November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸ

ಹೆಗ್ಗಡೆ ಸೇವಾ ಸಂಘ ಮುಂಬಯಿ ಪೂರೈಸಿದ ಅರ್‍ವತ್ತೇರಡನೇ (62) ವಾರ್ಷಿಕ ಮಹಾಸಭೆ : ನಿಸ್ವಾರ್ಥ ಮನೋಭಾವ ಸಂಸ್ಥೆಯ ಸದೃಢತೆಯ ಶಕ್ತಿಯಾಗಿದೆ – ಮನೋಜ್ ಹೆಗ್ಡೆ ;

ವರದಿ /ಚಿತ್ರ : ರೋನ್ಸ್ ಬಂಟ್ವಾಳ್

ಮುಂಬಯಿ, ನ.01: ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಸದಸ್ಯರ ಪಾತ್ರವೂ ಅತ್ಯಂತ ಮಹತ್ವದ್ದು. ನಮ್ಮ ಸಂಘದ ಪ್ರತಿಯೊಂದು ಹೆಜ್ಜೆಯೂ ಜನಪರ ಕಲ್ಯಾಣ ಕಾರ್ಯಗಳಿಗೆ ಮೀಸಲಾಗಿದ್ದು, ಎಲ್ಲರ ಒಮ್ಮತದ ಸಹಕಾರದಿಂದ ಸಮಾಜಮುಖಿ ಚಿಂತನೆಗಳನ್ನು ಯಶಸ್ವಿಯಾಗಿ ಸಾಕಾರಗೊಳಿಸಲು ಸಾಧ್ಯವಾಗಿದೆ. ಸದಸ್ಯರ ಸಾಮೂಹಿಕ ಪ್ರಯತ್ನ, ನಿಸ್ವಾರ್ಥ ಶ್ರಮದಿಂದ ಸದೃಢ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣ ರೂಪಿಸಲು ಸಾಧ್ಯವಿದೆ ಎಂದು ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ಮನೋಜ್ ಹೆಗ್ಡೆ ಥಾಣೆ ತಿಳಿಸಿದರು.

ಇಂದಿಲ್ಲಿ ಭಾನುವಾರ ಪೂರ್ವಾಹನ ನವಿ ಮುಂಬಯಿ ಐರೋಲಿ ಇಲ್ಲಿನ ಹೆಗ್ಗಡೆ ಭವನದಲ್ಲಿ ಹೆಗ್ಗಡೆ ಸೇವಾ ಸಂಘ ಮುಂಬಯಿ ತನ್ನ ೬೨ನೇ ವಾರ್ಷಿಕ ಮಹಾಸಭೆ ನಡೆಸಿದ್ದು ಸಭಾಧ್ಯಕ್ಷತೆ ವಹಿಸಿ ಮನೋಜ್ ಹೆಗ್ಡೆ ಥಾಣೆ ಮಾತನಾಡಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಸ್ವರ್ಗೀಯ ಮಾರ್ನಾಡು ರಾಘವ ಹೆಗ್ಡೆ ಮತ್ತು ಭವನದ ಕಟ್ಟಡ ನಿರ್ಮಾಣದ ಸಮಯದಲ್ಲಿ ಸಿಡ್ಕೋ ದಿಂದ ಪರವಾನಿಗೆ ತಂದು ಕೊಟ್ಟಂತಹ ದೇವದಾಸ್ ಹೆಗ್ಡೆ ಹಾಗೂ ಕಟ್ಟಡವನ್ನು ನಿರ್ಮಿಸುವಲ್ಲಿ ದಿನರಾತ್ರಿ ದುಡಿದಂತಹ ಪ್ರಭಾಕರ್ ಹೆಗ್ಡೆ ಅವರುಗಳ ಸೇವೆಯನ್ನೂ ಸೇವೆಯನ್ನು ಸ್ಮರಿಸಿ ಅಭಿವಂದಿಸುವೆನು.

