28.5 C
ಮಂಗಳೂರು
September 4, 2026
Uncategorized

ರಾಮಮಂದಿರ ವಿರೋಧಿಗಳೀಗ ರಾಮಭಕ್ತರಾಗಲು ಹೊರಟಿದ್ದಾರೆಯೇ? : ಶರಣ್ ಕುಮಾರ್ ಮಟ್ಟು,ಕಾಪು ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಕೌಂಟರ್;

ವರದಿ /ಚಿತ್ರ :ಈ ಮೀಡಿಯಾ

ಕಾಪು: ಅಯೋಧ್ಯೆಯ ರಾಮ ಮಂದಿರ ಕಾಣಿಕೆ ಕಳವು ಪ್ರಕರಣವು ರಾಮಮಂದಿರ ವಿರೋಧಿಗಳನ್ನು ಶ್ರೀರಾಮಭಕ್ತರನ್ನಾಗಿಸಿದೆ ಎಂದು ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ರವರು ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಲೇವಡಿಯಾಡಿದ್ದಾರೆ.

ಅಯೋಧ್ಯೆಯ ರಾಮಮಂದಿರದಲ್ಲಿ ಕಳವು ಪ್ರಕರಣ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಉತ್ತರಪ್ರದೇಶದ ಸರಕಾರವು ರಾಮ ಮಂದಿರದ ಟ್ರಸ್ಟ್ ನ ಕೋರಿಕೆಯಂತೆ “ವಿಶೇಷ ತನಿಖಾ ತಂಡದ” (2.3.3) ಮೂಲಕ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಂಡರೇ ಹೊರತು ಸಾಂಸ್ಥಿಕವಾಗಿ ಅದನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಿಲ್ಲ.

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಹೋರಾಟಕ್ಕೆ ಅಡ್ಡಿಯಾಗಲು ನಡೆದ ಪ್ರಯತ್ನಗಳು, ಕರಸೇವಕರ ವಿರುದ್ಧ ಕೈಗೊಂಡ ಕ್ರಮಗಳು ಹಾಗೂ ರಾಮಮಂದಿರ ಚಳವಳಿಯನ್ನು ಹತ್ತಿಕ್ಕಲು ನಡೆದ ಘಟನೆಗಳು ನಡೆದಾಗ ಕಾಂಗ್ರೆಸ್ ಪಕ್ಷದ ನಿಲುವು ಏನಾಗಿತ್ತು ಎಂಬುದು ಕಾಪುವಿನ ಕಾಂಗ್ರೆಸ್ಸಿಗರಿಗೆ ಮರೆತುಹೋಗಿದೆಯೇ?

ಶ್ರೀರಾಮ ಮಂದಿರವು ಕೋಟ್ಯಾಂತರ ಹಿಂದೂಗಳ ಭಕ್ತಿ, ನಂಬಿಕೆ ಮತ್ತು ಅಸ್ಮಿತೆಯ ಪ್ರತೀಕವಾಗಿದೆ. ಇಂತಹ ಭಾವನಾತ್ಮಕ ವಿಷಯಗಳನ್ನು ನಿಮ್ಮ ಪ್ರತಿಭಟನೆಗಾಗಿ ಬಳಸುವುದಕ್ಕಿಂತ, ನಿಮ್ಮ ಕಾಂಗ್ರೆಸ್ ಪಕ್ಷದ ಹಿಂದಿನ ನಿಲುವು ಮತ್ತು ನಡೆ-ನುಡಿಗಳ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ. ಜನರು ಮಾತುಗಳನ್ನು ಮಾತ್ರವಲ್ಲ, ಇತಿಹಾಸವನ್ನೂ ನೆನಪಿಟ್ಟುಕೊಂಡಿದ್ದಾರೆ ಎಂದೂ ಶರಣ್ ಹೇಳಿದ್ದಾರೆ.

Related posts

ಚಾರ್ಮಾಡಿ ಘಾಟಿಯಲ್ಲಿ ಕಂಡು ಬಂದ ಒಂಟಿ ಸಲಗ: ರಸ್ತೆ ದಾಟುತ್ತಿದ್ದ ಸಲಗ ಮೊಬೈಲ್ ನಲ್ಲಿ ಸೆರೆ ;

Voiceoftulunadu

ನೀಟ್ ಅಭ್ಯರ್ಥಿ ತಡವಾಗಿ ಬಂದಿದ್ದಕ್ಕೆ ಟ್ರಾಫಿಕ್ ಕಾರಣವಲ್ಲ: ಬೆಂಗಳೂರು ಪೊಲೀಸರಿಂದ ಫ್ಯಾಕ್ಟ್‌ ಚೆಕ್‌;

Voiceoftulunadu

ಶ್ರೀಕ್ಷೇತ್ರ ಧರ್ಮಸ್ಥಳ: ಶ್ರೀ ಬಬ್ಬುಸ್ವಾಮಿ, ಧೂಮಾವತಿ ದೈವಸ್ಥಾನ ಜೀರ್ಣೋದ್ದಾರಕ್ಕೆ ಸಹಾಯ ಹಸ್ತ, ಡಿಡಿ ಹಸ್ತಾಂತರಿಸಿದ ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ;

Voiceoftulunadu

Leave a Comment