28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕೃಷಿ/ಭೌಗೋಳಿಕರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನವಿಶೇಷ ಅಂಕಣಸಾಮಾಜಿಕ/ಇತಿಹಾಸ

ಇಂಜಿನಿಯರಿಂಗ್ ವಿಭಾಗಗಳಲ್ಲಿ ಕೃತಕ ಬುದ್ಧಿಮತ್ತೆ : ಭವಿಷ್ಯದ ಇಂಜಿನಿಯರ್ಗಳಿಗೆ ಅತ್ಯಾವಶ್ಯಕ ಕೌಶಲ್ಯ ಬಂಟಕಲ್ ತಾಂತ್ರಿಕ ಕಾಲೇಜು ಡೀನ್, ಡಾ. ಸುದರ್ಶನ ರಾವ್ ಕೆ. ರವರ ವಿಶೇಷ ಲೇಖನ;

ಉಡುಪಿ: “ಮುಂದಿನ ದಿನಗಳಲ್ಲಿ AI ತಿಳಿದಿರುವ ಇಂಜಿನಿಯರ್ಗಳು ಮಾತ್ರವಲ್ಲ, ΑΙ ಯನ್ನು ಸಮರ್ಥವಾಗಿ ಬಳಸುವ ಎಲ್ಲಾ ಇಂಜಿನಿಯರ್ಗಳು ಉದ್ಯಮ ಕ್ಷೇತ್ರವನ್ನು ಮುನ್ನಡೆಸಲಿದ್ದಾರೆ.”ಕೇವಲ ಹತ್ತು ವರ್ಷಗಳ ಹಿಂದೆ ಕೃತಕ ಬುದ್ಧಿಮತ್ತೆ (AI) ಎಂಬುದು ಸಂಶೋಧನಾ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು AI ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ಸಾರಿಗೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಪ್ರಭಾವವನ್ನು ಇಂಜಿನಿಯರಿಂಗ್ ಶಿಕ್ಷಣವೂ ಇದಕ್ಕೆ ಹೊರತಾಗಿಲ್ಲ. ಹಿಂದೆ ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಮಾತ್ರ ಭಾವಿಸಲಾಗುತ್ತಿದ್ದ AI ಇಂದು, ಎಲ್ಲಾ ಇಂಜಿನಿಯರಿಂಗ್ ವಿಭಾಗಗಳ ಅವಿಭಾಜ್ಯ ಅಂಗವಾಗಿದೆ.

ವಿಶ್ವವು ಇಂದು ಕೈಗಾರಿಕೆ 4.0 (In-dustry 4.0) ಹಂತವನ್ನು ದಾಟಿ 8 5.0 (Industry 5.0) ៩ . Industry 5.0 ನಲ್ಲಿ ಯಂತ್ರಗಳು ಮಾನವನನ್ನು ಬದಲಿಸುವುದಿಲ್ಲ. ಬದಲಾಗಿ ಮಾನವ ಮತ್ತು AI ಒಟ್ಟಾಗಿ ಕೆಲಸ ಮಾಡುವ ಹೊಸ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಇಂಜಿನಿಯರ್ A I. ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳು ವುದು ಅತ್ಯಗತ್ಯವಾಗಿದೆ.

ಮೆಕ್ಯಾನಿಕಲ್ ఇంజినియరింగా ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಉತ್ಪಾದನಾ ವಲಯದಲ್ಲಿ ಮಹತ್ತರ ಬದಲಾವಣೆಯನ್ನು ತಂದಿದೆ. ಸ್ಮಾರ್ಟ್ ರೋಬೋಟ್ ಗಳು, ಯಂತ್ರಗಳಲ್ಲಿ ಉಂಟಾಗಬಹುದಾದ ದೋಷಗಳನ್ನು ಮುಂಚಿತವಾಗಿ ಗುರುತಿಸುವ ಪ್ರಿಡಿಕ್ಟಿವ್ ಮೆಂಟೆನನ್ಸ್ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ, 3D ಪ್ರಿಂಟಿಂಗ್, ಡಿಜಿಟಲ್ ಟ್ರೈನ್ ತಂತ್ರಜ್ಞಾನ ಹಾಗೂ ಸ್ವಯಂಚಾಲಿತ ಉತ್ಪಾದನಾ ವ್ಯವಸ್ಥೆಗಳಲ್ಲಿ AI ಪ್ರಮುಖ ಪಾತ್ರವಹಿಸುತ್ತಿದೆ. ಇದರಿಂದ ಉತ್ಪಾದಕತೆ ಹೆಚ್ಚುವುದರ ಜೊತೆಗೆ ಯಂತ್ರಗಳ ಕಾರ್ಯಕ್ಷಮತೆ, ಸುರಕ್ಷತೆ ಮತ್ತು ನಿರ್ವಹಣಾ ವೆಚ್ಚದಲ್ಲಿ ಗಣನೀಯಸುಧಾರಣೆ ಕಂಡುಬರುತ್ತಿದೆ.

