28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಕರಾವಳಿಗೆ ಹೈಕೋರ್ಟ್ ಪೀಠದ ಬೇಡಿಕೆ : ಉಡುಪಿಯಲ್ಲಿ ಬೃಹತ್ ಜನಾಂದೋಲನ;

ವರದಿ /ಚಿತ್ರ :ವಿನೋದ್ ಶೆಟ್ಟಿ ಉಡುಪಿ

ಹೋರಾಟದ ವಿವರ :ದಿನಾಂಕ: 22.08.2026, ಶನಿವಾರ- *ಸಮಯ*: ಮಧ್ಯಾಹ್ನ 3.00 ರಿಂದ 5.00 ರವರೆಗೆ.

ಸ್ಥಳ: MGM ಕಾಲೇಜು, ರವೀಂದ್ರ ಮಂಟಪ, ಉಡುಪಿ

ಆಯೋಜಕರು : ಟೀಂ ಯು- ಆಕ್ಟ್ – ಉಡುಪಿ ಅಡ್ವೊಕೇಸಿ ಆಫ್ ಕನ್ಸ್ಯೂಮರ್ಸ್ ಆಂಡ್ ಸಿಟಿಜನ್ಸ್ (Team U-ACT – Udupi Advocacy of Consumers & ciTizens).ಈ ಜನಾಂದೋಲನದಲ್ಲಿ ಸಾರ್ವಜನಿಕರು, ವಕೀಲರು, ವಿದ್ಯಾರ್ಥಿಗಳು ಮತ್ತು ಎಲ್ಲಾ ಸಾಮಾಜಿಕ ಸಂಘಟನೆಗಳವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಯು ಆಕ್ಟ್ (U-ACT) ಮನವಿ ಮಾಡಿದೆ.

ಕರಾವಳಿಗೆ ಹೈಕೋರ್ಟ್ ಪೀಠ ಯಾಕೆ ಅಗತ್ಯ?:U-ACT ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕರಾವಳಿ ಜನರು ಪ್ರತಿದಿನ ಎದುರಿಸುತ್ತಿರುವ ಸಂಕಷ್ಟಗಳು ಹೀಗಿವೆ:

350+ ಕಿ.ಮೀ ಪ್ರಯಾಣಕ್ಕೆ ವಿದಾಯ ಉಡುಪಿ, ದ.ಕ, ಉ.ಕ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಜನರು ಪ್ರತಿ ಕೋರ್ಟ್ ಕೆಲಸಕ್ಕೂ ಬೆಂಗಳೂರಿಗೆ ಅಲೆಯಬೇಕಿದೆ. ಈ ದೀರ್ಘ ಪ್ರಯಾಣದಿಂದ ಮುಕ್ತಿ.

ಲಕ್ಷಾಂತರ ರೂಪಾಯಿ ಉಳಿತಾಯ ಪ್ರಯಾಣ, ಹೋಟೆಲ್, ವಕೀಲರ ಶುಲ್ಕ ಮತ್ತು ಇತರೆ ಖರ್ಚುಗಳು ಗಣನೀಯವಾಗಿ ಕಡಿಮೆಯಾಗಲಿವೆ.ತ್ವರಿತ ನ್ಯಾಯ(Quick Justice) – ವರ್ಷಗಟ್ಟಲೆ ಬಾಕಿ ಉಳಿಯುತ್ತಿರುವ ಕೇಸ್‌ಗಳು ಸ್ಥಳೀಯವಾಗಿಯೇ ಬೇಗ ಇತ್ಯರ್ಥವಾಗುವ ನಿರೀಕ್ಷೆ.ಸಾಮಾನ್ಯರಿಗೂ ಉನ್ನತ ನ್ಯಾಯದ ಬಾಗಿಲು: ಬಡ ಮತ್ತು ಮಧ್ಯಮ ವರ್ಗದವರಿಗೆ ಹೈಕೋರ್ಟ್‌ಗೆ ಹೋಗುವುದು ಸುಲಭವಾಗಲಿದೆ.

