ಉಡುಪಿ: ಸ್ವಾತಂತ್ರ್ಯಾನಂತರ ಭಾರತ ತನ್ನ ಆರ್ಥಿಕ ಚಟುವಟಿಕೆಗಳನ್ನು ಮುಖ್ಯವಾಗಿ ಸರಕಾರಿ, ಖಾಸಗಿ ಮತ್ತು ಸಹಕಾರಿ ಎಂಬ ಮೂರು ವ್ಯವಸ್ಥೆಗಳ ಮೂಲಕ ಮುನ್ನಡೆಸಿದೆ. ಮೂರು ವ್ಯವಸ್ಥೆಗಳಿಗೂ ತಮ್ಮದೇ ಆದ ಶಕ್ತಿ ಮತ್ತು ಮಿತಿಗಳಿವೆ. ಆದರೆ ಅಂತಿಮವಾಗಿ ಪ್ರಶ್ನೆ ಒಂದೇ ಜನಸಾಮಾನ್ಯನಿಗೆ ಉತ್ತಮ ಸೇವೆ, ನ್ಯಾಯಯುತ ಬೆಲೆ ಮತ್ತು ಆರ್ಥಿಕ ಭದ್ರತೆ ಸಿಗುತ್ತಿದೆಯೇ?ಸರಕಾರಿ ವ್ಯವಸ್ಥೆಯು ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದೆ.
ಆದರೆ ಅಧಿಕಾರಶಾಹಿ ವಿಳಂಬ, ಕೆಂಪುಪಟ್ಟಿ, ಭ್ರಷ್ಟಾಚಾರ, ಮಧ್ಯವರ್ತಿತನ ಮತ್ತು ಜವಾಬ್ದಾರಿತನದ ಕೊರತೆಗಳ ಬಗ್ಗೆ ಜನರ ಅಸಮಾಧಾನವೂ ಇದೆ.ಖಾಸಗಿ ಕ್ಷೇತ್ರವು ಸ್ಪರ್ಧೆ, ಗುಣಮಟ್ಟ ತಂತ್ರಜ್ಞಾನ ಮತ್ತು ವೇಗದ ಸೇವೆಯಲ್ಲಿ ಹೊಸ ಮಾನದಂಡಗಳನ್ನು ನಿರ್ಮಿಸಿದೆ. ಆದರೆ ಮಾರುಕಟ್ಟೆ ಕೆಲವೇ ದೊಡ್ಡ ಸಂಸ್ಥೆಗಳ ಕೈಯಲ್ಲಿ ಹೆಚ್ಚು ಕೇಂದ್ರೀಕೃತವಾದಾಗ ಸ್ಪರ್ಧೆ, ಬೆಲೆ ಮತ್ತು ಗ್ರಾಹಕರ ಹಿತದ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ.ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಪ್ರವೇಶಿಸಿದ ಸಂದರ್ಭದಲ್ಲಿ ಅಗ್ಗದ ಡೇಟಾ ಮತ್ತು ಉಚಿತ ಸೇವೆಗಳ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಸಂಭವಿಸಿತು. ನಂತರದ ಹಂತದಲ್ಲಿ ದರನೀತಿ ಮತ್ತು ಮಾರುಕಟ್ಟೆಯ ಕೇಂದ್ರೀಕರಣದ ಬಗ್ಗೆ ಸಾರ್ವಜನಿಕ ಚರ್ಚೆಯೂ ನಡೆಯಿತು.
ಇದರಿಂದ ಒಂದು ಪಾಠ ಸ್ಪಷ್ಟ-ಸ್ಪರ್ಧೆ ಇರುವವರೆಗೆ ಗ್ರಾಹಕ ಬಲಿಷ್ಠ- ಸ್ಪರ್ಧೆ ಕುಗ್ಗಿದರೆ ನಿಯಂತ್ರಣದ ಅಗತ್ಯ ಹೆಚ್ಚುತ್ತದೆ.ಆಗ ಸಹಕಾರವೇ ಪರ್ಯಾಯವೇ? ಸಹಕಾರಿ ವ್ಯವಸ್ಥೆಯ ಮೂಲ ತತ್ವವೇ ವಿಭಿನ್ನಇಲ್ಲಿ ಗ್ರಾಹಕ ಕೇವಲ ಗ್ರಾಹಕನಲ್ಲ, ಸದಸ್ಯ ಮತ್ತು ಮಾಲೀಕನೂ ಹೌದು. ಉತ್ಪಾದಕ ಕೇವಲ ಪೂರೈಕೆದಾರನಲ್ಲ; ಸಂಸ್ಥೆಯ ಪಾಲುದಾರನೂ ಹೌದು.ಅಮೂಲ್, ನಂದಿನಿ, IFFCO, KRIBHCO ಮುಂತಾದ ಸಂಸ್ಥೆಗಳು ಸಮೂಹ ಮಾಲೀಕತ್ವ, ಮಾರುಕಟ್ಟೆ ಸಂಪರ್ಕ ಮತ್ತು ಸದಸ್ಯರ ಆರ್ಥಿಕ ಹಿತವನ್ನು ಒಟ್ಟುಗೂಡಿಸಿದಾಗ ದೊಡ್ಡ ಪ್ರಮಾಣದಲ್ಲಿ ಜನರ ಬದುಕಿನಲ್ಲಿ ಬದಲಾವಣೆ ತರಬಹುದು ಎಂಬುದನ್ನು ತೋರಿಸಿವೆ.