ಏಳ್ನಾಡುಗುತ್ತು ಶಿವಪ್ಪ ಹೆಗ್ಡೆ ಅವರ ಪ್ರತಿಮೆಯನ್ನು ನಿರ್ಮಿಸಿರುವುದು ನಮ್ಮ ಹೆಗ್ಗಡೆ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಜಾತಿಯ ಮಕ್ಕಳು ಅಂತರ್ಜಾತಿ ವಿವಾಹದತ್ತ ಹೋಗಬಾರದು. ಪ್ರತಿಯೊಬ್ಬ ಸದಸ್ಯರ ಹೃದಯ ವೈಶಾಲ್ಯತೆ ಮತ್ತು ಸಮಾಜದ ಬಗೆಗಿನ ಕಳಕಳಿಯೇ ನಮ್ಮೆಲ್ಲಾ ಯೋಜನೆಗಳ ಯಶಸ್ಸಿಗೆ ಶ್ರೀರಕ್ಷೆಯಾಗಿದ್ದು, ಈ ಒಗ್ಗಟ್ಟು ಮತ್ತು ಸೇವಾ ಪರಂಪರೆ ಮುಂದೆಯೂ ಮುಂದುವರಿಸಿ, ಸದೃಢ ಸಮಾಜ ನಿರ್ಮಾಣಕ್ಕೆ ಮಾದರಿಯಾಗೋಣ ಎಂದು ಕರೆಯಿತ್ತರು.

ಸಂಘದ ಗೌರವಾಧ್ಯಕ್ಷ ಆನಂದ್ ಹೆಗ್ಡೆ, ಉಪಾಧ್ಯಕ್ಷ ಅರುಣ್ ಹೆಗ್ಡೆ, ಗೌ| ಪ್ರ| ಕಾರ್ಯದರ್ಶಿ ಸುರೇಂದ್ರನಾಥ್ ಹೆಗ್ಡೆ, ಗೌ| ಪ್ರ| ಕೋಶಾಧಿಕಾರಿ ಸಿಎ| ಸುರೇಶ್ ಹೆಗ್ಡೆ, ಜೊತೆ ಕಾರ್ಯದರ್ಶಿ ರೂಪೇಶ್ ಹೆಗ್ಡೆ, ಜೊತೆ ಖಜಾಂಚಿ ಹರೀಶ್‌ಕುಮಾರ್ ಹೆಗ್ಡೆ ವೇದಿಕೆಯಲ್ಲಿ ಆಸೀನರಾಗಿದ್ದರು.ಮಹಿಳಾ ವಿಭಾಗದಧ್ಯಕ್ಷೆ ಛಾಯಾ ಹೆಗ್ಡೆ ನೂರಾನಿ, ಯುವ ವಿಭಾಗಧ್ಯಕ್ಷ ಸುನೀಲ್ ರಘುನಾಥ್ ಹೆಗ್ಡೆ, ಆಂತರಿಕ ಲೆಕ್ಕಪರಿಶೋಧಕ ಗಣೇಶ್ ಹೆಗ್ಡೆ ಥಾಣೆ ಪ್ರಧಾನವಾಗಿ ಹಾಜರಿದ್ದು ಮುಂದಿನ ಅವಧಿಗೆ ಹಾಲಿ ಪದಾಧಿಕಾರಿಗಳನ್ನೇ ಸಭೆಯು ಸೂಚಿಸಿ ಅನುಮೋದಿಸಿತು.

ಅಂತೆಯೇ 2026-2027ನೇ ಆಥಿಕ ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ (ಆಂತರಿಕ ಲೆಕ್ಕಪರಿಶೋಧಕ) ಗಣೇಶ್ ಹೆಗ್ಡೆ ಅವರನ್ನೇ ನೇಮಿಸಿತು.ಸುರೇಂದ್ರನಾಥ್ ಹೆಗ್ಡೆ ಅವರು ಗತ ೬೧ನೇ ವಾರ್ಷಿಕಸಭೆಯ ವರದಿ ಸಭೆ ಮತ್ತು ಗತ ವಿಶೇಷ ಸಾಮಾನ್ಯ ಸಭೆಯ ವರದಿ ವಾಚಿಸಿದರು.

