29.5 C
ಮಂಗಳೂರು
September 4, 2026
Uncategorizedಅಂತಾರಾಷ್ಟ್ರೀಯಉದ್ಯೋಗ/ಶಿಕ್ಷಣಕೃಷಿ/ಭೌಗೋಳಿಕಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಬೆಂಗಳೂರು ವಲಯಕ್ಕೆ ನೂತನ ಸಾರಥ್ಯಅಧ್ಯಕ್ಷರಾಗಿ ಪುರುಷೋತ್ತಮ ಚೇಂಡ್ಲ, ,ಪ್ರಧಾನ ಸಂಚಾಲಕರಾಗಿ ಶಾಂತಾರಾಮ್ ವಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ಸಾಲ್ಯಾನ್ ಆಯ್ಕೆ ;

ಬೆಂಗಳೂರು : ತುಳುವ ಮಹಾಸಭೆ 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಹಿನ್ನೆಲೆಯಲ್ಲಿ, ತುಳು ಚಳವಳಿ, ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ತುಳುವರ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆರಂಭಿಸಲಾದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಬೆಂಗಳೂರು ವಲಯಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಶ್ರೀ ಪುರುಷೋತ್ತಮ ಚೇಂಡ್ಲ – ಅಧ್ಯಕ್ಷರು,ಶ್ರೀ ಶಾಂತಾರಾಮ್ ವಿ. ಶೆಟ್ಟಿ – ಪ್ರಧಾನ ಸಂಚಾಲಕರು,ಶ್ರೀ ಶಿವಾನಂದ ಸಾಲ್ಯಾನ್ – ಪ್ರಧಾನ ಕಾರ್ಯದರ್ಶಿ.ಪುರುಷೋತ್ತಮ ಚೇಂಡ್ಲ ಸಂಘಟನಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿರುವ ಶ್ರೀ ಪುರುಷೋತ್ತಮ ಚೇಂಡ್ಲ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಪಡೆದಿದ್ದು, ಬಿಸಿನೆಸ್ ಅಂಡ್ ಇಂಡಸ್ಟ್ರಿಯಲ್ ಮ್ಯಾನೇಜ್‌ಮೆಂಟ್ ಹಾಗೂ ಲೇಬರ್ ಲಾ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.

ದಿ ಕ್ಯಾಂಪ್ಕೋ ಲಿಮಿಟೆಡ್‌ನಲ್ಲಿ ಏರಿಯಾ ಸೇಲ್ಸ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.ತುಳು–ಕನ್ನಡ ನಾಟಕಗಳ ರಚನೆ, ನಿರ್ದೇಶನ ಹಾಗೂ ಅಭಿನಯದಲ್ಲಿ ಆಸಕ್ತಿ ಹೊಂದಿರುವ ಅವರು ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ಕುಲಾಲ ಸಂಘದಲ್ಲಿ ಕಾರ್ಯದರ್ಶಿಯಾಗಿ ಹಾಗೂ ಮೂರು ಬಾರಿ ಅಧ್ಯಕ್ಷರಾಗಿ, ಸುಮಾರು 35 ವರ್ಷಗಳ ಕಾಲ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ತುಳುವರ ಚಾವಡಿ ಬೆಂಗಳೂರು ಸಂಸ್ಥೆಯ ಸ್ಥಾಪಕ ಉಪಾಧ್ಯಕ್ಷರಾಗಿ ಹಾಗೂ ಒಂದು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಗೌರವಾಧ್ಯಕ್ಷರಾಗಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.ಅವರ ಸಂಘಟನೆ ಹಾಗೂ ಸಮಾಜಸೇವೆಯನ್ನು ಗುರುತಿಸಿ ಶ್ರೀ ಸಾಯಿರಾಮ್ ಸೇವಾರತ್ನ, ಸಂಘಟನಾ ಬ್ರಹ್ಮ ಬಾಲೋಡಿ ಮಹಾಬಲ ಹಾಂಡ, ತುಳುನಾಡಿನ ಬೊಳ್ಳಿ, ಕರ್ನಾಟಕ ನಾಡ ಪೋಷಕ, ಕರ್ನಾಟಕ ಕಲಾ ಸಂಪದ, ಕುಲಾಲ ಕಿರೀಟ, ಬಲಿಯೇಂದ್ರ ಪುರಸ್ಕಾರ ಹಾಗೂ ಸಮಾಜ ಸೇವಾರತ್ನ ಸೇರಿದಂತೆ ಹಲವು ಪ್ರಶಸ್ತಿ–ಪುರಸ್ಕಾರಗಳು ದೊರೆತಿವೆ.

