September 4, 2026
Uncategorizedಕ್ರೈಮ್ಕ್ರೈಮ್/ಅವಘಡಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಒಂದೇ ಕೊಕ್ಕೆಗೆ ತಂದೆ ಮಗಳು ನೇಣು ಬಿಗಿದು ಆತ್ಮಹತ್ಯೆ: ಕಾಸರಗೋಡಿನ ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ನಡೆದ ಧಾರುಣ ಘಟನೆ;

ವರದಿ /ಚಿತ್ರ :ಈ ಮೀಡಿಯಾ

ಕಾಸರಗೋಡು: ತಂದೆ ಹಾಗೂ ಮಗಳು ಇಬ್ಬರು ಮನೆಯ ಕೋಣೆಯಲ್ಲಿ ಒಂದೇ ಕೊಕ್ಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಾಸರಗೋಡಿನ ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ಘಟಿಸಿದೆ. ಆತ್ಮಹತ್ಯೆಗೆ ಶರಣಾದ ಅಪ್ಪ, ಮಗಳು ಗಣೇಶ್ ಹಾಗೂ ವೈಷ್ಣವಿ ಎಂದು ಗುರುತಿಸಲಾಗಿದೆ.

ಇವರು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು ಮೂಲಗಳ ಪ್ರಕಾರ ಕೌಟುಂಬಿಕ ಸಮಸ್ಯೆಗಳೇ ಈ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿರ ಬಹುದೆಂದು ಶಂಕಿಸಲಾಗಿದೆ. ಆಗಸ್ಟ್ 15 ರಂದು ರಾತ್ರಿ ಮಗಳು ವೈಷ್ಣವಿ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದನ್ನು ಗಮನಿಸಿದ ತಂದೆ ಗಣೇಶನ್ ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿದ್ದರು.

ಆದರೆ, ವಿಷಯ ತಿಳಿದು ನೆರೆಹೊರೆಯವರು ಮನೆಗೆ ಧಾವಿಸುವಷ್ಟರಲ್ಲಿ ತಂದೆ ಗಣೇಶನ್ ಕೂಡ ಮಗಳು ನೇಣು ಬಿಗಿದುಕೊಂಡಿದ್ದ ಅದೇ ಕೊಕ್ಕೆಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮೇಲ್ಪರಂಬ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಶವಗಳನ್ನು ವಶಕ್ಕೆ ಪಡೆದು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆಗೆ ನಿಖರ ಕಾರಣವೇನು ಹಾಗೂ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯೇನು ಎಂಬುದರ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ

Related posts

ಬಂಟವಾಳ ಬಂಟರ ಸಂಘದ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವಕ್ಕೆ ಚಾಲನೆ:

voiceoftulunadu

ಪಡುಬಿದ್ರಿ: ಜೈಹಿಂದ್ ಟ್ಯೂಬ್ ಕಂಪೆನಿ ಹೊರ ಸೂಸುವ ಹೊಗೆಯಿಂದ ತೊಂದರೆ, ಸಾರ್ವಜನಿಕರ ಆಕ್ರೋಶಹೆಜಮಾಡಿ ಹಾಗೂ ನಡ್ಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಂದ ಅಧಿಕಾರಿಗಳಿಗೆ ದೂರು;

Voiceoftulunadu

ಉಚ್ಚಿಲ ದೇಗುಲಕ್ಕೆ ಕಾಂಗ್ರಿ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಸತ್ಯಪಾಲ್ ಸಿಂಗ್ ಕುಟುಂಬ ಸಹಿತ ಭೇಟಿ ಮಹಾಲಕ್ಷ್ಮೀ ದೇಗುಲದ ವತಿಯಿಂದ ಸತ್ಯಪಾಲ್ ಸಿಂಗ್ ಪತ್ನಿ ಡಾ. ಅಲ್ಕಾಸಿಂಗ್ ರವರಿಗೆ ಅಭಿನಂದನೆ

Voiceoftulunadu

Leave a Comment