November 3, 2026
Uncategorizedಅಂತಾರಾಷ್ಟ್ರೀಯಕಲೆ/ಸಾಹಿತ್ಯಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಅಜ್ಮಾನ್‌ನಲ್ಲಿ ಅದ್ಧೂರಿಯಾಗಿ ನಡೆದ ಸೌಹಾರ್ದ ಸ್ವರ ಸಂಗಮ-2026ದಿ| ಯುವರಾಜ್ ಕೆ.ದೇವಾಡಿಗ ಸ್ಮರಣಾರ್ಥ ಗಾಯನ ಸ್ಪರ್ಧೆ – ಗ್ರ್ಯಾಂಡ್ ಫಿನಾಲೆ ;

ವರದಿ / ಚಿತ್ರ : ರೋನ್ಸ್ ಬಂಟ್ವಾಳ್

ಅಜ್ಮಾನ್ (ಯುಎಇ), ನ.02: ಸೌಹಾರ್ದ ಲಹರಿ ಸಂಘಟನೆಯ ವತಿಯಿಂದ ಆಯೋಜಿಸಲಾದ ಸೌಹಾರ್ದ ಸ್ವರ ಸಂಗಮ 2026 ಹಾಗೂ ದಿವಂಗತ ಯುವರಾಜ್ ಕೆ. ದೇವಾಡಿಗ ಸ್ಮರಣಾರ್ಥ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಕಳೆದ ಶನಿವಾರ (ಅ.24) ಗಲ್ಫ್ ರಾಷ್ಟ್ರದ ಅಜ್ಮಾನ್‌ನ ಅಲ್ ತಲ್ಲಾಹ್ ಅಲ್ಲಿನ ಹ್ಯಾಬಿಟಾಟ್ ಸ್ಕೂಲ್ ಆಡಿಟೋರಿಯಂನಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಮಿತಿಯ ಪದಾಧಿಕಾರಿಗಳು, ಮುಖ್ಯ ಅತಿಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು ಸಾಂಪ್ರದಾಯಿಕವಾಗಿ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು.

ಸೌಹಾರ್ದ ಲಹರಿಯ ಕೋರ್ ಕಮಿಟಿಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಡಾ| ಬಿ.ಆರ್.ಶೆಟ್ಟಿ, ರೊನಾಲ್ಡ್ ಮಾರ್ಟಿಸ್, ರಾಮಾನಂದ ಕುಡ್ವ, ಹರೀಶ್ ಶೇರಿಗಾರ್, ಸರ್ವೋತ್ತಮ ಶೆಟ್ಟಿ, ಮನೋಹರ್ ಹೆಗ್ಡೆ, ದಯಾ ಕಿರೋಡಿಯನ್, ದಿನೇಶ್ ದೇವಾಡಿಗ, ವಿಶ್ವನಾಥ್ ಶೆಟ್ಟಿ, ಶಶಿರೇಖಾ ಶ್ರೀಕಾಂತ್, ಸುದರ್ಶನ್ ಹೆಗ್ಡೆ,ಸುಧಾಕರ್ ಶೆಟ್ಟಿ, ಡಾ| ಸೀಮಾ ಕಾಮತ್ ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು.

