28.5 C
ಮಂಗಳೂರು
September 4, 2026
Uncategorizedಕ್ರೈಮ್ಕ್ರೈಮ್/ಅವಘಡಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಹೆಜಮಾಡಿ ಟೋಲ್ ಬಳಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಟೆಂಪೋ ಉರಿದು ಭಸ್ಮ : ಟೋಲ್ ಸಿಬ್ಬಂದಿ, ಸ್ಥಳೀಯರಿಂದ ಬೆಂಕಿ ಆರಿಸುವ ಪ್ರಯತ್ನ ;

ವರದಿ /ಚಿತ್ರ :ಈ ಮೀಡಿಯಾ

ಹೆಜಮಾಡಿ: ಹೆಜಮಾಡಿ ಪೆಟ್ರೋಲ್ ಬಂಕ್ ಬಳಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಟೆಂಪೋವೊಂದು ಹೊತ್ತಿ ಉರಿದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.ಮಂಗಳೂರಿನಿಂದ ಉಡುಪಿ ಕಡೆ ಬಾಳೆಹಣ್ಣು ಹೇರಿಕೊಂಡು ಸಾಗುತ್ತಿದ್ದ ಟೆಂಪೋ, ಹೆಜಮಾಡಿ ಟೋಲ್ ಗೇಟ್ ಬಳಿಯ ಪೆಟ್ರೋಲ್ ಪಂಪ್ ನಲ್ಲಿ ಡೀಸೆಲ್ ತುಂಬಿಸಿ 200 ಮೀಟರ್ ದೂರ ಸಾಗಿ ನಿಂತಾಗ ಟೆಂಪೋದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯ ತೀವ್ರತೆಗೆ ಟೆಂಪೋ ಸಂಪೂರ್ಣ ವಾಗಿ ಭಸ್ಮವಾಗಿದೆ.ಹೆಜಮಾಡಿ ಟೋಲ್ ಗೇಟಿನ ರೂಟ್ ಪೆಟ್ರೋಲಿಂಗ್ ತಂಡದ ಮುಖ್ಯಸ್ಥ ಶೈಲೇಶ್ ಶೆಟ್ಟಿ ಮತ್ತು ಅವರ ತಂಡ, ಪೆಟ್ರೋಲ್ ಪಂಪ್‌ ಸಿಬ್ಬಂದಿ ತುರ್ತಾಗಿ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದೆ.

ಯುಪಿಸಿಎಲ್ ಅದಾನಿ ಸಂಸ್ಥೆಯ ಅಗ್ನಿಶಾಮಕ ವಾಹನವೂ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದೆ. ಅದಾಗಿಯೂ ಟೆಂಪೋ ಉರಿದು ಭಸ್ಮವಾಗಿದೆ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Related posts

ಪಟ್ಲ ಯು.ಎಸ್. ನಾಯಕ್ ಪ್ರೌಢ ಶಾಲೆಲ್ಲಿ ಇಂಟರಾಕ್ಷ ಪದಗ್ರಹಣ ಸಮಾರಂಭ : ರೂರಲ್ ಎಜುಕೇಶನ್ ಸೊಸೈಟಿ ಆಶ್ರಿತ ವಿದ್ಯಾ ಸಂಸ್ಥೆ;

Voiceoftulunadu

ಉಡುಪಿ: ಐಎಂಎ ವತಿಯಿಂದ ಕೌಟುಂಬಿಕ ಸಭೆ; ಪ್ರತಿಭಾ ಪ್ರದರ್ಶನ, ಬಹುಮಾನ ವಿತರಣೆ , ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ರವರಿಂದ ಜಾದೂ ಪ್ರದರ್ಶನ ಕಾರ್ಯಕ್ರಮದ ಹೈಲೈಟ್;

Voiceoftulunadu

ಕಾರ್ಕಳ ಯೂತ್ ಬಿಲ್ಲವ ಸಂಘಟನೆಗೆ ಶರತ್ ಬೈಲಡ್ಕ ಅಧ್ಯಕ್ಷರಾಗಿ ಆಯ್ಕೆ: ಕಾರ್ಯದರ್ಶಿಯಾಗಿ ಅಭಿಲಾಷ್ ಕೋಟ್ಯಾನ್, ಪ್ರಮಲ್ಕುಮಾರ್ ಕೋಶಾಧಿಕಾರಿ ಸುಜಿತ್ ನಿಟ್ಟೆ ಆಯ್ಕೆ;

Voiceoftulunadu

Leave a Comment