28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಪಟ್ಲ ಯು.ಎಸ್. ನಾಯಕ್ ಪ್ರೌಢ ಶಾಲೆಲ್ಲಿ ಇಂಟರಾಕ್ಷ ಪದಗ್ರಹಣ ಸಮಾರಂಭ : ರೂರಲ್ ಎಜುಕೇಶನ್ ಸೊಸೈಟಿ ಆಶ್ರಿತ ವಿದ್ಯಾ ಸಂಸ್ಥೆ;

ವರದಿ /ಚಿತ್ರ :ಈ ಮೀಡಿಯಾ

ಪಟ್ಲ : ರೂರಲ್ ಎಜುಕೇಶನ್ ಸೊಸೈಟಿ ಆಶ್ರಿತ ವಿದ್ಯಾ ಸಂಸ್ಥೆ ಯು ಎಸ್ ನಾಯಕ್ ಪ್ರೌಢಶಾಲೆಯಲ್ಲಿ ಪ್ರಸಕ್ತ ವರ್ಷದ ಶಾಲಾ ಇಂಟರಾಕ್ಟ್ ಕ್ಲಬ್ ನ ಪದ ಪ್ರಧಾನ ಕಾರ್ಯಕ್ರಮ ಜರಗಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಮಲ್ಲಿಕಾ ಶೆಟ್ಟಿ ಭಾಗವಹಿಸಿದ್ದರು.

ಅವರು ಮಾತನಾಡಿ, ಜಗತ್ತಿನ ಅತ್ಯಂತ ಶ್ರೇಷ್ಠ ಮೌಲ್ಯವೆಂದರೆ ‘ನಿಸ್ವಾರ್ಥ ಸೇವೆ’ ಈ ಮೌಲ್ಯಗಳನ್ನು ಬೆಳಸುತ್ತಿರುವ ರೋಟರಿಯ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳಲ್ಲಿ ಈ ಮನೋಭಾವ ಬೆಳೆಸುವಲ್ಲಿ ಇಂಟರಾಕ್ಟ್ ಉಡುಪಿಕ್ಲಬ್ ಸಹಾಯಕವಾಗಿದೆ. ಇದರ ಪ್ರಯೋಜನವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು ಎಂದರು.ಉಡುಪಿ ರೋಟರಿಯ ಅಧ್ಯಕ್ಷ ರೊಟೆರಿಯನ್ ಜೆ. ಗೋಪಾಲಕೃಷ್ಣ ಪ್ರಭು ಇಂಟರಾಕ್ಟ್ ಪದ ಪ್ರಧಾನ ಮಾಡಿ ಶುಭಹಾರೈಸಿದರು.

ಉಡುಪಿ ರೋಟರಿ ಇಂಟರಾಕ್ಟ್ ಚೇರ್ಮನ್ ರೋಟೆರಿಯನ್ ಶುಭಲಕ್ಷ್ಮೀ ಮಾತನಾಡಿ, ಇಂಟರಾಕ್ಟ್ ಕ್ಲಬ್ ಮಾಡಬೇಕಾದ ಕಾರ್ಯ ಚಟುವಟಿಕೆಗಳ ಮಾರ್ಗದರ್ಶನ ಮಾಡಿ ನೂತನ ತಂಡಕ್ಕೆ ಶುಭಹಾರೈಸಿದರು.ರೊಟೇರಿಯನ್ ಡಾ. ಕೆ ಸುರೇಶ್ ಶೆಣೈರಸ್ತೆ ಸುರಕ್ಷೆ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.ನಿಕಟ ಪೂರ್ವ ಶಾಲಾ ಇಂಟರಾಕ್ಟ್ ಅಧ್ಯಕ್ಷ ಪ್ರದ್ಯುಮ್ನ ಸ್ವಾಗತಿಸಿದರು.

ಕಾರ್ಯದರ್ಶಿ ರೇಖಾ ಗತ ವರ್ಷದ ವರದಿ ಮಂಡಿಸಿದರು. ಮುಖ್ಯ ಶಿಕ್ಷಕ ಶಾಂತಪ್ಪ ಮೂಲಂಗಿ ವಂದಿಸಿದರು. ವಿದ್ಯಾರ್ಥಿನಿ ಸಾನ್ವಿ ಕಾರ್ಯಕ್ರಮ ನಿರೂಪಿಸಿದರು. D ಇಂಟರಾಕ್ಟ್ ಕೋ ಆರ್ಡಿನೇಟರ್ ಶ್ರೀಮತಿ ದೀಪಾ ಕಾರ್ಯಕ್ರಮ ಸಂಯೋಜಿಸಿದ್ದರು.ಶಾಲೆಯ ಮಾತಾಜಿಯವರು, ಗುರೂಜಿ, ಉಡುಪಿ ರೋಟರಿಯ ಸದಸ್ಯರು ಉಪಸ್ಥಿತರಿದ್ದರು.

Related posts

ಕೇಂದ್ರ ಗೃಹ ಸಚಿವಾಲಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ – ದೀದಿ ವಿರುದ್ಧ ಎಫ್‌ಐಆರ್

voiceoftulunadu

ಧನುಷ್ ಶೆಟ್ಟಿ: ಕನಸುಗಳಿಗೆ ಕಟ್ಟುಬಿದ್ದ ಕರಾವಳಿಯ ‘ಸಾಧನ ಚತುರ’”

Voiceoftulunadu

ಒಂದೇ ಕೊಕ್ಕೆಗೆ ತಂದೆ ಮಗಳು ನೇಣು ಬಿಗಿದು ಆತ್ಮಹತ್ಯೆ: ಕಾಸರಗೋಡಿನ ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ನಡೆದ ಧಾರುಣ ಘಟನೆ;

Voiceoftulunadu

Leave a Comment