ವರದಿ /ಚಿತ್ರ : ಈ ಮೀಡಿಯಾ
ಕೊಡವೂರು:ಮಹಾತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜನವರಿ 20ರಂದು ನಡೆಯಲಿರುವ, ಬ್ರಹ್ಮಕಲಶೋತ್ಸವದ ಪ್ರಯುಕ್ತ ಪ್ರಚಾರ ಬಿತ್ತಿಪತ್ರವನ್ನು ವೇದಮೂರ್ತಿ ಪುತ್ತೂರು ಹಯವದನ ತಂತ್ರಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿಕೊಡವೂರು, ಪವಿತ್ರಪಾಣಿ ಜನಾರ್ದನ್ ಕೊಡವೂರು, ಸಮಿತಿ ಸದಸ್ಯರಾದ ಸೀತಾರಾಮ ಆಚಾರ್ಯ, ರಾಜ ಎ ಸೇರಿಗಾರ್, ವಾದಿರಾಜ ಸಾಲ್ಯಾನ್, ಪ್ರಮುಖರಾದ ಗಣೇಶ್, ವಿಜಯ ಎಂ. ಬಂಗೇರ, ಉಮೇಶ್ ರಾವ್, ಪೂರ್ಣಿಮಾ ಜನಾರ್ದನ್, ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
