November 4, 2026
Uncategorizedಕ್ರೈಮ್ಕ್ರೈಮ್/ಅವಘಡಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮುದರಂಗಡಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು.ಕಾಪು ಠಾಣಾಧಿಕಾರಿ ತೇಜಸ್ವಿ ಮೇಲೆ ಆರೋಪಿಯ ಹಲ್ಲೆ ;

ವರದಿ/ ಚಿತ್ರ: ಈ ಮೀಡಿಯಾ

ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ರಾಜು ಎಂಬಾತನಿಗೆ ಪೊಲೀಸರು ಗುಂಡೇಟು ಹಾರಿಸಿರುವ ಘಟನೆ ಉಡುಪಿ ಜಿಲ್ಲೆಯ ಗಡಿಭಾಗದ ಬೈಂದೂರು ಒತ್ತಿನಣೆ ಪ್ರದೇಶದಲ್ಲಿ ನಡೆದಿದೆ.

ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬೈಂದೂರು ಒತ್ತಿನಣೆ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.ಆರೋಪಿಯನ್ನು ಕಾಪು ಪಿಎಸ್ ಐ ತೇಜಸ್ವಿ ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ತಂಡವು ಬಂಧಿಸಿ ಕರೆತರುತ್ತಿರುವಾಗ ಬೈಂದೂರು ಸಮೀಪ ಒತ್ತಿನೆಣೆ ಪೋಲಿಸರಿಗೆ ಹಲ್ಲೆ ನಡೆಸಿ ಅರೋಪಿ ರಾಜು ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಕಾಪು ಪಿಎಸ್ ಐ ತೇಜಸ್ವಿಯವರು ತಮ್ಮ ಸರ್ವೀಸ್ ಪಿಸ್ತೂಲಿನಿಂದ ರಾಜು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಗುಂಡೇಟಿನಿಂದ ಗಾಯಗೊಂಡ ರಾಜುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಯ ವೇಳೆ ಎಸ್‌ಐ ತೇಜಸ್ವಿ ಅವರಿಗೂ ಗಾಯಗಳಾಗಿದ್ದು, ಅವರನ್ನುಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಆಸ್ಪತ್ರೆಗೆ ಉಡುಪಿ ಎಸ್‌ಒಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.ಪರಾರಿಯಾದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಹಾಗೂ ಶೋಧ ಕಾರ್ಯ ಮುಂದುವರಿಸಿದ್ದಾರೆ.ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಚಲನವಲನದ ಕುರಿತು ತನಿಖೆ ನಡೆಸುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.

Related posts

ಉಡುಪಿ: ಸಿಯಾರಾಮ್ಸ್ ಸಂಸ್ಥೆಯ ಯುವ ಫ್ಯಾಷನ್ ಬ್ರಾಂಡ್ ‘ಝೀಕೋಡ್’ ಮಳಿಗೆ ಪ್ರಾರಂಭ : ದೀಪಾವಳಿ ಹಬ್ಬದ ಪ್ರಯುಕ್ತ ಮಳಿಗೆಯಲ್ಲಿ ವಿಶೇಷ ರಿಯಾಯಿತಿ, ಆಕರ್ಷಕ ಕೊಡುಗೆ ;

Voiceoftulunadu

ನವದೆಹಲಿ ಸ್ವಿಸ್‌ ಅಧ್ಯಕ್ಷರ ಜೊತೆ ಔತಣಕೂಟದಲ್ಲಿ ಪ್ರಧಾನಿ ಮೋದಿ, ಡಾ. ಆನಂದ ಸಂಕೇಶ್ವರ ಭಾಗಿ : ನವದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಗಣ್ಯರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ವಿಆರ್ಎಲ್ ಮುಖ್ಯಸ್ಥ ಉಪಸ್ಥಿತಿ ;

Voiceoftulunadu

ಮೂಳೂರು ಸರ್ವೇಶ್ವರ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಪಿಲಿಏಸ-2026” ಕಾರ್ಯಕ್ರಮಉಚಿತ ಅಂಬ್ಯುಲೆನ್ಸ್‌ ಸೇವೆ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಘೋಷಿಸಿದ ಸರ್ವೇಶ್ವರ ಫ್ರೆಂಡ್ಸ್‌ ಚಾರಿಟೇಬಲ್ ಟ್ರಸ್ಟ್;

Voiceoftulunadu

Leave a Comment