ್ಕಿಕ ಚಿಂತನಾ ಸಾಮರ್ಥ್ಯ ಹಾಗೂ ವಿಜ್ಞಾನ ವಿಷಯದ ಶೈಕ್ಷಣಿಕ ಸಾಧನೆಯನ್ನು ಅಭಿವೃದ್ಧಿಪಡಿಸುವಲ್ಲಿ ಅಂತರಶಿಸ್ತೀಯ ಬಹುಮಾಧ್ಯಮ ಬೋಧನಾ ವಿಧಾನವು ಬೀರುವ ಪರಿಣಾಮಕಾರಿತ್ವದ ಅಧ್ಯಯನ’ ಎಂಬ ಪ್ರಬಂಧಕ್ಕಾಗಿ ಪಿಎಚ್‌ಡಿ ಪದವಿಯನ್ನು ನೀಡಿದೆ.

ಅಲೋಶಿಯಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಪಕಿ ಡಾ. ವಿಜಯಲಕ್ಷ್ಮಿ ನಾಯಕ್‌ರವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇವರು ತಮ್ಮ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ಶಿಕ್ಷಣವನ್ನು ಆಳ್ವಾಸ್‌ನಲ್ಲಿ ಪೂರೈಸಿದ್ದರು.

ಶ್ರೀಮತಿ ಮಲ್ಲಿಕಾ ಶೆಟ್ಟಿಯವರು ಮೂಡುಬಿದಿರೆಯ ಪುಚ್ಚೆಮೊಗರಿನ ದಿವಂಗತ ಭೋಜ ಶೆಟ್ಟಿ ಹಾಗೂ ಸುಲೋಚನ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು, ಅನಿವಾಸಿ ಭಾರತೀಯ ಉದ್ಯೋಗಿ ರಾಜೇಶ್ ಶೆಟ್ಟಿಯವರ ಪತ್ನಿಯಾಗಿದ್ದಾರೆ.

Related posts

ಬಂಟ್ವಾಳ: ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದು ದುರಂತಎಲ್ ಕೆಜಿ ಬಾಲಕಿ ಮೃತ್ಯು, ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ;

Voiceoftulunadu

ಮರಕಡ; ಜಮಾತುಲ್ ಮುಸ್ಲಿಮೀನ್ ಕಮಿಟಿ ವತಿಯಿಂದ ಸ್ವಾತಂತ್ರ್ಯ ಸಂಭ್ರಮ : ಸಯ್ಯದ್ ಅಬ್ದುರಹ್ಮಾನ್ ಸಆದಿ ಅಲ್ಲಾದಿ, ಸದಸ್ಯರಿಂದ ಧ್ವಜಾರೋಹಣ;

Voiceoftulunadu

ಚಾರ್ಮಾಡಿ ಘಾಟಿಯಲ್ಲಿ ಕಂಡು ಬಂದ ಒಂಟಿ ಸಲಗ: ರಸ್ತೆ ದಾಟುತ್ತಿದ್ದ ಸಲಗ ಮೊಬೈಲ್ ನಲ್ಲಿ ಸೆರೆ ;

Voiceoftulunadu

Leave a Comment