ವರದಿ/ ಚಿತ್ರ : ಈ ಮೀಡಿಯಾ
ಹೆಜಮಾಡಿ: ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಅವರ ಮಾರ್ಗದರ್ಶನದಲ್ಲಿ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಹಾಗೂ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಆಗಸ್ಟ್ 1, ಶನಿವಾರ, ಬೆಳಿಗ್ಗೆ 10:00 ಗಂಟೆಗೆ ಹೆಜಮಾಡಿ ಟೈಪಾಸ್ ಟೋಲ್ ಪಾಜಾ (PWD ರಸ್ತೆ ಸಮೀಪ) ಹೆಜಮಾಡಿ ಟೋಲ್ ವಿರುದ್ಧ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಪು ಕಾಂಗ್ರೆಸ್ ಅಧ್ಯಕ್ಷ ವೈ ಸುಕುಮಾರ್ ಹೇಳಿದ್ದಾರೆ.
ಅವರು ಗುರುವಾರ ಕಾಪು ಪ್ರತಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಡುಬಿದ್ರಿ ಜಿಲ್ಲಾ ಪಂಚಾಯತ್ ಭಾಗದ ಹೆಜಮಾಡಿ, ಪಡುಬಿದ್ರಿ, ಎರ್ಮಾಳು ಮತ್ತು ಪಲಿಮಾರಿನ ಸ್ಥಳೀಯರು ಹಲವು ವರ್ಷಗಳಿಂದ ಟೋಲ್ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ವಿವಿಧ ಸಂಘ ಸಂಸ್ಥೆಗಳು, ಸ್ಥಳೀಯ ನಿವಾಸಿಗಳು ಹಾಗೂ ಜನಪ್ರತಿನಿಧಿಗಳು ಈ ಹಿಂದೆ ಅನೇಕ ಬಾರಿ ಹೋರಾಟ ನಡೆಸಿದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ.
ಪಂಚಾಯತ್ ಸಾಸ್ತಾನ ಟೋಲ್ನಲ್ಲಿ ಜಿಲ್ಲಾ ವ್ಯಾಪ್ತಿಯ ಸ್ಥಳೀಯರಿಗೆ ಸೌಲಭ್ಯ ನೀಡಲು ಸಾಧ್ಯವಾಗುತ್ತಿರುವಾಗ, ಹೆಜಮಾಡಿ ಟೋಲ್ನಲ್ಲಿ ಅದೇ ರೀತಿಯ ಸೌಲಭ್ಯ ನೀಡದಿರುವುದು ? ಒಂದೇ ರಾಷ್ಟ್ರೀಯ ಹೆದ್ದಾರಿಯ ಎರಡು ಟ್ರೋಲ್ ಪ್ರಾಜಾಗಳಲ್ಲಿ ಎರಡು ರೀತಿಯ
ನಿಯಮ ಏಕೆ? ಈ ತಾರತಮ್ಯವನ್ನು ಹೆಜಮಾಡಿ-ಪಡುಬಿದಿ ಭಾಗದ ಜನರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಸುಕುಮಾರ್ ಹೇಳಿದರು..
ಹೋರಾಟದ ಪ್ರಮುಖ ಬೇಡಿಕೆಗಳು:
PWD ರಸ್ತೆಯಲ್ಲಿರುವ ಅನಧಿಕೃತ ಟೋಲ್ ಅನ್ನು ತಕ್ಷಣ ತೆರವುಗೊಳಿಸಬೇಕು.
ಸ್ಥಳೀಯರಿಗೆ ಆಧಾರ್ ಆಧಾರಿತ ಟೋಲ್ ವಿನಾಯಿತಿಯನ್ನು ಹಿಂದಿನಂತೆ ಯಾವುದೇ ತೊಂದರೆಯಿಲ್ಲದೆ ನೀಡಬೇಕು.
ಸ್ಥಳೀಯ ವಾಹನ ಸವಾರರಿಂದ ಪ್ರತಿದಿನ ಆರ್.ಸಿ. ಹಾಗೂ ಇತರ ದಾಖಲೆಗಳನ್ನು ಕೇಳುವ ಕಿರುಕುಳವನ್ನು ನಿಲ್ಲಿಸಬೇಕು.
