ವರದಿ /ಚಿತ್ರ: ರವಿರಾಜ್ ಕಾವೂರು
ಮೂಡುಬಿದಿರೆ: ಬಂಟರ ಸಂಘ ಮೂಡುಬಿದಿರೆ ಮತ್ತು ಬಂಟರ ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ “ತುಳು ಗೀತೆಗಳು ಗಾಯನ ಸ್ಪರ್ಧೆ ಹಾಗೂ ಆಟಿದ ಗೊಬ್ಬು ಪಂಥ” ಕಾರ್ಯಕ್ರಮವು ಭಾನುವಾರ ಹೋಟೆಲ್ ಪಂಚರತ್ನ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಆಟಿಡೊಂಜಿ ದಿನ-2026 ಆಮಂತ್ರಣ ಪತ್ರಿಕೆ ಬಿಡುಗಡೆಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರಮುಖ ಪ್ರಕಟಣೆಯೊಂದನ್ನು ಮಾಡಲಾಯಿತು.
ಮುಂಬರುವ ಆಗಸ್ಟ್ 9ರಂದು ವಿದ್ಯಾಗಿರಿಯಲ್ಲಿರುವ ಮೋಹಿನಿ ಅಪ್ಪಾಜಿ ನಾಯಕ್ ವೇದಿಕೆಯಲ್ಲಿ ಜರುಗಲಿರುವ “ಆಟಿಡೊಂಜಿ ದಿನ-2026” ಸಾಂಸ್ಕೃತಿಕ ಕಾರ್ಯಕ್ರಮದ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ಇದೇ ಸಂದರ್ಭದಲ್ಲಿ ಗಣ್ಯರು ಬಿಡುಗಡೆಗೊಳಿಸಿದರು.ಗಣ್ಯರ ಉಪಸ್ಥಿತಿಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಕಾಶಿನಿ ವಿನಯ್ ಹೆಗ್ಡೆ, ಡಾ. ಗ್ರೀಷ್ಮಾ ವಿವೇಕ್ ಆಳ್ವ ಹಾಗೂ ದಿವ್ಯಾ ವಿನಯ್ ಶೆಟ್ಟಿ ಭಾಗವಹಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಬಂಟರ ಮಹಿಳಾ ಘಟಕದ:ಕಾರ್ಯದರ್ಶಿ: ಸಂಗೀತ ಶೆಟ್ಟಿಕೋಶಾಧಿಕಾರಿ: ಗೀತಾ ಪಿ. ಶೆಟ್ಟಿಕ್ರೀಡಾ ಕಾರ್ಯದರ್ಶಿ: ಅಮೃತ ಪಿ. ಹೆಗ್ಡೆ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯದರ್ಶಿ ರಂಜಿತಾ ಶೆಟ್ಟಿ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ತುಳುನಾಡಿನ ಸಾಂಪ್ರದಾಯಿಕ ಆಟಗಳು ಹಾಗೂ ಗಾಯನ ಸ್ಪರ್ಧೆಯು ನೆರೆದಿದ್ದ ಮಹಿಳೆಯರಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು.
