28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ತೆಂಕ ಎರ್ಮಾಳು ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮಲ್ಲಿಕಾರವರಿಗೆ ಹಳೇ ವಿಧ್ಯಾರ್ಥಿ ಸಂಘದ ಸನ್ಮಾನ;

ವರದಿ /ಚಿತ್ರ:ಇ ಮೀಡಿಯಾ

ತೆಂಕ ಎರ್ಮಾಳು: ತೆಂಕ ಎರ್ಮಾಳು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶ್ರೀಮತಿ ಮಲ್ಲಿಕಾರವರಿಗೆ ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನ ಕಾರ್ಯಕ್ರಮವು ಭಾನುವಾರ ಶಾಲಾ ಸಭಾ ಭವನದಲ್ಲಿ ಜರುಗಿತು.

ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ, ಶಿಕ್ಷಕಿ ಮಲ್ಲಿಕಾರವರ ಮುಂದಿನ ಜೀವನವು ಸುಖ ಸಂತೋಷಗಳಿಂದ ಕೂಡಿರಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರು, ಮಲ್ಲಿಕಾರವರ ವೃತ್ತಿ ಜೀವನವು ಇನ್ನಷ್ಟು ಉತ್ತಮವಾಗಿರಲಿ. ಬಯಸಿದ ಭಾಗ್ಯಗಳು ನಿಮ್ಮದಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಶೀಲಾ ಕೆ ಶೆಟ್ಟಿ ಉಪಸ್ಥಿತರಿದ್ದು, ಅವರು ಶುಭಹಾರೈಸಿದರು.ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಶಾರದಾ ಕೆ. ಪೂಜಾರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೇಶವ ಮೊಯ್ಲಿ, ಮುಖ್ಯೋಪಾಧ್ಯಾಯನಿ ವಿನೋದ, ಮಲ್ಲಿಕಾರವರ ಅರಣ್ಯಾಧಿಕಾರಿ ಕೇಶವ ಶಾಲಾ ಶ್ರೀಮತಿ ಪತಿ,ಪೂಜಾರಿಯವರು ಸಮಯೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಮಲಾ ಕೆ. ಸಾಲ್ಯಾನ್, ಮುಸ್ತಾಕ್ ಅಹಮದ್, ಸುಕೇಶ್ ಪೂಜಾರಿ, ರವಿಕಿರಣ್ ಶೆಟ್ಟಿ, ಜಯಶ್ರೀ ಪೂಜಾರಿ, ರತ್ನಾಕರ ಕೋಟ್ಯಾನ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು.ಶ್ರೀಮತಿ ರೇಷ್ಮಾರವರು ಪ್ರಾರ್ಥಿಸಿದರು. ಯಶವಂತ್ ಸ್ವಾಗತಿಸಿದರು. ಶ್ರೀಮತಿ ಸಂಗೀತ ಸನ್ಮಾನ ಪತ್ರವನ್ನು ವಾಚಿಸಿದರು. ಕೇಶವ ಮೊಯ್ಲಿಯವರು ಕಾರ್ಯಕ್ರಮ ನಿರೂಪಿಸಿದರು. ವಿಮಲಾ ಕೆ ಸಾಲ್ಯಾನ್ ವಂದಿಸಿದರು.

Related posts

ಅಕ್ಷರ ತಪಸ್ವಿನಿ, ಕ್ರೀಡಾಂಗಣದ ಜಿಂಕೆ: ಮಣ್ಣಿನ ಮಗಳು ಗೀತಾ ಎ. ಶೆಟ್ಟಿ ಅವರ ಯಶೋಗಾಥೆ”

voiceoftulunadu

ರಕ್ಷಾಬಂಧನ: ಪ್ರೀತಿ, ತ್ಯಾಗ, ರಕ್ಷಣೆ ಮತ್ತು ನಂಬಿಕೆಯ ಪವಿತ್ರ ದಾರ ;

Voiceoftulunadu

ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಶಾಲೆಯಲ್ಲಿ ಧರ್ಮಸ್ಥಳ ಗಾ. ಯೋಜನೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ: ಕಾರ್ಯಕ್ರಮ ಉದ್ಘಾಟಿಸಿದ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ದೇವದಾಸ್‌ ಹೆಬ್ಬಾ‌ರ್ ;

Voiceoftulunadu

Leave a Comment