ಸಾಸ್ತಾನ ಟೋಲ್’ ಮಾದರಿಯಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ರಿಯ ಸ್ಥಳೀಯ ವಾಹನಗಳಿಗೆ ಶಾಶ್ವತ Local Pass ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
ಶಾಶ್ವತ వినాయతి ಸಾಧ್ಯವಾಗುವವರೆಗೆ ನ್ಯಾಯ ಸಮ್ಮತ ಹಾಗೂ ಸುಲಭವಾದ ಸ್ಥಳೀಯ ಪಾಸ್ ವ್ಯವಸ್ಥೆಯನ್ನು ತಕ್ಷಣ ಜಾರಿಗೊಳಿಸಬೇಕು.
ಸ್ಥಳೀಯ ಜನರೊಂದಿಗೆ ಟೋಲ್ ಆಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಅಧಿಕೃತ ಸಭೆ ನಡೆಸಬೇಕು.
ಸ್ಥಳೀಯರ ದೀರ್ಘಕಾಲದ ಸಮಸ್ಯೆಗೆ ನಿಗದಿತ ಕಾಲಮಿತಿ ಯೊಳಗೆ ಶಾಶ್ವತ ಪರಿಹಾರ ಘೋಷಿಸಬೇಕು.
ಸ್ಥಳೀಯರ ಅಭಿಪ್ರಾಯವನ್ನು ಪರಿಗಣಿಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು.
.
ಸ್ಥಳೀಯ ನಿವಾಸಿಗಳು ಪ್ರತಿದಿನ ಅನುಭವಿಸುತ್ತಿರುವ ಅನಗತ್ಯ ಆರ್ಥಿಕ ಹೊರೆ ಹಾಗೂ ತೊಂದರೆಗಳನ್ನು, ತಕ್ಷಣ ನಿವಾರಿಸಬೇಕು.
ಈ ಹೋರಾಟವು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧವಲ್ಲ. ಇದು ಹೆಜಮಾಡಿ-ಪಡುಬಿದ್ರಿ ಜನರ ಜಿ ನ್ಯಾಯ ಸಮ್ಮತ ಹಕ್ಕುಗಳಿಗಾಗಿ ನಡೆಯುತ್ತಿರುವ ಜನಾಂದೋಲನವಾಗಿದೆ.
ಹೆಜಮಾಡಿ ಹಾಗೂ ಪಡುಬಿದ್ರಿ ಜಿಲ್ಲಾ ಪಂಚಾಯತ್ ಭಾಗದ ಎಲ್ಲಾ ಸಂಘ-ಸಂಸ್ಥೆಗಳು, ಸಂಘಟನೆಗಳು, ಧಾರ್ಮಿಕ ಸಾಮಾಜಿಕ ಸಂಘಟನೆಗಳು, ಯುವ ಸಂಘಟನೆಗಳು, ಸಂಘಟನೆಗಳು, ಮಹಿಳಾ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಸುಕುಮಾರ್ ಆಗ್ರಹಿಸಿದರು.
ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಬೋಧ ಚಂದ್ರ ಹೆಜಮಾಡಿ, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೀಜ್ ಹುಸೇನ್, ಪಲಿಮಾರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಯಶವಂತ್ ಪಲಿಮಾರ್, ಎರ್ಮಾಳು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಿಶೋರ್ ಎರ್ಮಾಳ್, 3.2.2.2 ಕೋ-ಆರ್ಡಿನೇಟರ್ ಅಬ್ದುಲ್ ಅಜೀಜ್ ಹೆಜ್ಜಾಡಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸುಧೀರ್ ಕರ್ಕೇರ, ಪ್ರದಾನ ಕಾರ್ಯದರ್ಶಿ ಕೇಶವ್ ಸಾಲಿಯಾನ್, ಧಿಕ್ಷಾ ಉಪಸ್ಥಿತರಿದ್ದರು.
