28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ವಿಗ್ರಹ ರಚನಾ ಕಾರ್ಯಕ್ಕೆ ಮುಹೂರ್ತ: ಕುಬೇರಾ ತಂಡಕ್ಕೆ ಶಾರದಾ ಮಾತೆ, ನವ ದುರ್ಗೆಯರ ವಿಗ್ರಹ ನಿರ್ಮಾಣಕ್ಕೆ ವೀಳ್ಯ ;

ವರದಿ /ಚಿತ್ರ :ಈ ಮೀಡಿಯಾ

ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ಬಾರಿ ಐದನೇ ವರ್ಷದ ದಸರಾವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಆ ಪ್ರಯುಕ್ತ ಭಾನುವಾರ ಶಿವಮೊಗ್ಗದ ವಿಗ್ರಹ ನಿರ್ಮಾಣ ಶಿಲ್ಪಿ ಕುಬೇರಾರವರಿಗೆ ವೀಳ್ಯ ನೀಡಲಾಯಿತು.ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಶ್ರೀಶ ಆಚಾರ್ಯರವರು ಪೀಠ ಪೂಜಾ ವಿಧಿವಿದಾನಗಳನ್ನುನೆರವೇರಿಸಿದರು.

ಈ ಸಂದರ್ಭ ಶಿಲ್ಪಿ ಕುಬೇರಾರವರು ಮಾತನಾಡಿ, ನಮ್ಮತಂಡ 18 ವರ್ಷಗಳಿಂದ ದಸರಾ ಮೂರ್ತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಕಳೆದ ಐದು ವರ್ಷಗಳಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ಶಾರದೆ ಸಹಿತ ಒಂಬತ್ತು ಮೂರ್ತಿಗಳನ್ನು ರಚಿಸುತ್ತಿದ್ದೇವೆ. ನಮ್ಮ ತಂಡದ್ದಲ್ಲಿ 12 ಕಲಾವಿದರಿದ್ದಾರೆ. ದೇವಳದ ಆಡಳಿತ ಮಂಡಳಿ ತುಂಬು ಹೃದಯದ ಸಹಕಾರನೀಡಿದೆ ಎಂದರು.

ಈ ಸಂದರ್ಭ ದೇವಳದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ವಾಸುದೇವ ಕೋಟ್ಯಾನ್, ಗುಂಡು ಬಿ. ಅಮೀನ್, ನಾರಾಯಣ ಕರ್ಕೇರಾ, ಮೋಹನ ಬಂಗೇರಾ ಕಾಪು, ಸುಗುಣ ಕರ್ಕೇರಾ, ದಿನೇಶ್ ಮೂಳೂರು, ಯಾದವ್ ವಿಕೆ, ಮನೋಜ್ ಕೋಟ್ಯಾನ್ ಬ್ರಹ್ಮಗಿರಿ, ದೇವಳದ ಪ್ರಬಂಧಕ ಸತೀಶ್ ಸಾಲ್ಯಾನ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.

Related posts

ನೀಟ್ ಚಳವಳಿಯ ಪ್ರೇರಣೆ: ಈಗ ‘E20 ಜನತಾ ಪಕ್ಷ’ ಹುಟ್ಟು, 100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ;

Voiceoftulunadu

ಅಖಿಲ ಭಾರತ ದೈವರಾಧಾಕರ ಒಕ್ಕೂಟ ಕೇಂದ್ರೀಯ( ರಿ) ಉಡುಪಿ ತಂಡದ ವತಿಯಿಂದ ಪುತ್ತೂರು ವಿಧಾನಸಭಾ ಶಾಸಕರಾದ ಅಶೋಕ್ ರೈಯವರನ್ನು ಅವರ ಕಚೇರಿಯಲ್ಲಿ ಭೇಟಿ : ಒಕ್ಕೂಟದ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಮನವಿ;

Voiceoftulunadu

ಅನ್ನಬ್ರಹ್ಮ ಸೇವಾ ಸಮಿತಿ ಉಡುಪಿಯಿಂದ ಬಡ ಹೆಣ್ಣುಮಗಳ ಮದುವೆಗೆ ಸೀರೆಗಳ ನೆರವು ;

Voiceoftulunadu

Leave a Comment