ವರದಿ/ ಚಿತ್ರ : ಈ ಮೀಡಿಯಾ
ಕಾರ್ಕಳ: ಮುಂಡ್ಕೂರಿನ ಅಮೂಲ್ಯ ರಾವ್, ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ) ನಡೆಸಿದ ಬಿ.ಇ. ಸಿಎಸ್ಇ (ಐಒಟಿ ಮತ್ತು ಸೈಬರ್ಸೆಕ್ಯುರಿಟಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ.
ಮೂಡುಬಿದಿರೆಯ ಮೈಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.ಅಮೂಲ್ಯರವರು ಮುಂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರುಣ್ ರಾವ್ ಹಾಗೂ ಮೂಡುಬಿದಿರೆ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ರಮ್ಯಾ ಅರುಣ್ ರಾವ್ ದಂಪತಿಯ ಪುತ್ರಿ.