ಕಲೆ ಮತ್ತು ಸಂಸ್ಕೃತಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಗಿರೀಶ್ ನಾರಾಯಣ್ ಅವರಿಗೆ ‘ಕಲಾ ಚತುರ’ ಗೌರವ ಬಿರುದು ಪ್ರದಾನಿಸಿ ಸನ್ಮಾನಿಸಿ ಅಭಿನಂದಿಸಿದರು. ಹಾಗೂ ಸಂಗೀತ ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ತಮ್ಮ ಸುಮಧುರ ಗಾಯನದ ಮೂಲಕ ಸೇವೆ ಸಲ್ಲಿಸಿರುವ ಹಾಗೂ ಸಂಗೀತಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಹರೀಶ್ ಶೇರಿಗಾರ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸೌಹಾರ್ದ ಲಹರಿಯ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 61 ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದರು. ರಕ್ತದಾನಿಗಳಿಗೆ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ : ದಿವಂಗತ ಯುವರಾಜ್ ಕೆ.ದೇವಾಡಿಗ ಸ್ಮರಣಾರ್ಥ ಗಾಯನ ಸ್ಪರ್ಧೆ ಆಯೋಜಿಸಲಾಗಿದ್ದು ಅಂತಿಮ ಸುತ್ತಿನಲ್ಲಿ ಯುಎಇಯ ವಿವಿಧ ಭಾಗಗಳಿಂದ ಆಯ್ಕೆಯಾದ ಪ್ರತಿಭಾವಂತ ಗಾಯಕರು ತಮ್ಮ ಸುಮಧುರ ಗಾಯನದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಜೂನಿಯರ್ ವಿಭಾಗದಲ್ಲಿ ಮಹದ್ಯುತ್ ಕೌಶಿಕ್ Mahadhyuth Koushik (ಪ್ರಥಮ ಬಹುಮಾನ), ಆರಾಧನಾ ಭಟ್ ಯೆಲ್ಲೂರು Aradhana Bhat Yelluru (ದ್ವಿತೀಯ), ಆನ್ವಿ ಅಕ್ಕಮ್ಮ ಎ.ಪಿ. Aanvi Accamma A.P. ಮತ್ತು ನಿಹಾನ ನೀಲಮ್ಮ ಎ.ಪಿ. Nihana Neelamma A.P. (ತೃತೀಯ) ಅಂತೆಯೇ ಸೀನಿಯರ್ ವಿಭಾಗದಲ್ಲಿ ಅನಿರುದ್ಧ್ ರಾವ್ Anirudh Rao (ಪ್ರಥಮ), ನಿಶೆಲ್ ಲೋಬೋ Nishel Lobo (ದ್ವಿತೀಯ), ಶಾನನ್ ರುತ್ ವಾಸ್ Shanon Ruth Vas (ತೃತೀಯ) ಬಹುಮಾನಕ್ಕೆ ಪಾತ್ರರಾದರು.

ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರಾಯೋಜಕರು, ಪ್ರೇಕ್ಷಕರು, ಹಿತೈಷಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಕರು ಅಭಿವಂದಿಸಿದರು. ಸೌಹಾರ್ದ ಸ್ವರ ಸಂಗಮ ೨೦೨೬ ಕೇವಲ ಸಂಗೀತ ಕಾರ್ಯಕ್ರಮವಾಗಿರದೆ, ಕನ್ನಡ ನಾಡಿನ ಕಲೆ, ಸಂಸ್ಕೃತಿ, ಪ್ರತಿಭೆ, ಸ್ನೇಹ ಮತ್ತು ಸಮುದಾಯದ ಒಗ್ಗಟ್ಟನ್ನು ಪ್ರತಿಬಿಂಬಿಸುವ ಸುಂದರ ವೇದಿಕೆಯಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ರಕ್ತದಾನದಂತಹ ಸಮಾಜಮುಖಿ ಸೇವಾ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿರುವ ಸೌಹಾರ್ದ ಲಹರಿಯ ಕಾರ್ಯವೈಖರಿ ಪ್ರಶಂಸನೀಯವಾಗಿದೆ. ವಿದೇಶಿ ನೆಲದಲ್ಲಿಯೂ ಕನ್ನಡದ ಕಂಪನ್ನು ಪಸರಿಸುವ ಹಾಗೂ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸಂಘಟನೆಯ ನಿರಂತರ ಪ್ರಯತ್ನಕ್ಕೆ ಈ ಕಾರ್ಯಕ್ರಮ ಮತ್ತೊಂದು ಸಾಕ್ಷಿಯಾಯಿತು.

