28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸ

ವಿಶ್ವ ದೇವಾಡಿಗ ಮಹಾ ಅಧಿವೇಶನ ಪೂರ್ವಬಾವಿ ಸಭೆ;

ವರದಿ/ ಚಿತ್ರ :ರೋನ್ಸ್ ಬಂಟ್ವಾಳ್

ಮುಂಬಯಿ, ಜು.೨೦: ವಿಶ್ವ ದೇವಾಡಿಗ ಮಹಾಮಂಡಳದ ಆಶ್ರಯದಲ್ಲಿ ಡಿಸೆಂಬರ್ ೨೦ರಂದು ಉಡುಪಿಯ ಚಿತ್ಪಾಡಿ ಬಯಲು ರಂಗವೇದಿಕೆಯಲ್ಲಿ ನಡೆಯಲಿರುವ ವಿಶ್ವ ದೇವಾಡಿಗ ಮಹಾ ಅಧಿವೇಶನದ ಪೂರ್ವಬಾವಿ ಸಭೆ ಭಟ್ಕಳ ಸಂಘದ ವ್ಯಾಪಿಯ ಪೂರ್ವಭಾವಿ ಸಭೆಯು ಭಟ್ಕಳದ ಖಾಸಗಿ ಸಭಾಂಗಣದಲ್ಲಿ ಭಟ್ಕಳ ದೇವಾಡಿಗ ಸಂಘದ ಅಧ್ಯಕ್ಷ ಲಕ್ಷ್ಮಣ ದೇವಾಡಿಗರ ಅಧ್ಯಕ್ಷತೆಯಲ್ಲಿ ನೇರವೇರಿತು.

ಮುಖ್ಯ ಅತಿಥಿಗಳಾದ ವಿಶ್ವ ಮಹಾಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ  ಹಿರಿಯಡ್ಕ ಮೋಹನದಾಸ್ ಅವರು ಭಟ್ಕಳ ಊರಿನ ಹಾಗೂ ತಮ್ಮ ನಿಕಟ ಸಂಪರ್ಕದ ಬಗ್ಗೆ ವಿವರಿಸುತ್ತಾ ಅಧಿವೇಶನದ ಉದ್ದೇಶ, ಅವಶ್ಯಕತೆಯನ್ನು ವಿವರಿಸಿದರು.

ಅಧ್ಯಕ್ಷರಾದ ಧರ್ಮಪಾಲ್ ಯು ದೇವಾಡಿಗ ಮಾತನಾಡುತ್ತಾ,ನಮ್ಮ ಬೇಡಿಕೆಗಳು ಸರಕಾರದ ಮಟ್ಟಕ್ಕೆ ಮುಟ್ಟಲು ಈ ಮಹಾ ಅಧಿವೇಶನ ಅಗತ್ಯವೆಂದು ವಿವರಿಸಿದರು ತನ್ನನ್ನು ಅಭಿನಂದಿಸಿದ ಬಗ್ಗೆ ಕೃತಜ್ಞತೆ ಸಲ್ಲಿಸಿದರು. ದೇವಾಡಿಗ ಸಂಘ ಮುಂಬಯಿ  ಅಧ್ಯಕ್ಷ ರವಿ ಎಸ್. ದೇವಾಡಿಗ, ಮಹಾ ಮಂಡಳದ ಉಪಾಧ್ಯಕ್ಷ ನಾಗರಾಜ್ ಪಡುಕೋಣೆ, ಪ್ರದಾನ ಕಾರ್ಯದರ್ಶಿ ಗಣೇಶ್ ಅಂಬಲಪಾಡಿ, ಕಾರ್ಯದರ್ಶಿ ಯಾದವ ದೇವಾಡಿಗ, ಉಡುಪಿ ಸಂಘದ ಅಧ್ಯಕ್ಷ ರತ್ನಾಕರ್ ಜಿ. ಎಸ್. ಸಮಯೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಾಂಬುರು, ಜನಾರ್ದನ ಉಪ್ಪುಂದ, ಚೆನ್ನಪ್ಪ ಮೊಯಿಲಿ, ಜೊತೆ ಕಾರ್ಯದರ್ಶಿ ರಾಜು ದೇವಾಡಿಗ ಕುಂದಾಪುರ, ಉಪಸ್ಥಿತರಿದ್ದರು.

Related posts

ಬಿಜೆಪಿಯ ವಿರುದ್ಧ ಹೋರಾಡಲು ಮಹಿಳೆಯರು ಸಂಘಟಿತರಾಗೋಣ :ವಿಲ್ಮಾ ಡಿಕೋಸ್ಟ;

Voiceoftulunadu

ದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರದ ಕೊಡುಗೆ ಮಹತ್ವದ್ದಾಗಿದೆ, ಎಸ್.ಆರ್. ಸತೀಶ್ ಚಂದ್ರ :ಶಿರ್ವ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಕಾರ್ಯಕಾರಿಣಿ;

Voiceoftulunadu

ನಂದಿಕೂರು : 73 ಕೆ.ಜಿ ಗೂ ಅಧಿಕ ತೂಕದ ಗಾಂಜಾ ನಾಶಉಡುಪಿ ಜಿಲ್ಲಾ ಎಸ್ಪಿ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಂ ಶಂಕರ್ ನೇತೃತ್ವ;

Voiceoftulunadu

Leave a Comment