September 5, 2026
ಕ್ರೈಮ್/ಅವಘಡಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಾಯಿ ಮೂಗಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಹೆಂಡತಿ, ಮಕ್ಕಳ ಭೀಕರ ಕೊಲೆ: ಕೊನೆಗೆ ಪತಿಯೂ ಆತ್ಮಹತ್ಯೆಗೆ ಶರಣು: ಮೈಸೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ!

ಮೈಸೂರು : ಕೌಟುಂಬಿಕ ಕಲಹದ ಬೇಗುದಿಗೆ ಹಸನ್ಮುಖಿ ಕುಟುಂಬವೊಂದು ನೆಲೆಸಮಯವಾದ ದಾರುಣ, ಮನಕಲಕುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಹತಾಶೆ ಹಾಗೂ ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮುಗ್ಧ ಮಕ್ಕಳ ಬಾಯಿ ಹಾಗೂ ಮೂಗಿಗೆ ಪ್ಲಾಸ್ಟರ್ ಅಂಟಿಸಿ, ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಬಳಿಕ ತಾನೂ ಸಹ ನೇಣಿಗೆ ಶರಣಾಗಿ ಜೀವ ತೊರೆದಿದ್ದಾನೆ.ಮನೆತುಂಬ ನಗುತ್ತಿದ್ದ ಕುಟುಂಬವೊಂದು ದಿಢೀರನೇ ಶವವಾಗಿ ಬಿದ್ದಿರುವುದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಮೃತದೇಹಗಳ ಗುರುತು ಪತ್ತೆ:ಹುಣಸೂರಿನ ಮಾರುತಿ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ಈ ರಕ್ತಸಿಕ್ತ ಕೃತ್ಯ ನಡೆದಿದ್ದು, ಮೃತರನ್ನು ಹರೀಶ್(ಗಂಡ ), ನಿಶ್ಚಿತಾ (ಪತ್ನಿ) ನೆಕ್ಸಾ (ಮಗಳು), ರಕ್ಷಾ ( ಮಗು) ಎಂದು ಗುರುತಿಸಲಾಗಿದೆ.

ಕೊಲೆಯ ಭೀಕರತೆ ಕಂಡು ಪೊಲೀಸರೇ ಸೈಲೆಂಟ್!ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆ ನಡೆದ ರೀತಿಯೇ ಅತ್ಯಂತ ಅಮಾನುಷವಾಗಿದೆ. ಪತ್ನಿ ನಿಶ್ಚಿತಾ ಹಾಗೂ ಮುಗ್ಧ ಮಕ್ಕಳಾದ ನೆಕ್ಸಾ ಮತ್ತು ರಕ್ಷಾ ಅವರ ಮುಖ, ಬಾಯಿ ಮತ್ತು ಮೂಗಿನ ಭಾಗಕ್ಕೆ ಪ್ಲಾಸ್ಟರ್‌ನಿಂದ ಗಟ್ಟಿಯಾಗಿ ಸುತ್ತಿ ಅಂಟಿಸಲಾಗಿತ್ತು. ಚೀರಿಕೊಳ್ಳಲು ಅಥವಾ ಉಸಿರಾಡಲು ಸಾಧ್ಯವಾಗದಂತೆ ಮಾಡಿ ಕ್ರೂರವಾಗಿ ಕೊ*ಲೆ ಮಾಡಲಾಗಿದೆ.

ಕುಟುಂಬದ ಮೂವರನ್ನೂ ಹತ್ಯೆ ಮಾಡಿದ ಬಳಿಕ, ಆರೋಪಿ ಹರೀಶ್ ತಾನೂ ಸಹ ಸಾವಿನ ದಾರಿ ಹಿಡಿದಿದ್ದಾನೆ.ಶಾಲೆಗೆ ಹೋಗಿ ಆಟವಾಡಿಕೊಂಡು ಖುಷಿಯಾಗಿದ್ದ ಮುಗ್ಧ ಕಂದಮ್ಮಗಳ ದಾರುಣ ಅಂತ್ಯವನ್ನು ಕಂಡು ಸ್ಥಳೀಯರ ಕಣ್ಣುಗಳು ತೇವಗೊಂಡಿವೆ.ಘಟನಾ ಸ್ಥಳಕ್ಕೆ SP ಮಲ್ಲಿಕಾರ್ಜುನ ಬಾಲದಂಡಿ ಭೇಟಿ:ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಪೊಲೀಸರ ಪ್ರತಿಕ್ರಿಯೆ:”ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಕಲಹವೇ ಈ ದುರಂತಕ್ಕೆ ಮುಖ್ಯ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡು, ಘಟನೆಗೆ ಸಂಬಂಧಿಸಿದಂತೆ ಪ್ರತಿಯೊಂದು ಆಯಾಮದಲ್ಲೂ ಹೆಚ್ಚಿನ ತನಿಖೆ ಕೈಗೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಘಟನೆಯಿಂದ ಹುಣಸೂರಿನ ಮಾರುತಿ ಬಡಾವಣೆಯಲ್ಲಿ ಶೋಕಸಾಗರ ಆವರಿಸಿದ್ದು, ಕೌಟುಂಬಿಕ ಸಮಸ್ಯೆಗೆ ಮುಗ್ಧ ಮಕ್ಕಳನ್ನು ಬಲಿಪಡೆದ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Related posts

ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯ ಬೆಲ್ಮಣ್ ವಲಯದಿಂದ ಸಾಮೂಹಿಕ ವರಮಹಾಲಕ್ಷ್ಮಿಪೂಜೆ ಧಾರ್ಮಿಕ ಸಭಾ ಅಧ್ಯಕ್ಷತೆ ವಹಿಸಿದ ಪೂಜಾ ಸಮಿತಿಯ ಅಧ್ಯಕ್ಷ ಸುರೇಶ್ ಭಟ್ ;

Voiceoftulunadu

ಮಣಿಪಾಲ ಕೆಎಂಸಿಯಲ್ಲಿ ಪ್ರಣವ್ ಹೆಗ್ಡೆ ಕುಟುಂಬದಿಂದ ಅಂಗಾಂಗ ದಾನ, ಹಲವರಿಗೆ ಜೀವದಾನ ಪ್ರಣವ್‌ ಹೆಗ್ಡೆ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ;

Voiceoftulunadu

ಉಡುಪಿಯ ಡಾ. ರಾಜಲಕ್ಷ್ಮಿ ಅವರ “ವಾತ್ಸಲ್ಯದ ಒಸಗೆ” ಕೃತಿ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ : ಪ್ರಶಸ್ತಿ ಪ್ರದಾನಿಸಲಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸುರೇಶ್‌ ಹನಗವಾಡಿ;

Voiceoftulunadu

Leave a Comment