ಸಹಕಾರಿಯ ಯಶಸ್ಸಿನ ಮೂಲಮಂತ್ರ : “ಲಾಭಕ್ಕಾಗಿ ಮನುಷ್ಯನಿಗಾಗಿ ಲಾಭ.” ಮನುಷ್ಯನಲ್ಲ;ಆದರೆ ಸಹಕಾರಿ ಕ್ಷೇತ್ರವೂ ತನ್ನ ಸವಾಲುಗಳಿಂದ ಮುಕ್ತವಲ್ಲ. ರಾಜಕೀಯ ಹಸ್ತಕ್ಷೇಪ, ವೃತ್ತಿಪರ ನಿರ್ವಹಣೆಯ ಕೊರತೆ, ಸದಸ್ಯರ ನಿರಾಸಕ್ತಿ, ಪಾರದರ್ಶಕತೆಯ ಕೊರತೆ ಮತ್ತು ತಂತ್ರಜ್ಞಾನ ಅಳವಡಿಕೆಯಲ್ಲಿ ಹಿಂದುಳಿಯುವಿಕೆ – ಇವುಗಳನ್ನು ನಿವಾರಿಸದಿದ್ದರೆ ಸಾಮರ್ಥ್ಯ ಹೊರಹೊಮ್ಮುವುದಿಲ್ಲ. ಸಹಕಾರಿಯ ಸಂಪೂರ್ಣವಾಗಿ*30 ಕೋಟಿಗೂ ಅಧಿಕ ಸದಸ್ಯರು -ಆದರೆ ಎಷ್ಟು ಜನರಿಗೆ ಸಹಕಾರದ ಅರಿವು ໑໖?ಇಂದು ದೇಶದಲ್ಲಿ 8.44 ಲಕ್ಷಕ್ಕೂ ಅಧಿಕ ಸಹಕಾರಿ ಸಂಸ್ಥೆಗಳು ಮತ್ತು 30 ಕೋಟಿಗೂ ಅಧಿಕ ಸದಸ್ಯರಿದ್ದಾರೆ.
e3-2025 ರಾಷ್ಟ್ರೀಯ ಸಹಕಾರ ಕ್ಷೇತ್ರವನ್ನು ಡಿಜಿಟಲೀಕರಣ, ಹಣಕಾಸು ಸಬಲೀಕರಣ, ಯುವಜನ-ಮಹಿಳಾ ಪಾಲ್ಗೊಳ್ಳುವಿಕೆ ಹಾಗೂ ಹೊಸ ಕ್ಷೇತ್ರಗಳಿಗೆ ವಿಸ್ತರಿಸುವ ದಿಕ್ಕನ್ನು ಸೂಚಿಸಿದೆ.ಆದರೆ ಒಂದು ದೊಡ್ಡ ಪ್ರಶ್ನೆ ಉಳಿದಿದೆ:30 ಕೋಟಿ ಸದಸ್ಯರು ಇದ್ದರೂ ಸಹಕಾರದ ತತ್ವ, ಹಕ್ಕು, ಜವಾಬ್ದಾರಿ ಮತ್ತು ಅವಕಾಶಗಳ ಬಗ್ಗೆ ಎಷ್ಟು ಸದಸ್ಯರಿಗೆ ನಿಜವಾದ అరివిది? ಚಳವಳಿಯ ಇಲ್ಲಿಯೇ ಸಹಕಾರ ಮುಂದಿನ ದೊಡ್ಡ ಕೆಲಸ ಆರಂಭವಾಗಬೇಕು.ಹೊಸ ಕ್ಷೇತ್ರಗಳತ್ತ ಸಹಕಾರದ ಹೆಜ್ಜೆರಾಷ್ಟ್ರೀಯ ಸಹಕಾರ ನೀತಿ-2025 ಸಹಕಾರವನ್ನು ಸಾಂಪ್ರದಾಯಿಕ ಕೃಷಿ, ಹಾಲು ಮತ್ತು ಸಾಲ ಕ್ಷೇತ್ರಗಳಿಗೆ ಸೀಮಿತಗೊಳಿಸದೆ ಪ್ರವಾಸೋದ್ಯಮ, ಟ್ಯಾಕ್ಸಿ ಸೇವೆ, ವಿಮೆ, ಹಸಿರು ಇಂಧನ, ತಂತ್ರಜ್ಞಾನ, ತ್ಯಾಜ್ಯ ನಿರ್ವಹಣೆ ಮುಂತಾದ ಕ್ಷೇತ್ರಗಳತ್ತ ಕೊಂಡೊಯ್ಯುವ ಉದ್ದೇಶ ಹೊಂದಿದೆ.
