28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಜೆಸಿಐ ಉಡುಪಿ ಸಿಟಿ : ಒಂದು ದಿನ 111 ತರಬೇತಿಗಳ ಹಬ್ಬ: ಉಡುಪಿಯ ಸೈಂಟ್ ಮೇರಿಸ್‌ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ;

ವರದಿ /ಚಿತ್ರ :ಈ ಮೀಡಿಯಾ

ಉಡುಪಿ: ಜೆಸಿ ವಲಯ 15ರ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೆಸಿಐ ಉಡುಪಿ ಸಿಟಿ ವತಿಯಿಂದ ಒಂದೇ ದಿನ 111 ತರಬೇತಿ ಸರಣಿಯನ್ನು ಉಡುಪಿಯ ಸೈಂಟ್ ಮೇರಿಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಉದ್ಘಾಟಿಸಲಾಯಿತು.ಜೆಸಿಐ ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಉದ್ಘಾಟನೆ ನೆರವೇರಿಸಿದರು.

ಅವರು ಮಾತನಾಡಿ, ಜೆಸಿ ಮೂಲಕ ಅನೇಕ ವ್ಯಕ್ತಿತ್ವ ವಿಕಸನಗಳ ಲಾಭಗಳನ್ನು ಪಡೆಯಬಹುದು. ಈ ರೀತಿ ತರಬೇತಿ ಕಾರ್ಯಕ್ರಮಗಳ ಸರಣಿ ನಮ್ಮ ವಲಯದ ಒಂದು ಮೈಲಿಗಲ್ಲು ಎಂದು ಶುಭ ಹಾರೈಸಿದರು.

ಶಾಲಾ ಪ್ರಾಂಶುಪಾಲರಾದ ಫಾ. ವಿಜಯ್ ಜಾಯ್ಸನ್ ಡಿಸೋಜಾ, ಮುಖ್ಯ ಅತಿಥಿಗಳಾಗಿ ಜೆಸಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಕೇವಲ ಪಾಠ ಮಾತ್ರವಲ್ಲ ಜೀವನದ ಕಾರ್ಯಮೌಲ್ಯಗಳನ್ನು ಕೂಡ ಕಲಿಯಬೇಕು ಈ ರೀತಿಯಾದ ತರಬೇತಿಗಳು ನಮ್ಮ ಬದುಕು ರೂಪಿಸಲು ಸಹಕಾರಿ ಎಂದರು.

ವಲಯ ತರಬೇತಿ ವಿಭಾಗದ ನಿರ್ದೇಶಕ ದೀಪಕ್ ರಾಜ್, ಮಾತನಾಡಿ. ಅಕಾಡೆಮಿಕ್ ಎಜುಕೇಶನ್ ಗಿಂತ ಭಿನ್ನವಾದ ವಿಶಿಷ್ಟ ತರಬೇತಿಗಳು ಸಿಗಬೇಕಾದರೆ ಜೆಸಿ ಸಂಸ್ಥೆಗೆ ಬರಬೇಕು. 18 ವರ್ಷ ಆದ ಕೂಡಲೇ ಜೆಸಿ ಸಂಸ್ಥೆಗೆ ಸೇರಿಕೊಂಡರೆ ಜೀವನದಲ್ಲಿ ಅಪರಮಿತ ಅವಕಾಶಗಳು ಲಭ್ಯ ಎಂದು ಹೇಳಿದರು.ವಲಯ ಉಪಾಧ್ಯಕ್ಷೆ ಡಾ. ಹರಿಣಾಕ್ಷಿ ಕರ್ಕೇರ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಮಟ್ಟು ಗುಳ್ಳ ಕೃಷಿಕ ಹರೀಶ್ ರವರಿಗೆ ಸಲ್ಯೂಟ್ ಟು ದ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜೆಸಿ ಬಗ್ಗೆ ಮಾಹಿತಿಗಳನ್ನ ಒಳಗೊಂಡ ಕರಪತ್ರ ಮತ್ತು ಜೆಸಿಐ ಉಡುಪಿ ಸಿಟಿಯ ಘಟಕದ ಗೃಹ ಪತ್ರಿಕೆ ಉಡುಪಿ ಸಿಟಿ ವೇಲ್ಸ್ ಬಿಡುಗಡೆ ಮಾಡಲಾಯಿತು.

ತರಬೇತಿ ಸರಣಿಯ ಕಾರ್ಕಳ ಅಶೋಕ್ ರಾವ್ ಚಾರಿಟೇಬಲ್ ಸಹಪ್ರಾಯೋಜಕರಾದ ಟ್ರಸ್ಟ್ ನ ದಿನೇಶ್ ರಾವ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಉಡುಪಿ ಸಿಟಿ ಘಟಕದ ಅಧ್ಯಕ್ಷೆ ಪಲ್ಲವಿ ಕೊಡಗು ವಹಿಸಿದ್ದರು.

ವೇದಿಕೆಯಲ್ಲಿ ತರಬೇತಿ ಸರಣಿಯ ನಿರ್ದೇಶಕ ಬಾಸುಮ ಕೊಡಗು ಹಾಗೂ ಘಟಕದ ಕಾರ್ಯದರ್ಶಿ ಸಮೀಯಾ ಹೆಗ್ಡೆ ಉಪಸ್ಥಿತರಿದ್ದರು.

ಒಂದೇ ದಿನ ಸುಮಾರು 12 ಶಾಲೆಗಳಲ್ಲಿ 60ಕ್ಕೂ ಹೆಚ್ಚು ಜೆಸಿ ತರಬೇತುದಾರರಿಂದ ನೂರ ಹನ್ನೊಂದು ತರಬೇತಿ ನಡೆಸಲಾಯಿತು. ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದರು.

ಕಾರ್ಯಕ್ರಮಕ್ಕೆ ಘಟಕದ ಎಲ್ಲಾ ಸದಸ್ಯರು ಸಹಕರಿಸಿದ್ದರು.

Related posts

ಕಲೆ, ಸಂಸ್ಕೃತಿ ಜನರನ್ನು ಬೆಸೆಯುವ ಸೇತುವೆ: ಶ್ರೀ ರಮಾನಂದ ಗುರೂಜಿ, ಸಂಪಾಜೆ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿದ ಗುರೂಜಿ;

Voiceoftulunadu

ಪ್ರಿಯದರ್ಶಿನಿ ಸೊಸೈಟಿಯ ಸಾಧನೆ ಮಾದರಿಯಾಗಿದೆ, ಗ್ರಾಹಕರ ವಿಶ್ವಾಸಗಳಿಸಿದೆ : ಯು.ಟಿ.ಖಾದರ್

voiceoftulunadu

ಬಾರಕೂರು : ಜುಲೈ 25 – 26 ಪ್ರಪ್ರಥಮ ಹಲಸು ಮೇಳರೋಟರಿ ಕ್ಲಬ್ ಬಾರಕೂರು, ಶೌರ್ಯ ವಿಪತ್ತು ಘಟಕ, ಬೆನಕ ಇವೆಂಟ್ಸ್ ಉಡುಪಿಗೆ ಬನ್ನಿ ಸಹಯೋಗ;

Voiceoftulunadu

Leave a Comment