ಸಂಗೀತ, ನೃತ್ಯ, ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಸಾಮಾಜಿಕ ಸೇವೆಯ ಸಂದೇಶದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಭಾಗವಹಿಸಿದ ಎಲ್ಲರ ಮನದಲ್ಲಿ ಅವಿಸ್ಮರಣೀಯ ನೆನಪುಗಳನ್ನು ಮೂಡಿಸಿತು ಎಂದು ಸಂಘಟಕರು ಸಂತಸ ವ್ಯಕ್ತ ಪಡಿಸಿದರು. ಸೌಹಾರ್ದ ಲಹರಿಯ ಗೌರವಾನ್ವಿತ ಸಂಸ್ಥಾಪಕರಾದ ಸದಾಶಿವದಾಸ್ (ದಾಸ್ ಕುಡ್ಲ) ಅವರ ಮಾರ್ಗದರ್ಶನ, ಪ್ರೋತ್ಸಾಹ, ಸಂಘಟನೆಗೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಯುಎಇಯ ವಿವಿಧ ಭಾಗಗಳಿಂದ ಆಗಮಿಸಿದ ಕನ್ನಡಿಗರು ಈ ಸಾಂಸ್ಕೃತಿಕ ಸಂಭ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕಾರ್ಯಕ್ರಮದ ಅಂಗವಾಗಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಯುಎಇ ಇಲ್ಲಿನ ಖ್ಯಾತ ಕನ್ನಡಿಗ ಗಾಯಕರಿಂದ ನಡೆದ ಕರೋಕೆ ಗಾಯನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಇದರೊಂದಿಗೆ ಶಾಸ್ತ್ರೀಯ, ಜಾನಪದ ಹಾಗೂ ಬಾಲಿವುಡ್ ನೃತ್ಯ ಪ್ರದರ್ಶನಗಳು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಿದವು. ಸಮಿತಿ ಅಧ್ಯಕ್ಷ ಕರುಣಾಕರ ಅಡ್ಯಾರ್, ಉಪಾಧ್ಯಕ್ಷ ಮಹೇಶ್ ಅತ್ತಾವರ, ಪ್ರಧಾನ ಕಾರ್ಯದರ್ಶಿ ಯಶ್ ಕರ್ಕೇರ, ಸಾಂಸ್ಕೃತಿಕ ಕಾರ್ಯದರ್ಶಿ ಅಶೋಕ್ ಅಂಚನ್, ಖಜಾಂಚಿ ಸುರೇಶ್ ಎನ್.ಶೆಟ್ಟಿ ಹಾಗೂ ಕ್ರೀಡಾ ಕಾರ್ಯದರ್ಶಿ ರಿಚಾರ್ಡ್ ಡಿಸೋಜ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದು, ಆರತಿ ಅಡಿಗ ಹಾಗೂ ಕುಮಾರಿ ಶ್ರಾವ್ಯ ಗೌಡ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಅಂಚನ್ ವಂದಿಸಿದರು.

Related posts

ಗೋಕುಲ ಸಂಕುಲದಲ್ಲಿನ ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಆಚರಿಸಲ್ಪಟ್ಟ ಶ್ರೀಕೃಷ್ಣ ಜನ್ಮಾಷ್ಟಮಿ : ಶ್ರೀಕೃಷ್ಣನ ಅನುಗ್ರಹ ಪರಮ ಪುಣ್ಯದಾಯಕವಾದುದು : ಪುತ್ತಿಗೆ ಸುಗುಣೇಂದ್ರ ತೀರ್ಥರು ;

Voiceoftulunadu

ಯೋಗ ದಿನಾಚರಣೆ| ಯೋಗವು ಕೇವಲ ದೈಹಿಕ ಕಸರತ್ತಲ್ಲ, ಇದು ಮಾನವ ಚೇತನದ ಅದ್ಭುತ ಅಭಿವ್ಯಕ್ತಿ: ಮೋದಿ;

Voiceoftulunadu

ಮೂಡುಬಿದಿರೆ: ಬಂಟರ ಮಹಿಳಾ ಘಟಕದಿಂದ ಆಟಿದ ಗೊಬ್ಬು ಪಂಥ, ತುಳು ಗೀತೆಗಳ ಗಾಯನ ಸ್ಪರ್ಧೆ;

Voiceoftulunadu

Leave a Comment