ಇದಕ್ಕೆ ಜೀವಂತ ಉದಾಹರಣೆ ಭಾರತ್ ಟ್ಯಾಕ್ಸಿ. ಇಲ್ಲಿ ಚಾಲಕ ಕೇವಲ “ಡ್ರೈವರ್ ಪಾರ್ಟ್ನರ್” ಅಲ್ಲ; “ಮಾಲೀಕ”ನಾಗುವ ಸಹಕಾರಿ ಮಾದರಿ ರೂಪುಗೊಂಡಿದೆ. 2026 ಫೆಬ್ರವರಿಯಲ್ಲಿ ಇದು ದೇಶದ ಮೊದಲ ಸಹಕಾರಿ ಆಧಾರಿತ ರೈಡ್-ಹೇಲಿಂಗ್ ఎంబ ವೇದಿಕೆಯಾಗಿ ಅಧಿಕೃತವಾಗಿ ಆರಂಭವಾಯಿತು. ಇದು ಕೇವಲ ಟ್ಯಾಕ್ಸಿ ಸೇವೆಯ ಪ್ರಯೋಗವಲ್ಲ. “ಕೆಲಸ ಮಾಡುವವನೇ ಮಾಲೀಕ” ಆರ್ಥಿಕ ಪ್ರಜಾಪ್ರಭುತ್ವದ ಹೊಸ ಪ್ರಯೋಗ. ಇಲ್ಲಿಯೇ ಸಹಕಾರ ಭಾರತಿಯ ಪಾತ್ರ ಮಹತ್ವ ಪಡೆಯುತ್ತದೆ.1978ರಲ್ಲಿ ಆರಂಭವಾದ ಸಹಕಾರ ಸಹಕಾರಿ ಚಳವಳಿಯ ಜ್ಞಾನ, ತರಬೇತಿ, ಜನಜಾಗೃತಿ ಮತ್ತು ಸಂಘಟನೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ.
ಕರ್ನಾಟಕದ ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಳೆದ ಒಂದೂವರೆ ವರ್ಷಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿಸಹಕಾರಿ ಸಂಸ್ಥೆಗಳು, ಸಹಕಾರಿಗಳು ಮತ್ತು ವಿವಿಧ ಕ್ಷೇತ್ರಗಳ ಜನರೊಂದಿಗೆ ನಡೆಸಿದ ಸಂವಾದದಲ್ಲಿ ಒಂದು ಸಂಗತಿ ಸ್ಪಷ್ಟವಾಗಿದೆ.ಸಹಕಾರ ಕ್ಷೇತ್ರಕ್ಕೆ ಅವಕಾಶಗಳ ಕೊರತೆಯಿಲ್ಲ; ಆದರೆ ಅವಕಾಶಗಳನ್ನು ಗುರುತಿಸಿ ಬಳಸುವ ಜಾಗೃತಿ ಇನ್ನಷ್ಟು ಹೆಚ್ಚಬೇಕಾಗಿದೆ. ಆದ್ದರಿಂದ ಮುಂದಿನ ಹಂತದಲ್ಲಿ ಸಹಕಾರ ಭಾರತಿಯ ಕೆಲಸ ಕೇವಲ ಕಾರ್ಯಕ್ರಮ ನಡೆಸುವುದಕ್ಕೆ ಸೀಮಿತವಾಗಬಾರದು.
ಸಹಕಾರ ಭಾರತಿಯ ಮುಂದಿನ ಆದ್ಯತೆಗಳು : ಪ್ರತಿ ಸಹಕಾರಿ ಸದಸ್ಯನಿಗೂ ಸಹಕಾರ ಶಿಕ್ಷಣಯುವಜನರನ್ನು ಸಹಕಾರಿ ಉದ್ಯಮಶೀಲತೆಯತ್ತ ಸೆಳೆಯುವುದು. ಮಹಿಳೆಯರಿಗೆ ಹೊಸ ಸಹಕಾರಿ ಉದ್ಯೋಗ-ಉದ್ಯಮ ಅವಕಾಶ. ಡಿಜಿಟಲ್ ಮತ್ತು ತಂತ್ರಜ್ಞಾನ ಆಧಾರಿತ ಸಹಕಾರ. ಹಸಿರು ಇಂಧನ ಮತ್ತು ಪರಿಸರ ಸ್ನೇಹಿ ಸಹಕಾರ ಮಾದರಿಗಳು.
