November 4, 2026
Uncategorizedಕ್ರೈಮ್ಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮುಂಡ್ಕೂರು ಪದವು ಭಾಗದಲ್ಲಿ ಆಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಪಾಯದ ಭೀತಿಯಲ್ಲಿ ನೀರಿನ ಟ್ಯಾಂಕ್;

ಮುಂಡ್ಕೂರು : ಕಾರ್ಕಳ ತಾಲೂಕಿನ ಮುಂಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೋಳ ಪದವು ಸರಕಾರಿ ಜಾಗದಲ್ಲಿ ಆಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ವಾರಾಹಿ ಕುಡಿಯುವ ನೀರು ಯೋಜನೆಯಿಂದ ಹೊಸದಾಗಿ ನಿರ್ಮಿತವಾದ ನೀರಿನ ಟ್ಯಾಂಕ್, ಶೆಡ್ ಅಪಾಯದಲ್ಲಿದೆ.ಕೆಲ ವ್ಯಕ್ತಿಗಳು ಯಾವುದೇ ಕಾನೂನು ಬದ್ಧ ಪರವಾನಿಗೆ ಅಥವಾ ಅನುಮತಿ ಪಡೆಯದೆ ನಿಯಮಗಳನ್ನು ಉಲ್ಲಂಘಿಸಿ ಆಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಅಕ್ರಮ ಕೆಂಪು ಗಣಿಗಾರಿಕೆಯ ಪಕ್ಕದಲ್ಲಿ ವಾರಾಹಿಕುಡಿಯುವ ನೀರಿನ ಯೋಜನೆಯ ಟ್ಯಾಂಕ್ ಹಾಗೂ ಶೆಡ್ ನಿರ್ಮಾಣಗೊಳ್ಳುತ್ತಿದ್ದು ಅದನ್ನು ಲೆಕ್ಕಿಸದೆ ಟ್ಯಾಂಕಿನ ಪಕ್ಕದಲ್ಲಿಯೇ ಗಣಿಗಾರಿಕೆ ನಡೆಸುತ್ತಿದ್ದಾರೆ.

ಅಕ್ರಮ ಗಣಿಗಾರಿಕೆಯಿಂದ ನೀರಿನ ಟ್ಯಾಂಕಿಗೆ ಹಾಗೂ ಶೆಡ್ಡಿಗೆ ಅಪಾಯ ಉಂಟಾಗಬಹುದು. ಗ್ರಾಮ ಪಂಚಾಯತ್, ಗಣಿ ಇಲಾಖೆ ಇದರ ಬಗ್ಗೆ ಗಮನಹರಿಸಿ ಕೂಡಲೇ ಗಣಿಗಾರಿಕೆಯನ್ನು ನಿಲ್ಲಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಗ್ರಾಮಸ್ಥರ ಆಗ್ರಹವಾಗಿದೆ.

Related posts

ಪುಣೆಯಲ್ಲಿ ‘ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ(ರಿ.) ಇದರ 10 ನೇ ವಾರ್ಷಿಕೋತ್ಸವ : ಯಕ್ಷ ದಶ ಸಂಭ್ರಮ -2026, ಇದರ ಪ್ರಯುಕ್ತ “ರಾಣಿ ಶಶಿಪ್ರಭೆ” ಮತ್ತು “ಶ್ರೀದೇವಿ ಕದಂಬ ಕೌಶಿಕೆ” ಯಕ್ಷಗಾನ ಪ್ರದರ್ಶನ;

Voiceoftulunadu

ಕಿನಾರಾ ಗ್ಲೋಬಲ್ ಶಾಲೆಯಲ್ಲಿ ಶಾಲಾ ಸಂಸತ್ತು ಪದ ಪ್ರದಾನ, ಮಾದಕ ವಸ್ತು ಜಾಗೃತಿ ಕಾರ್ಯಕ್ರಮ:ಕಾರ್ಯಕ್ರಮ ಉದ್ಘಾಟಿಸಿದ ಕಾಪು ಪೊಲೀಸ್ ವೃತ್ತ ನೀರೀಕ್ಷಕ ಅಜ್ಜತ್ ಅಲಿ;

Voiceoftulunadu

ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಸಚಿವ ಕೆ. ಜೆ. ಜಾರ್ಜ್ ಭೇಟಿದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ನಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು ;

Voiceoftulunadu

Leave a Comment