November 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕರಾಗಿ ಡಾ. ಭಾರತಿ ಮರವಂತೆ ಆಯ್ಕೆ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 100 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಡಾ. ಭಾರತಿ ;

ವರದಿ / ಚಿತ್ರ: ಈ ಮೀಡಿಯಾ

ಉಡುಪಿ: ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕರಾಗಿ ಡಾ. ಭಾರತಿ ಮರವಂತೆ ಆಯ್ಕೆಯಾಗಿದ್ದಾರೆ.ಈ ನೇಮಕದೊಂದಿಗೆ ಕರಾವಳಿ ಜಿಲ್ಲೆಗಳ ಜನಪದ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಸಂರಕ್ಷಿಸುವ ಗುರುತರ ಜವಾಬ್ದಾರಿಯನ್ನು ವಹಿಸಲಾಗಿದೆ.

ಡಾ. ಭಾರತಿ ಮರವಂತೆರಂಗೋಲಿಯಲ್ಲಿ ಸಂಶೋಧನೆ, ಜಾನಪದ ಕಲೆ -ಸಾಹಿತ್ಯದಲ್ಲಿ 15 ಕ್ಕೂ ಹೆಚ್ಚು ಕೃತಿಗಳು, 100 ಕ್ಕೂ ಹೆಚ್ಚು ಲೇಖನಗಳು, ಕಿರುಯೋಜನೆಗಳು, ಕನ್ನಡ ಜಾನಪದ ನಿಘಂಟುವಿನಲ್ಲಿ ಕ್ಷೇತ್ರ ತಜ್ಞರಾಗಿ ಕೆಲಸ, ಕರ್ನಾಟಕ ಜಾನಪದ ವಿವಿಯಲ್ಲಿಬೋಧಕರಾಗಿ ಅನುಭವ, ಶಿವರಾಮ ಕಾರಂತ ಟ್ರಸ್ಟ್ ನಲ್ಲಿ ಸದಸ್ಯೆ, ಉಡುಪಿ ಜಿಲ್ಲಾ ಜಾನಪದ ಪರಿಷತ್ತಿನ ಸ್ಥಾಪಕ ಅಧ್ಯಕ್ಷೆ, ಕರ್ನಾಟಕ ನಾಟಕ ಅಕಾಡೆಮಿಯಿಂದ ಕಲಾವಿದರ ಫೆಲೋಶಿಪ್, ರಂಗೋಲಿ ಪತ್ರಿಕೆ, ರಂಗೋಲಿ ಕ್ಯಾನ್ ವಾಸ್ ಪೈಂಟಿಂಗ್, ಬೃಹತ್ ರಂಗೋಲಿ ಪ್ರದರ್ಶನ, ತಮಿಳುನಾಡಿನಲ್ಲಿ ರಂಗೋಲಿಯಲ್ಲಿ ವಿಶ್ವದಾಖಲೆ, ಮಕ್ಕಳಿಗೆ ರಂಗೋಲಿ ತರಬೇತಿ, ಸ್ವರಚಿತ ರಂಗೋಲಿ ವಿನ್ಯಾಸಗಳ ರಚನೆ ಪ್ರಕಟಣೆ ಇತ್ಯಾದಿ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 100 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಇವರು ಪಡೆದಿರುತ್ತಾರೆ.

Related posts

ಫರಂಗಿಪೇಟೆ :ಸೆ.14ರಿಂದ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಶ್ರಯದಲ್ಲಿ 44ನೇ ವರ್ಷದ “ಫರಂಗಿಪೇಟೆ ಗಣೇಶೋತ್ಸವ”;

Voiceoftulunadu

ಅನ್ನಬ್ರಹ್ಮ ಸೇವಾ ಸಮಿತಿ ಉಡುಪಿಯಿಂದ ಬಡ ಹೆಣ್ಣುಮಗಳ ಮದುವೆಗೆ ಸೀರೆಗಳ ನೆರವು ;

Voiceoftulunadu

ಡಿಜಿಟಲ್ ಯುಗದಲ್ಲಿ ಶಿಕ್ಷಕರ ಸವಾಲು, ಬದಲಾವಣೆಯ ಅನಿವಾರ್ಯತೆ: ಎಡ್ವರ್ಡ್ ಲಾರ್ಸನ್ ಡಿಸೋಜ ,ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ ;

Voiceoftulunadu

Leave a Comment