ಸಹಕಾರಿ ಸಂಸ್ಥೆಗಳಿಗೆ ವೃತ್ತಿಪರ ಆಡಳಿತ ಮತ್ತು ಉತ್ತಮ ನಿರ್ವಹಣೆ. ಸರಕಾರದ ಯೋಜನೆ ಮತ್ತು ಸಹಕಾರಿ ಸಂಸ್ಥೆಗಳ ನಡುವೆ ಪರಿಣಾಮಕಾರಿ ಸೇತುವೆ. ಸಹಕಾರಿ ಸಂಸ್ಥೆಗಳ ಉತ್ಪನ್ನಗಳಿಗೆ ಬಲವಾದ ಮಾರುಕಟ್ಟೆ ವ್ಯವಸ್ಥೆ. ಸದಸ್ಯರಲ್ಲಿ ಹಕ್ಕಿನ ಜವಾಬ್ದಾರಿಯ ಅರಿವು ಜೊತೆಗೆ ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ ಮತ್ತು ಸ್ವಾರ್ಥಪರ ನಿರ್ವಹಣೆಗೆ ಕಡಿವಾಣಸರಕಾರ ವಿರೋಧಿ ಅಲ್ಲ, ಖಾಸಗಿ 2 – ថ ವ್ಯವಸ್ಥೆ ಬೇಕುಇದು ಸರಕಾರಿ ವ್ಯವಸ್ಥೆಯನ್ನು ತಿರಸ್ಕರಿಸುವ ಪ್ರಶ್ನೆಯಲ್ಲ. ಖಾಸಗಿ ಕ್ಷೇತ್ರವನ್ನು ವಿರೋಧಿಸುವ ಪ್ರಶ್ನೆಯೂ ಅಲ್ಲ. ಸರಕಾರ ತನ್ನ ಕರ್ತವ್ಯವನ್ನು ಉತ್ತಮವಾಗಿ ಮಾಡಬೇಕು. ಖಾಸಗಿ ಕ್ಷೇತ್ರ ತನ್ನ ಸ್ಪರ್ಧಾತ್ಮಕ ಶಕ್ತಿಯಿಂದ ಆರ್ಥಿಕತೆಯನ್ನು ವೇಗಗೊಳಿಸಬೇಕು.
ಸಹಕಾರಿ ಕ್ಷೇತ್ರ ಜನರನ್ನು ಮಾಲೀಕರನ್ನಾಗಿ ಮಾಡಿ ಆರ್ಥಿಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು.ಈ ಮೂರೂ ವ್ಯವಸ್ಥೆಗಳು ಪರಸ್ಪರ ಪೈಪೋಟಿಗಿಂತ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಭಾರತದ ಅಭಿವೃದ್ಧಿ ಹೆಚ್ಚು ಸಮತೋಲನಯುತವಾಗುತ್ತದೆ.ಮುಂದಿನ ದಿನಗಳಲ್ಲಿ ಸಹಕಾರ ಭಾರತಿಯಂತಹ ಸಂಸ್ಥೆಗಳ ಹೊಣೆಗಾರಿಕೆಯೂ ಹೆಚ್ಚಲಿದೆ.
ಏಕೆಂದರೆ ಸಹಕಾರದ ಭವಿಷ್ಯ ಕೇವಲ ಸಹಕಾರಿ ಸಂಘಗಳ ಭವಿಷ್ಯವಲ್ಲ-ರೈತ, ಕಾರ್ಮಿಕ, ಸಣ್ಣ ಉದ್ಯಮಿ, ಗ್ರಾಹಕ, ಯುವಕ ಮತ್ತು ಮಹಿಳೆಯ ಆರ್ಥಿಕ ಸ್ವಾವಲಂಬನೆಯ ಭವಿಷ್ಯ.”ಸಹಕಾರದಲ್ಲಿ ಸದಸ್ಯನೇ ಮಾಲೀಕ, ಮಾಲೀಕನೇ ನಿರ್ಧಾರಕ, ನಿರ್ಧಾರದಲ್ಲಿ ಜನಹಿತವೇ ಅಂತಿಮ ಗುರಿ.”ಭಾರತದ ಆರ್ಥಿಕ ಪ್ರಜಾಪ್ರಭುತ್ವಕ್ಕೆ ಮುಂದಿನ ದೊಡ್ಡ ಹೆಜ್ಜೆ ಇದೇ ಆಗಬೇಕು.
ಲೇಖಕರು : ಸಾಣೂರು ನರಸಿಂಹ ಕಾಮತ್, ರಾಜ್ಯ ಪ್ರಧಾನ ಕಾರ್ಯದರ್ಶಿ,ಸಹಕಾರ ಭಾರತಿ, ಕರ್ನಾಟಕ.