ಸಿಎ| ಸುರೇಶ್ ಹೆಗ್ಡೆ ಗತ ಸಾಲಿನ ಸಂಘದ ಸೇವಾ ಚಟುವಟಿಕೆಗಳ ಮಾಹಿತಿಯನ್ನಿತ್ತು ಕೊನೆಗೊಂಡ ಹಣಕಾಸು ವರ್ಷದ ಆದಾಯ-ವೆಚ್ಚ, ಆಯವ್ಯಯ ಪಟ್ಟಿ (ಬ್ಯಾಲೆನ್ಸ್ ಶೀಟ್) ಮತ್ತು ಲೆಕ್ಕಪರಿಶೋಧಕರ ವರದಿಯನ್ನು ಮಂಡಿಸಿದರು. ನಂತರ ಮುಂದಿನ ಹಣಕಾಸು ವರ್ಷದ ಮುಂಗಡಪತ್ರ (ಬಜೆಟ್) ಮಂಡಿಸಲಾಯಿತು.

ಸಭಿಕ ಸದಸ್ಯರಲ್ಲಿನ ರವಿ ಹೆಗ್ಡೆ ಹೆರ್ಮುಂಡೆ, ಪ್ರಸನ್ನ ಹೆಗ್ಡೆ, ಚಂದ್ರಶೇಖರ್ ಹೆಗ್ಡೆ, ರತ್ನಾಕರ್ ಹೆಗ್ಡೆ, ಪ್ರಭಾಕರ್ ಹೆಗ್ಡೆ, ಅನಿಲ್ ಹೆಗ್ಡೆ ನೆರೂಳ್, ಅಶೋಕ್ ಹೆಗ್ಡೆ ಚೆಂಬೂರು, ಸಂತೋಷ್ ಹೆಗ್ಡೆ ಐರೋಲಿ ಮತ್ತಿತರ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಲಹಿ ಸಂಘದ ಸೇವಾ ವೈಖರಿಯನ್ನು ಪ್ರಶಂಸಿಸಿ ಸಂಘವು ಮತ್ತಷ್ಟು ಉನ್ನತಿಯತ್ತ ಸಾಗಲಿ ಎಂದು ಹಾರೈಸಿದರು.

ಕುಲದೇವರು ಶ್ರೀ ವೀರಮಾರುತಿ ಹನುಮಾನ್ ದೇವರಿಗೆ ಸ್ತುತಿಸಿ ಸಭೆ ಆದಿಗೊಳಿಸಲಾಯಿತು. ಗತ ಸಾಲಿನಲ್ಲಿ ಅಗಲಿದ ಸಂಘದ ಸದಸ್ಯರು, ಹಿತೈಷಿಗಳಿಗೆ ಮೌನಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸಲಾಯಿತು. ಲ| ಮುರಳೀಧರ್ ಹೆಗ್ಡೆ ಸ್ವಾಗತಿಸಿ ಸಭಾ ಕಲಾಪ ನಡೆಸಿ ಕೃತಜ್ಞತೆ ಸಲ್ಲಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಸಮಾಪನ ಕಂಡಿತು.

Related posts

ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗೆ ತೃತೀಯ ಸ್ಥಾನ ;

Voiceoftulunadu

ವರದಿ ಆಧರಿಸಿ ತುಳುವಿಗೆ ಮಾನ್ಯತೆ: ಸಚಿವ ಶಿವರಾಜ್ ತಂಗಡಗಿ ;

Voiceoftulunadu

9/11 ಹಾಗೂ ಕಟ್ಟಡ ಪರವಾನಿಗೆ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ: ಬೇಬಿ ಕುಂದರ್;

Voiceoftulunadu

Leave a Comment