November 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ದರ್ಪಣ ಮಹಿಳಾ ಪಿಲಿ ತಂಡದಿಂದ ಕ್ಯಾನ್ಸರ್ ಪೀಡಿತ ಎರಡು ಮಕ್ಕಳಿಗೆ ಸಹಾಯ ಹಸ್ತ : ಚಿಕಿತ್ಸೆ ಯಲ್ಲಿರುವ ಇಬ್ಬರು ಮಕ್ಕಳಿಗೆ ತಲಾ ₹1.50 ಲಕ್ಷ ಚಿಕಿತ್ಸಾ ನೆರವು ;

ವರದಿ/ ಚಿತ್ರ: ಈ ಮೀಡಿಯಾ

ಮಣಿಪಾಲ: ದರ್ಪಣ ಮಹಿಳಾ ಪಿಲಿ ತಂಡದ ವತಿಯಿಂದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ (Department of Paediatric Oncology) ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಮಕ್ಕಳಿಗೆ ಒಟ್ಟು ₹1, 50,000 ಚಿಕಿತ್ಸಾ ನೆರವನ್ನು ನೀಡಲಾಯಿತು.

ಈ ನೆರವು ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ಸಹಕಾರಿಯಾಗುವ ಉದ್ದೇಶದಿಂದ ನೀಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಕುಟುಂಬಗಳಿಗೆ ಬೆಂಬಲವಾಗುವಂತೆ ಈ ಮೊತ್ತವನ್ನು ಒದಗಿಸಲಾಗಿದೆ.

ಈ ಕಾರ್ಯವು ದರ್ಪಣ ಮಹಿಳಾ ಪಿಲಿ ತಂಡದ ಪ್ರಯತ್ನಕ್ಕೆ ಮಾತ್ರ ಸೀಮಿತವಾಗಿಲ್ಲ. ತಂಡದೊಂದಿಗೆ ನಿರಂತರವಾಗಿ ಕೈಜೋಡಿಸುತ್ತಿರುವ ಮಕ್ಕಳು, ಪೋಷಕರು, ಹಿತೈಷಿಗಳು, ಅಭಿಮಾನಿಗಳು ಹಾಗೂ ಬೆಂಬಲಿಗರ ಪ್ರೀತಿ ಮತ್ತು ಸಹಕಾರದ ಫಲವಾಗಿ ಈ ನೆರವನ್ನು ನೀಡಲು ಸಾಧ್ಯವಾಯಿತು.

ಈ ಸಂದರ್ಭದಲ್ಲಿ ದರ್ಪಣ ಮಹಿಳಾ ಪಿಲಿ ತಂಡವು ತಮ್ಮೊಂದಿಗೆ ನಿಂತ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದೆ. ವಿಶೇಷವಾಗಿ ತಂಡದ ಮಕ್ಕಳ ಪೋಷಕರು ನೀಡಿದ ನಿರಂತರ ಪ್ರೋತ್ಸಾಹ, ಸಹಕಾರ ಮತ್ತು ಬೆಂಬಲವನ್ನು ತಂಡ ಸ್ಮರಿಸಿದೆ.

“ಈ ಚಿಕಿತ್ಸಾ ನೆರವು ನಮ್ಮೆಲ್ಲರ ಒಗ್ಗಟ್ಟಿನ ಪ್ರಯತ್ನದ ಪ್ರತಿಫಲ.ನಮ್ಮೊಂದಿಗೆ ನಿಂತ ಪ್ರತಿಯೊಬ್ಬರ ಪ್ರೀತಿ, ವಿಶ್ವಾಸ ಮತ್ತು ಸಹಕಾರವೇ ಈ ಕಾರ್ಯಕ್ಕೆ ಶಕ್ತಿ ನೀಡಿದೆ. ಮುಂದೆಯೂ ಸಮಾಜಕ್ಕೆ ಅರ್ಥಪೂರ್ಣವಾಗುವಂತಹ ಕಾರ್ಯಗಳನ್ನು ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ,” ಎಂದು ದರ್ಪಣ ಮಹಿಳಾ ಪಿಲಿ ತಂಡ ತಿಳಿಸಿದೆ.

ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಮಕ್ಕಳ ಶೀಘ್ರ ಚೇತರಿಕೆಗಾಗಿ ತಂಡ ಹಾರೈಸಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ತೊಡಗಿಸಿಕೊಳ್ಳುವ ಕಾರ್ಯಗಳಲ್ಲಿ ಸಂಕಲ್ಪವನ್ನು ವ್ಯಕ್ತಪಡಿಸಿದೆ.ಕಲೆಯೊಂದಿಗೆ ಸಾಮಾಜಿಕ ಕಾಳಜಿಯ ಹೆಜ್ಜೆ” “ದರ್ಪಣ ಮಹಿಳಾ ಪಿಲಿ ತಂಡ.

Related posts

ಉಡುಪಿ; ಕೃಷ್ಣನ ನಾಡಲ್ಲಿ ಅಷ್ಟಮಿ ಸಿದ್ದತೆ, ವಿಟ್ಲಪಿಂಡಿ ಸಂಭ್ರಮ ಅಬ್ಬರಿಸಲಿದ್ದಾರೆ ಹುಲಿ ವೇಷಧಾರಿಗಳು, ಮೊಸರು ಕುಡಿಕೆ ;

Voiceoftulunadu

ಲಾವಣ್ಯ ಹತ್ಯಾ ಪ್ರಕರಣ: ಹಂತಕ ಚೇತನ್ ಗೆ ನ್ಯಾಯಾಂಗ ಬಂಧನಬಿ.ಸಿ.ರೋಡಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯ ಹತ್ಯೆಗೈದ ಪ್ರಕರಣ;

Voiceoftulunadu

ಮುಲ್ಕಿ ಸೀಮೆ ಅರಸು ಕಂಬಳ ಸಮಿತಿಯಿಂದ ಹಳೆಯಂಗಡಿಯಲ್ಲಿ ಮೂಲ್ಕಿ ಸೀಮೆ ಅರಸು ಕಂಬಳದ ಕುರಿತಾದ ಸಭೆ ;

Voiceoftulunadu

Leave a Comment