29.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಾಣಿಜ್ಯಸಾಮಾಜಿಕ/ಇತಿಹಾಸ

ಪ. ಜಾತಿ-ಪ. ಪಂಗಡ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಮಹೇಶ್ ಶರ್ಮಾ ಆಯ್ಕೆ: ಸಂಘಟನೆಯ ಸಂಸ್ಥಾಪಕಿ, ರಾಜ್ಯಾಧ್ಯಕ್ಷೆ ಡಾ. ಭೀಮಾ ಪುತ್ರಿ ನಾಗಮ್ಮರವರ ಆದೇಶ ;

ವರದಿ /ಚಿತ್ರ :ಈ ಮೀಡಿಯಾ

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ರಕ್ಷಣೆ, ಮಹಿಳಾ ಸಬಲೀಕರಣ ಹಾಗೂ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ‘ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಮಹೇಶ್ ಶರ್ಮಾ ಅವರು ಅಧಿಕೃತವಾಗಿ ನೇಮಕಗೊಂಡಿದ್ದಾರೆ.

ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಭೀಮಾ ಪುತ್ರಿನಾಗಮ್ಮ ಅವರ ದೂರದೃಷ್ಟಿಯ ನೇತೃತ್ವದಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದೆ.2026ರ ಮಾರ್ಚ್ 22ರಿಂದ ಈ ನೇಮಕಾತಿಯು ಜಾರಿಗೆ ಬಂದಿದೆ. ಸಂಘಟನೆಯ ಸಂಘಟನಾ ಚಟುವಟಿಕೆಗಳನ್ನು ರಾಜ್ಯಾದ್ಯಂತ ಮತ್ತಷ್ಟು ಬಲಪಡಿಸುವ ಮತ್ತು ಜನಪರ ಹೋರಾಟಗಳನ್ನು ಮಾಧ್ಯಮಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೆ ತಲುಪಿಸುವ ಪ್ರಮುಖ ಉದ್ದೇಶದಿಂದ ಈ ಜವಾಬ್ದಾರಿಯನ್ನು ನೀಡಲಾಗಿದೆ.

ಮುಂಬರುವ ದಿನಗಳಲ್ಲಿ ಸಂಘಟನೆಯ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಸಮಾಜಮುಖಿಮೂಲ ನಿಲುವುಗಳನ್ನು ಪತ್ರಿಕೆ, ದೃಶ್ಯ ಮಾಧ್ಯಮ (ಟಿವಿ), ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಮರ್ಪಕವಾಗಿ ಬಿಂಬಿಸುವ ದೊಡ್ಡ ಜವಾಬ್ದಾರಿ ಮಹೇಶ್ ಶರ್ಮಾ ಅವರ ಮೇಲಿದೆ.

ಸಂಘಟನೆಯ ನಿಯಮಾವಳಿ ಹಾಗೂ ಉದ್ದೇಶಗಳಿಗೆ ಅನುಗುಣವಾಗಿ ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ದಲಿತ-ಪರಿಶಿಷ್ಟ ವರ್ಗಗಳ ಹಕ್ಕುಗಳಿಗಾಗಿ ನೂತನ ಮಾಧ್ಯಮ ವಕ್ತಾರರು ಪ್ರಾಮಾಣಿಕವಾಗಿ ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಘಟನೆಯ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related posts

ಮಂಗಳೂರಿನಲ್ಲಿ ತಾರಾ ಆಸ್ಪತ್ರೆಯಿಂದ ಮೊದಲ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ;

Voiceoftulunadu

ಬಂಟವಾಳ ಬಂಟರ ಸಂಘದ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವಕ್ಕೆ ಚಾಲನೆ:

voiceoftulunadu

ಸುಮನಸಾ ಕೊಡವೂರು ಸಂಘಟನೆಯ ರಜತ ಮಹೋತ್ಸವದ ಅಂಗವಾಗಿ ವಿನೂತನ ಪ್ರಯೋಗ : ಕಾರ್ಯಕ್ರಮ ಉದ್ಘಾಟಿಸಿದ ರಂಗಕರ್ಮಿ, ನೀನಾಸಂ ಜಯರಾಮ ನೀಲಾವರ ;

Voiceoftulunadu

Leave a Comment