ಶಾಂತಾರಾಮ್ ವಿ. ಶೆಟ್ಟಿಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಉಡುಪಿಯ ಶ್ರೀ ಶಾಂತಾರಾಮ್ ವಿ. ಶೆಟ್ಟಿ ಅವರು ವಿಜ್ಞಾನ ಪದವೀಧರರಾಗಿದ್ದು, ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ತುಳು ಸಾಹಿತ್ಯ, ಸಂಗೀತ, ಭಾಷೆ ಹಾಗೂ ಸಂಸ್ಕೃತಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಅವರ ‘ಮಣ್ಣ ಬಾಜನ’ ಕವನ ಸಂಕಲನಕ್ಕೆ ತುಳು ಅಕಾಡೆಮಿಯ ಪುಸ್ತಕ ಪ್ರಶಸ್ತಿ ದೊರೆತಿದೆ.

ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಮೂರು ಬಾರಿ ಭಾಗವಹಿಸಿದ್ದಾರೆ.ಐಲೇಸಾ – ದಿ ವಾಯ್ಸ್ ಆಫ್ ಓಷನ್ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ ತುಳು ಸಂಗೀತವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಗೀತ ಸಾಮ್ರಾಟ್ ವಿ. ಮನೋಹರ್ ಅವರೊಂದಿಗೆ ಸುಮಾರು 35 ತುಳು ಹಾಡುಗಳನ್ನು ಬಿಡುಗಡೆ ಮಾಡಲು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಷನ್ ಮೂಲಕ ತುಳು ಭಾಷೆಯ ಮೂಲ ಸ್ವರೂಪವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಿರಿಯ ಸಾಧಕರನ್ನು ಗೌರವಿಸುವ ‘ವಯೋ ಸಮ್ಮಾನ್’ ಯೋಜನೆಯ ಮೂಲಕ ಸಾಹಿತ್ಯ, ಸಂಗೀತ ಹಾಗೂ ಭಾಷಾ ಕ್ಷೇತ್ರದ ಹಿರಿಯರನ್ನು ಸನ್ಮಾನಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ.

ಶಿವಾನಂದ ಸಾಲ್ಯಾನ್ಯುವ ಸಂಘಟನೆಯ ಶಕ್ತಿಯಾಗಿ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್ಲು ಗ್ರಾಮದ ಶ್ರೀ ರಾಜ ಪೂಜಾರಿ ಹಾಗೂ ಶ್ರೀಮತಿ ಪುಷ್ಪ ಪೂಜಾರಿ ದಂಪತಿಯ ಪುತ್ರರಾದ ಶ್ರೀ ಶಿವಾನಂದ ಸಾಲ್ಯಾನ್ ಅವರು ಎಂ.ಎಸ್.ಆರ್.ಎಸ್. ಕಾಲೇಜು, ಶಿರ್ವದಲ್ಲಿ ಶಿಕ್ಷಣ ಪಡೆದಿದ್ದಾರೆ.ನೆಲಮಂಗಲದ ಆಸ್ಕೋ ಸ್ಟೀಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು ಪ್ರಸ್ತುತವೂ ಅದೇ ಸಂಸ್ಥೆಯಲ್ಲಿ ಸೇವೆ ಮುಂದುವರಿಸಿದ್ದಾರೆ.