ಸ್ಥಳೀಯ ಸಮಸ್ಯೆಗೆ ತಕ್ಷಣ ಪರಿಹಾರ: CRZ ನಿಯಮ, ಮೀನುಗಾರಿಕೆ, ಬಂದರು, ಭೂ ಕಬಳಿಕೆ – ಕರಾವಳಿಯ ವಿಶೇಷ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ನ್ಯಾಯ.ಹಿರಿಯರು ಮತ್ತು ಮಹಿಳೆಯರಿಗೆ ಅನುಕೂಲ: ದೂರ ಪ್ರಯಾಣದ ಕಷ್ಟವಿಲ್ಲದೆ, ಹತ್ತಿರದಲ್ಲೇ ಕೋರ್ಟ್‌ಗೆ ಹಾಜರಾಗಬಹುದು.

ಕೆಳಹಂತದ ಕೋರ್ಟ್‌ಗಳಿಗೆ ವೇಗ: ಹೈಕೋರ್ಟ್ ಪೀಠ ಬಂದರೆ ಅಧೀನ ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆಯಾಗಿ ಕೆಲಸ ಚುರುಕಾಗುತ್ತದೆ.

ಕರಾವಳಿ ಅಭಿವೃದ್ಧಿಗೆ ಹೊಸ ಚೈತನ್ಯ: ನೂತನ ಪೀಠದಿಂದ ಮೂಲಸೌಕರ್ಯ, ಉದ್ಯೋಗ ಮತ್ತು ಪ್ರದೇಶದ ಆರ್ಥಿಕತೆಗೆ ದೊಡ್ಡ ಉತ್ತೇಜನ.

ಹಿನ್ನೆಲೆ:ಕಳೆದ 20 ವರ್ಷಗಳಿಂದ ಕರಾವಳಿಯ 5 ಜಿಲ್ಲೆಗಳ ಸುಮಾರು 1 ಕೋಟಿ ಜನರು ನ್ಯಾಯಕ್ಕಾಗಿ 350 ಕಿ.ಮೀ ದೂರದ ಬೆಂಗಳೂರನ್ನೇ ಅವಲಂಬಿಸಿದ್ದಾರೆ. ಇದರಿಂದ ಸಮಯ, ಹಣ ಮತ್ತು ಮಾನಸಿಕ ಒತ್ತಡ ವಿಪರೀತವಾಗಿದೆ.”ನ್ಯಾಯ ಎಲ್ಲರಿಗೂ ಸಮೀಪದಲ್ಲಿ ಸಿಗಬೇಕು” ಎಂಬ ಸಂವಿಧಾನಾತ್ಮಕ ಹಕ್ಕಿಗಾಗಿ ಈ ಹೋರಾಟ ನಡೆಯುತ್ತಿದೆ.

U-ACT ಸಂಘಟನೆಯು “ಕರಾವಳಿಗೆ ನ್ಯಾಯ” ಎಂಬ ಘೋಷವಾಕ್ಯದೊಂದಿಗೆ ಜನರನ್ನು ಒಗ್ಗೂಡಿಸುತ್ತಿದೆ.

ನಿಮ್ಮ ಕೈಜೋಡಿಸಿ:ಕರಾವಳಿಯ ಭವಿಷ್ಯ ಮತ್ತು ಮುಂದಿನ ಪೀಳಿಗೆಯ ಅನುಕೂಲಕ್ಕಾಗಿ ನಡೆಯುತ್ತಿರುವ ಈ ಐತಿಹಾಸಿಕ ಹೋರಾಟದಲ್ಲಿ ಕೈಜೋಡಿಸಿ.

Date: 22.08.2026 (Saturday), Time: 3 PM to 5 PM, Venue: MGM College (Raveendra Mantapa), Udupi*

Related posts

ನಮ್ಮನ್ನು ನಾವು ಉಳಿಸಿ ಕೊಳ್ಳಲು ಮರ ಗಿಡಗಳನ್ನು ಬೆಳೆಸೋಣ – ಕೇಶವ ಪೂಜಾರಿ:ಉಡುಪಿ ಗಸ್ತು ಅರಣ್ಯ ಪಾಲಕ ಕೇಶವ ಪೂಜಾರಿ;

Voiceoftulunadu

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿದ ರೋಹನ್ ಕಾರ್ಪೊರೇಷನ್ ;

Voiceoftulunadu

ಫಿಫಾ ವಿಶ್ವಕಪ್: ಅಂದು ಮೆಸ್ಸಿ ಸ್ನಾನ ಮಾಡಿಸಿದ್ದ ಮಗು ಇಂದು ಫೈನಲ್ನಲ್ಲಿ ಎದುರಾಳಿ!!

Voiceoftulunadu

Leave a Comment