November 3, 2026
Uncategorizedಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮೀನುಗಾರಿಕಾ ಋತು ಆರಂಭ ಹಿನ್ನೆಲೆ ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ:ಬಂದರಿನ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ ಶಾಸಕ ಯಶ್ಪಾಲ್;

ವರದಿ ಚಿತ್ರ ಈ ಮೀಡಿಯಾ

ಉಡುಪಿ: ಜೂನ್ ಮತ್ತು ಜುಲೈ ಎರಡು ತಿಂಗಳ ಮೀನುಗಾರಿಕೆ ನಿಷೇಧ ಬಳಿಕ ಅಗಸ್ಟ್ 1 ರಿಂದ ಮೀನುಗಾರಿಕಾ ಋತು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಲ್ಪೆ ಬಂದರಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಲ್ಪೆ ಬಂದರಿನ ನೂತನ ಪ್ರವೇಶ ದ್ವಾರದ ಕಾಮಗಾರಿಯ ಬಗ್ಗೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ, ಹಾಗೂ ಕಾಮಗಾರಿಯ ಹಿನ್ನೆಲೆ ಪಾರ್ಕಿಂಗ್ ಪ್ರದೇಶದಲ್ಲಿ ಸಂಗ್ರಹಿಸಿರುವ ಮರಳನ್ನು ತಕ್ಷಣ ತೆರವು ಮಾಡಿ ವಾಹನಗಳಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸುವಂತೆ ಹೇಳಿದರು.

ಬಂದರಿನ ನಿರ್ಗಮನ ದ್ವಾರ ಅಗಲೀಕರಣಗೊಳ್ಳುವ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಅಲ್ಲಿದ್ದ ರಿಕ್ಷಾ ನಿಲ್ದಾಣವನ್ನು ಈಗಾಗಲೇ ಗುರುತಿಸಿರುವ ಸೂಕ್ತ ಜಾಗಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ರಿಕ್ಷಾ ಚಾಲಕರ ಮನವಿಯಂತೆ ಅಗತ್ಯ ಸಹಕಾರ ನೀಡುವಂತೆ ಸೂಚನೆ ನೀಡಿದರು.

ಮಲ್ಪೆ ಬಂದರಿನ ಮಂಜಿ ಧಕ್ಕೆ ಹಾಗೂ ಬಂದರಿನ ಪರಿಸರದಲ್ಲಿ ರಾತ್ರಿ ವೇಳೆ ದಾರಿ ದೀಪದ ಸಮಸ್ಯೆ ಬಗ್ಗೆ ತಕ್ಷಣ ಸಮರ್ಪಕ ದಾರಿ ದೀಪದ ವ್ಯವಸ್ಥೆ, ಬಂದರಿನ ಸ್ವಚ್ಚತೆ, ಭದ್ರತೆಯ ದೃಷ್ಟಿಯಲ್ಲಿ ಸೆಕ್ಯೂರಿಟಿ໐໖, 2.2. 3. 2 ಮೊದಲಾದ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಂಡು ಮೀನುಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ಮುತುವರ್ಜಿ ವಹಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ಮೀನುಗಾರ ಮುಖಂಡರಾದ ಸುರೇಶ್ ಸಾಲ್ಯಾನ್, ರವಿ ಸಾಲ್ಯಾನ್, ರಮೇಶ್ ಕೋಟ್ಯಾನ್, ಲಕ್ಷ್ಮೀಶ ಬಂಗೇರ, ಮಲ್ಪೆ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು, ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಉಪಸ್ಥಿತರಿದ್ದರು. ಅಧಿಕಾರಿಗಳು

Related posts

ಪಶ್ಚಿಮ ಘಟ್ಟ ರಕ್ಷಣೆಗೆ ಕಠಿಣ ಕ್ರಮ ಅಗತ್ಯ; ತೋನ್ಸೆ ಜಯಕೃಷ್ಣ ಶೆಟ್ಟಿ ಉಪಗ್ರಹ ಚಿತ್ರವೊಂದೇ ಅಂತಿಮ ಸಾಕ್ಷಿ ಅಲ್ಲ ;

Voiceoftulunadu

ಡಿಜಿಟಲ್ ಯುಗದಲ್ಲಿ ಶಿಕ್ಷಕರ ಸವಾಲು, ಬದಲಾವಣೆಯ ಅನಿವಾರ್ಯತೆ: ಎಡ್ವರ್ಡ್ ಲಾರ್ಸನ್ ಡಿಸೋಜ ,ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ ;

Voiceoftulunadu

ಮಂಗಳೂರಿನ ಪಾಲ್ದನೆ ಚರ್ಚ್ ನಲ್ಲಿ ವಾರ್ಷಿಕ (ಒಳಾಂಗಣ ಕ್ರೀಡಾ) ಇಂಡೋರ್ ಗೇಮ್ ದಿನಾಚರಣೆ;

Voiceoftulunadu

Leave a Comment