ಬೆಂಗಳೂರಿನ ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಬಿಲ್ಲವ ಯುವ ಘಟಕದ ಅಧ್ಯಕ್ಷರಾಗಿ ಹಾಗೂ ಕ್ರೀಡಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪವರ್ ಫ್ರೆಂಡ್ಸ್ ಬೆಂಗಳೂರು (ರಿ.) ಸಂಸ್ಥೆಯ ಅಧ್ಯಕ್ಷರಾಗಿ ಹಲವು ಕ್ರೀಡಾ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ನಡೆಸಿದ್ದಾರೆ.ತುಳು ಭಾಷೆಗೆ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ನಡೆದ ಹೋರಾಟಗಳಲ್ಲಿ ಭಾಗವಹಿಸಿರುವ ಅವರು, ಕಂಬಳ ನಿಷೇಧದ ವಿರುದ್ಧ ಟಿ. ದಾಸರಹಳ್ಳಿಯಿಂದ ಫ್ರೀಡಂ ಪಾರ್ಕ್‌ವರೆಗೆ ನೂರಕ್ಕೂ ಹೆಚ್ಚು ಯುವಕರನ್ನು ಸೇರಿಸಿ ಬೃಹತ್ ಬೈಕ್ ರ‍್ಯಾಲಿ ನಡೆಸಿ ಕಂಬಳಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಬೆಂಗಳೂರಿನ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದರ ಜೊತೆಗೆ, ಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಸಮಾಜಮುಖಿ ಸೇವೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ತುಳು ಸಂಘಟನೆಗೆ ಮತ್ತಷ್ಟು ಬಲಈ ಮೂವರು ನೂತನ ಪದಾಧಿಕಾರಿಗಳ ಅನುಭವ, ಸಂಘಟನಾ ಶಕ್ತಿ ಹಾಗೂ ತುಳು ಭಾಷೆ–ಸಂಸ್ಕೃತಿಯ ಮೇಲಿನ ಪ್ರೀತಿಯನ್ನು ಒಗ್ಗೂಡಿಸಿಕೊಂಡು ಬೆಂಗಳೂರಿನ ತುಳುವರನ್ನು ಸಂಘಟಿಸಿ, ತುಳು ಭಾಷೆ, ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸಲು ಮತ್ತಷ್ಟು ಶಕ್ತಿ ನೀಡುವ ನಿರೀಕ್ಷೆ ಇದೆ.

ಈ ನೇಮಕವನ್ನು ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಹಾಗೂ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು ನೆರವೇರಿಸಿದ್ದು, ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಹಾಗೂ ಶುಭ ಹಾರೈಸಿದ್ದಾರೆ.ಅದೇ ರೀತಿ ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀ ಶ್ರೀಹರಿನಾರಾಯಣದಾಸ ಅಸ್ರಣ್ಣ ಕಟೀಲ್, ಅಧ್ಯಕ್ಷರಾದ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ನಿರ್ದೇಶಕರಾದ ಡಾ. ರಾಜೇಶ್ ಕೃಷ್ಣ ಆಳ್ವ ಅವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ, ಅವರ ಸೇವೆಯ ಮೂಲಕ ಬೆಂಗಳೂರು ವಲಯದಲ್ಲಿ ತುಳು ಸಂಘಟನೆ ಮತ್ತಷ್ಟು ಬಲಿಷ್ಠವಾಗಲಿ ಎಂದು ಶುಭ ಹಾರೈಸಿದ್ದಾರೆ.

Related posts

ಕಪಸಮ -ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದಿಂದ ಪತ್ರಕರ್ತರ ದಿನಾಚರಣೆ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀಪ್ರಶಸ್ತಿ ಪ್ರದಾನ;

Voiceoftulunadu

ವಾರ್ಷಿಕ ಸಂತ ಉತ್ಸವ ಸಂಭ್ರಮಿಸಿದ ಸೈಂಟ್ ಪೀಟರ್‍ಸ್ ಅಸೋಸಿಯೇಶನ್ ಮುಂಬಯಿ ಸಂತೋತ್ಸವಗಳು ಸಾಮಾಜಿಕ ಜವಾಬ್ದಾರಿ ಅರಿವಿಗೆ ಪೂರಕ : ಫಾ| ಐವಾನ್ ಡಿಅಲ್ಮೇಡಾ;

Voiceoftulunadu

ಗ್ರಾಹಕರಿಗೆ ನೀಡುವ ಪ್ರಾಮಾಣಿಕ ಸೇವೆಯಿಂದ ಆತ್ಮತೃಪ್ತಿ ಲಭಿಸಲಿದೆ: ಪ್ರಭಾಕರ ಪ್ರಭು.

Voiceoftulunadu

Leave a Comment