November 3, 2026
Uncategorizedಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ವಾರ್ಷಿಕ ಮಹಾಸಭೆ ರೂ 1434 ಕೋಟಿ ವ್ಯವಹಾರ ರೂ.3.40 ಕೋಟಿ ಲಾಭ, ಶೇ.18 ಡಿವಿಡೆಂಡ್: ಜೀವನ್‌ ಲೋಯ್ಡ್‌ ಪಿಂಟೊ ;

ವರದಿ /ಚಿತ್ರ: ಸಂತೋಷ್ ಕುಲಾಲ್ ನೆತ್ತರಕೆರೆ

ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ. 1434 ಕೋಟಿ ದಾಖಲೆಯ ವಹಿವಾಟು ರೂ.3.40 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 18 ಡಿವಿಡೆಂಡ್ ಘೋಷಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಜೀವನ್ ಲಾಯ್ಡ್ ಪಿಂಟೋ ಹೇಳಿದರು.

ಅವರು ಸ್ಪರ್ಶ ಕಲಾ ಮಂದಿರ ಬಿ.ಸಿ.ರೋಡ್ ಇಲ್ಲಿ ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಇದರ 2025-26ನೇ ಸಾಲಿನ 29ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಪ್ರಗತಿಯ ಅಂಕಿ ಅಂಶಗಳನ್ನು, ಮುಂದಿನ ಯೋಜನೆಗಳನ್ನು, ಹಾಗೂ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ ಸರ್ವರನ್ನು ಸ್ಮರಿಸುತ್ತಾ, ಸಂಘದ 11ನೇ ಶಾಖೆಯು ಅ.02ರಂದು ಬಜ್ಪೆಯಲ್ಲಿ ಶುಭಾರಂಭಗೊಳ್ಳಲಿದ್ದು, 12ನೇ ಶಾಖೆಯು ಪುತ್ತೂರು-ಪಡೀಲ್ ಎಂಬಲ್ಲಿ ಶೀಘ್ರದಲ್ಲಿ ತೆರೆಯುವ ಬಗ್ಗೆ ಮಾಹಿತಿ ನೀಡಿದರು.

ಸಂಘದ ಸ್ವಂತ ಪ್ರಧಾನ ಕಛೇರಿಯ ಕಟ್ಟಡವು ಪ್ರಗತಿಯಲ್ಲಿದ್ದು, ಈ ನೂತನ ಕಟ್ಟಡಕ್ಕೆ ಹೆಸರನ್ನು ಸೂಚಿಸುವ ಅವಕಾಶವನ್ನು ಸದಸ್ಯರಿಗೆ ನೀಡಲಾಗಿದೆ. ಸಂಘಕ್ಕೆ ಹೊಸ ಲೋಗೋ ಅನಾವರಣ ಮಾಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.

ಗತ ಸಾಲಿನಲ್ಲಿ ದೈವಾಧೀನರಾದ ಸಂಘದ ಸದಸ್ಯರಿಗೆ-ಗ್ರಾಹಕರಿಗೆ ಸಂತಾಪ ಸೂಚಿಸಲಾಯಿತು.ಸಂಘವು 2025-26ನೇ ಸಾಲಿನಲ್ಲಿ ರೂ.1434 ಕೋಟಿ ವಹಿವಾಟುನಡೆಸಿ, ಮಾರ್ಚ್ ಅಂತ್ಯಕ್ಕೆ ರೂ.3.94 ಕೋಟಿ ಪಾಲು ಬಂಡವಾಳ, ರೂ.149.85 ಕೋಟಿ ಠೇವಣಿ, ರೂ.136.63 ಕೋಟಿ ಸದಸ್ಯರ ಹೊರಬಾಕಿ ಸಾಲದೊಂದಿಗೆ, ಸಂಘದ ದುಡಿಯುವ ಬಂಡವಾಳ ರೂ.165.51 ಕೋಟಿ ಆಗಿದ್ದು, ಲೆಕ್ಕ ಪರಿಶೋಧನೆಯಲ್ಲಿ “ಎ” ಗ್ರೇಡ್ ಶ್ರೇಣಿ ಪಡೆದಿದೆ. ಸಮಾಜದಲ್ಲಿ ವಿಶಿಷ್ಟ ಸಾಧನೆಗಳ ಮೂಲಕ ಗುರುತಿಸಿಕೊಂಡವರಿಗೆ ಸನ್ಮಾನದ ಮೂಲಕ ಗೌರವಿಸಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲಿನ್ ಗ್ರೇಸಿ ಡಿಸೋಜ ಇವರು ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷರಾದ ವಲೇರಿಯನ್ ಬರೆಟ್ಟೊ ವಂದಿಸಿದರು.

ನಿರ್ದೇಶಕರಾದ ಅನಿಲ್ ಹೆರಾಲ್ಡ್ ಫ್ರಾಂಕ್ , ಲಾದ್ರು ಮಿನೇಜಸ್, ರೊನಾಲ್ಡ್ ವಿಜಯ್ ಫೆರ್ನಾಂಡಿಸ್, ಗ್ಲೋರಿಯ ಪ್ರೀಮಾ ಕುಟಿನ್ಹೊ, ವಿನ್ಸೆಂಟ್ ಕ್ಲೋಡಿ ಕಾರ್ಲೊ, ಲಾರೆನ್ಸ್ ಕ್ಲಿಫೋರ್ಡ್ ಡಿಸೋಜ, ಫ್ರಾನ್ಸಿಸ್ ಮೆಂಡೋನ್ಸಾ, ಹಿಲಾರಿ ಕ್ರಾಸ್ತಾ, ಹ್ಯೂಬರ್ಟ್ ಲೋಬೊ , ಅನಿತಾ ನೊರೊನ್ಹಾ, ಬೆನೆಡಿಕ್ಟಾ ಸಲ್ಡಾನ್ಹ, ವಿಶಾಲ್ ಡಿಸೋಜ ಸಭೆಯಲ್ಲಿ ಉಪಸ್ಥಿತರಿದ್ದರು.

Related posts

ಉಡುಪಿಯ ಟೌನ್ ಹಾಲ್ ನಲ್ಲಿ ‘ ಲಯನ್ಸ್ ಇಂಟರ್ನ್ಯಾಷನಲ್ ಹಾಗೂ ಲಯನ್ಸ್ ಕ್ಲಬ್ ಬನ್ನಂಜೆ ಕ್ರೌನ್ ವತಿಯಿಂದ, 2026-27 ನೇ ಸಾಂಸ್ಥಿಕ ವರ್ಷದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಹಾಗೂ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ;

Voiceoftulunadu

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿಯಾದ ಡಾ|ಕೆ.ಸಿ. ನಾರಾಯಣ ಗೌಡ ನಿಯೋಗ ;

Voiceoftulunadu

ಎನ್ ಎಸ್ ಎಸ್ : ಉಡುಪಿ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಕಾಪು ಬೀಚ್ ಸ್ವಚ್ಛತಾ ಅಭಿಯಾನ : ಅಭಿಯಾನಕ್ಕೆ ಸಹಕಾರ ನೀಡಿದ ಕಾಪು ಬೀಚ್ ಫ್ರೆಂಡ್ಸ್ ;

Voiceoftulunadu

Leave a Comment