28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ರಾಜ್ಯ ಸರಕಾರದಿಂದ ಯೋಜನೆಗಳು ಮೂಲೆಗುಂಪು : ಸಂಸದ ಕೋಟ ಆರೋಪ, ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ಕಾಪು ಬಿಜೆಪಿ ಪ್ರತಿಭಟನೆ :

ವರದಿ /ಚಿತ್ರ :ಈ ಮೀಡಿಯಾ

ಕಾಪು: ಬಿಜೆಪಿ ಸರಕಾರದ ಎಲ್ಲಾ ಜನಪರ ಯೋಜನೆಗಳನ್ನು ಮೂಲಗುಂಪು ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರ ಪಿಂಚಣಿದಾರರ ಲಕ್ಷ ಹಕ್ಕುಗಳನ್ನು, ಸಾವಿರಾರು ರೇಷನ್ ಕಾರ್ಡುಗಳನ್ನು ರದ್ದುಗೊಳಿಸಿದ್ದಲ್ಲದೆ, ಹಕ್ಕುಪತ್ರ, ಮನೆ ನಿವೇಶನ, ಆಕ್ರಮ, ಸಕ್ರಮ ಅರ್ಜಿಗಳ ವಿಲೇವಾರಿ ಕಡೆಗಣಿಸಿದೆ. ರೈತರಿಗೆ ಕಿಸಾನ್ ಸಮ್ಮಾನ್ ಮೊತ್ತವನ್ನು ಹಾಕಿಲ್ಲ. ಗ್ಯಾರಂಟಿ ಯೋಜನೆಗಳನ್ನೂ ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಶಾಸಕರಿಗೆ ಅನುದಾನ ನೀಡುತ್ತಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಕಾಪು ಮಂಡಲ ಬಿಜೆಪಿ ವತಿಯಿಂದ ಶಾಸಕ ಗುರ್ಮೆ ಸುರೇಶ್ రీట్టి ನೇತೃತ್ವದಲ್ಲಿ ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ಶನಿವಾರ ಕಾಪು ಪೇಟೆಯಲ್ಲಿ ಜರಗಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನನ್ನದಲ್ಲದ ತಪ್ಪಿಗೆ ನನ್ನನ್ನು ಹೊಣೆಗಾರನಾಗಿಸುತ್ತಿರುವುದರಿಂದ ಜನರಿಗೆ ತಪ್ಪು ಸಂದೇಶ ಹೋಗಬಾರದು ఎంబ ನಿಟ್ಟಿನಲ್ಲಿ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಈ ಪ್ರತಿಭಟನೆಯಷ್ಟೇ. ಕೇವಲ ಕಿರುಕುಳ ನೀಡಲೆಂದು ಸುಳ್ಳು ಆರೋಪಗಳಿಂದ ಸಂಸ್ಕಾರವಿಲ್ಲದ ರಾಜಕೀಯ ಮಾಡುವುದು ಸರಿಯಲ್ಲ. ಮೂರು ವರ್ಷದಲ್ಲಿ ಕೇವಲ ೩೮ ಕೋಟಿ ಅನುದಾನ ಮಾತ್ರಾ ಕೊಟ್ಟಿದ್ದಾರೆ ಎಂದರು.

ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಈ ಸರಕಾರ ಕರಾವಳಿಗರ ವಿರೋಧಿಯಾಗಿದೆ. ಮೂರುವರೆ ವರ್ಷದ ಇವರ ಆಡಳಿತದಿಂದ ಜನರಿಗೆ ಭ್ರಮನಿರಸನವಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳಿಲ್ಲದೆ ಬಿಜೆಪಿಯನ್ನು ಮಾಡುವುದೇ ಇವರ ಸಾಧನೆಯಾಗಿದೆ. ಜಿಲ್ಲೆಗೆ ಯಾವುದೇ ಯೋಜನೆ ಕೊಟ್ಟಿಲ್ಲ. ಶಾಸಕರ ಮನವಿಗೆ ಬೆಲೆ ನೀಡುತ್ತಿಲ್ಲ. ಪರಾಜಿತ ಅಭ್ಯರ್ಥಿಗಳು ಸರಕಾರದ ಬೋಕರ್ಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಒಂದು ಲಕ್ಷ ವಿದ್ಯಾರ್ಥಿಗಳನ್ನು ಹಿಡಿದುಕೊಂಡು ರಾಹುಲ್ ಗಾಂಧಿ ಏನೇ ಪ್ರಯತ್ನಿಸಿದರೂ, ಭಾರತದ ಸಂವಿದಾನ ಇರುವ ತನಕ ಬಿಜೆಪಿ ಸರಕಾರಕ್ಕೆ, ಈ ದೇಶಕ್ಕೆ ಮಾಡಲು ಯಾವುದೇ ತೊಂದರೆ ಸಾಧ್ಯವಿಲ್ಲ. ಕಾಂಗ್ರೆಸ್ ಸರಕಾರದಲ್ಲಿ ನಾನು ಜಿಲ್ಲೆಯಲ್ಲಿ ಮಂತ್ರಿಯಾಗಿದ್ದಾಗ ಸ್ವಪಕ್ಷದ ಶಾಸಕರಿಂದಲೇ ತೊಂದರೆ ಅನುಭವಿಸಿದ್ದೇನೆ. ಉಸ್ತುವಾರಿ ಮಂತ್ರಿಯಾಗಿದ್ದರೂ ಕಾಪುವಿಗೆ ಬರಲು ಅವಕಾಶ ನೀಡಿಲ್ಲ ಎಂದರು.

ಶಾಸಕರಾದ ಯಶ್ಚಾಲ್ ಸುವರ್ಣ, ಹರಿಕೃಷ್ಣ ಬಂಟ್ವಾಳ್, ಲಾಲಾಜಿ ಆರ್ ಮೆಂಡನ್, ಜಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಮಾತನಾಡಿದರು.

ಶಾಸಕ ಕಿರಣ್ ಕುಮಾರ್ ಕೊಡ್ಲಿ, ಎಮ್‌ಎಲ್ಸಿ ಕಿಶೋರ್ ಕುಮಾ‌ರ್, ಜೆಡಿಎಸ್ ಉಡುಪಿ ಜಿಲ್ಲಾಅಧ್ಯಕ್ಷ ಯೋಗೀಶ್ ವಿ .ಶೆಟ್ಟಿ, బిజిపి ನಾಯಕರುಗಳಾದ ಮಟ್ಟಾರು ರತ್ನಾಕರ ಹೆಗ್ಡೆ, ದಿನಕರ ಬಾಬು, ಶಿಲ್ಪಾ ಜಿ ಸುವರ್ಣ, ಶ್ರೀಕಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮೋಹಿನಿ ಶೆಟ್ಟಿ ಸರಿತಾ ಶಿವಾನಂದ, ಗೋಪಾಲಕೃಷ್ಣ ರಾವ್, ಶರಣ್ ಮಟ್ಟು ಉಪಸ್ಥಿತಿದ್ದರು.

ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಸ್ವಾಗತಿಸಿದರು. ಕುತ್ಯಾರು ಪ್ರಸಾದ್ ಶೆಟ್ಟಿ ನಿರೂಪಿಸಿದರು.

Related posts

ನಾರಾಯಣಗುರು ತತ್ವಾದರ್ಶಗಳನ್ನು ಸರ್ವರಿಗೂ ತಲುಪಿಸಿ: ಪತ್ರಕರ್ತ ರಾಕೇಶ್ ಕುಂಜೂರು, ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ಧಾರ್ಮಿಕ ಸಭೆ, ಸಮ್ಮಾನ ;

Voiceoftulunadu

ಸೊನಾಟಾ ಸಿಂಫನೀಸ್-ಎನ್‌ಕೆಇಎಸ್ ಸಂಯುಕ್ತ ಆಶ್ರಯದಲ್ಲಿ ಗೋಕುಲ್ ಸಭಾಗೃಹದಲ್ಲಿ ಗಾನಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ೮೦ನೇ ಜನ್ಮದಿನ ಸಂಭ್ರಮ:

voiceoftulunadu

ಕುಂದಪ್ರಭೆಯ ಚುಟುಕು ಚತುರ: ಗುರುರಾಜ್ ಉಳ್ಳೂರು

rohankotekar123@gmail.com

Leave a Comment