28.5 C
ಮಂಗಳೂರು
September 4, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮಂತ್ರಾಲಯದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತ: ಮಂಗಳೂರು ಹಾಪ್ ಕಾಮ್ಸ್ ಸಿಇಒ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ದುರ್ಮರಣ;

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಪದಾಧಿಕಾರಿಗಳ ಮಂತ್ರಾಲಯ ಯಾತ್ರೆ ದುರಂತದಲ್ಲಿದಲ್ಲಿ ಅಂತ್ಯಗೊಂಡಿದ್ದು, ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ರಸ್ಟ್‌ನ ಕೇಂದ್ರೀಯ ಘಟಕದ ಜೊತೆ ಕಾರ್ಯದರ್ಶಿ ಹಾಗೂ ಮಂಗಳೂರು ಹಾಪ್ ಕಾಮ್ಸ್ ಸಿಇಒ ಆದ ರವಿಚಂದ್ರ ಶೆಟ್ಟಿ (ಅಶೋಕನಗರ) ಮೃತಪಟ್ಟಿದ್ದಾರೆ.

ಟ್ರಸ್ಟ್‌ನ ಸ್ಥಾಪಕರಾದ ಸತೀಶ್ ಶೆಟ್ಟಿ ಪಟ್ಲ ಹಾಗೂ ಇತರ ಪದಾಧಿಕಾರಿಗಳು ಎರಡು ಕಾರುಗಳಲ್ಲಿ ತಿರುಪತಿ ಮತ್ತು ಮಂತ್ರಾಲಯ ಯಾತ್ರೆಗೆ ತೆರಳಿದ್ದರು. ತಿರುಪತಿಯಿಂದ ಮಂತ್ರಾಲಯದತ್ತ ಪ್ರಯಾಣ ಮಾಡುತ್ತಿದ್ದ ಸಂಧರ್ಭದಲ್ಲಿ ಸತೀಶ್‌ ಶೆಟ್ಟಿ ಪಟ್ಲ ಪ್ರಯಾಣಿಸುತ್ತಿದ್ದ ಕಾರು ಸುರಕ್ಷಿತವಾಗಿ ಗಮ್ಯಸ್ಥಾನ ತಲುಪಿದೆ.ಇನ್ನೊಂದು ಕಾರಿನಲ್ಲಿ ರವಿಚಂದ್ರ ಶೆಟ್ಟಿ ಸೇರಿದಂತೆ ನಾಲ್ಕು ಜನ ಪ್ರಯಾಣಿಸುತ್ತಿದ್ದು, ಮಂತ್ರಾಲಯದಿಂದ ಸುಮಾರು 10 ನಿಮಿಷ ದೂರದಲ್ಲಿದ್ದಾಗ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಕಾರನ್ನು ಪ್ರದೀಪ್ ಆಳ್ವ (ಕದ್ರಿ) ಚಲಾಯಿಸುತ್ತಿದ್ದರು. ಅಪಘಾತದ ರಭಸಕ್ಕೆ ಹಿಂಬದಿ. ಸೀಟಿನಲ್ಲಿದ್ದ ರವಿಚಂದ್ರ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಶ್ರೀ ಅಯ್ಯಪ್ಪ ಭಕ್ತ ಮಂಡಳಿ, ಮೀರಾರೋಡ್ ಇದರ ಸಕ್ರಿಯ ಸದಸ್ಯರಾಗಿ ಹಲವಾರು ವರ್ಷದಿಂದ ಶ್ರೀ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಗೈದು ಗುರುಸ್ವಾಮಿಯಾಗಿ ಸೇವೆಗೈ ದಿದ್ದರು.

ಅವರು ಶ್ರೀ ಅಯ್ಯಪ್ಪ ಭಕ್ತ ಮಂಡಳಿ, ಮೀರಾ ರೋಡ್ ಇದರ ಅಧ್ಯಕ್ಷರಾದ ಶ್ರೀ ಜಯಂತ ಶೆಟ್ಟಿಯವರ ಅಣ್ಣನಾಗಿದ್ದು ತಾಯಿ, ಪತ್ನಿ, ಮಕ್ಕಳು ಮತ್ತು ತಮ್ಮನ್ನದಿರನ್ನು ಹಾಗೂ ಅಸಂಖ್ಯ ಅಯ್ಯಪ್ಪ ಭಕ್ತರನ್ನು ಅಗಲಿದ್ದಾರೆ.ಅವರ ಅಗಲಿಕೆಯು ಪರಿವಾರ, ಪಟ್ಲ ಫೌಂಡೇಷನ್ ಮತ್ತು ಮಿತ್ರ ಬಾಂಧವರಿಗೆ ತುಂಬಲಾರದ ನಷ್ಟವಾಗಿದೆ.

Related posts

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ ಮಹಾಲಕ್ಷ್ಮೀ ವ್ರತ, ಪೂಜೆ ಸಂಪನ್ನ ವರಮಹಾಲಕ್ಷ್ಮೀ ಪೂಜೆಯಲ್ಲಿ ಸಾವಿರಾರು ಮಹಿಳೆಯರ ಉಪಸ್ಥಿತಿ ;

Voiceoftulunadu

ಖ್ಯಾತ ಹಾಸ್ಯ ನಟ ಶರಣ್ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ.ಶರಣ್ ಅವರನ್ನು ಗೌರವಿಸಿದ ಅಭಿವೃದ್ಧಿ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿ;

Voiceoftulunadu

ಮಿಲಾಗ್ರೆಸ್ ಹೌಸ್, ಬಾಂದ್ರಾದಲ್ಲಿ ಮಾಡೆಲ್ ಬ್ಯಾಂಕ್‌ನ ಆಡಳಿತ ಕಚೇರಿ ಹಾಗೂ 26ನೇ ಶಾಖೆ ಉದ್ಘಾಟನೆ : ಸಹಕಾರವೇ ಎಲ್ಲರ ಅಭಿವೃದ್ಧಿಯ ಹಿಂದಿನ ಶಕ್ತಿ: ಆರ್ಚ್‌ಬಿಷಪ್ ಜಾನ್ ;

Voiceoftulunadu

Leave a Comment