సివిలో ఇంజినియరింగో ಕ್ಷೇತ್ರದಲ್ಲಿಯೂ AI ಹೊಸಆಯಾಮಗಳನ್ನು ತೆರೆದಿದೆ. ಕಟ್ಟಡಗಳ ವಿನ್ಯಾಸವನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸುವುದು, ಸಂಚಾರ ದಟ್ಟಣೆಯ ನಿರ್ವಹಣೆ, ಸೇತುವೆಗಳು ಹಾಗೂ ಕಟ್ಟಡಗಳ ಆರೋಗ್ಯ ಮೇಲ್ವಿಚಾರಣೆ, ಭೂಕಂಪ ಮತ್ತು ಪ್ರವಾಹಗಳಂತಹ ಪ್ರಕೃತಿ ವಿಕೋಪಗಳ ಮುನ್ಸೂಚನೆ ಹಾಗೂ ಸ್ಮಾರ್ಟ್ ನಗರಗಳ ಅಭಿವೃದ್ಧಿಯಲ್ಲಿ AI ಪ್ರಮುಖ ಪಾತ್ರ ವಹಿಸುತ್ತಿದೆ. ಡೋನ್ಗಳು, ಉಪಗ್ರಹ ಚಿತ್ರಗಳು ಮತ್ತು ವಿವಿಧ ಸೆನ್ಸರ್ಗಳಿಂದ ದೊರೆಯುವ ಮಾಹಿತಿಯನ್ನು ವಿಶ್ಲೇಷಿಸುವ ಮೂಲಕ ನಿರ್ಮಾಣ ಕಾರ್ಯಗಳಲ್ಲಿ ವೇಗ, ಮತ್ತು ಸುರಕ್ಷತೆಯನ್ನುಹೆಚ್ಚಿಸಲಾಗುತ್ತಿದೆ.

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸ್ಮಾರ್ಟ್ ಗ್ರಿಡ್ಗಳ ನಿರ್ವಹಣೆ, ವಿದ್ಯುತ್ ಬೇಡಿಕೆಯ ಮುನ್ಸೂಚನೆ, ನವೀಕರಿಸಬಹುದಾದ ಇಂಧನ ಮೂಲಗಳ ಸಮರ್ಥ ಬಳಕೆ, ಬ್ಯಾಟರಿಗಳ ಕಾರ್ಯಕ್ರಮತೆಯ ವಿಶ್ಲೇಷಣೆ ಹಾಗೂ ವಿದ್ಯುತ್ ವ್ಯವಸ್ಥೆಗಳಲ್ಲಿನ ದೋಷಗಳನ್ನು ಮುಂಚಿತವಾಗಿ ಪತ್ತೆಹಚ್ಚುವಲ್ಲಿ AI ಪ್ರಮುಖ ಪಾತ್ರ ವಹಿಸುತ್ತಿದೆ. ಇದರಿಂದ ವಿದ್ಯುತ್ ನಷ್ಟ ಕಡಿಮೆಯಾಗಿ, ಇಂಧನದ ಸಮರ್ಪಕ ಬಳಕೆ ಸಾಧ್ಯವಾಗುತ್ತಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಕ್ಷೇತ್ರದಲ್ಲಿ 56 ಹಾಗೂ ಮುಂಬರುವ 6G ತಂತ್ರಜ್ಞಾನ, ಉಪಗ್ರಹ ಸಂವಹನ, ವೈರ್ಲೈಸ್ ಜಾಲಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು, ಧ್ವನಿ ಮತ್ತು ಮುಖ ಗುರುತಿಸುವಿಕೆ, ಸ್ವಯಂಚಾಲಿತ ಸಂವಹನ ವ್ಯವಸ್ಥೆಗಳು ಹಾಗೂ ಇಂಟನೇಟ್ ಆಫ್ ಥಿಂಗ್ಸ್ (IoT) ಸಾಧನಗಳ ನಿರ್ವಹಣೆಯಲ್ಲಿ AI. ಪ್ರಮುಖ ಪಾತ್ರ ವಹಿಸಿದೆ.

ಕಂಪ್ಯೂಟರ್ ಸೈನ್ಸ್ ಕ್ಷೇತ್ರದಲ್ಲಿ ಮೆಷಿನ್ ಲರ್ನಿಂಗ್, ಡೀಪ್ ಲರ್ನಿಂಗ್, ಜನರೇಟಿವ್ AI, ಸೈಬರ್ ಭದ್ರತೆ, ಕ್ರೌಡ್ ಕಂಪ್ಯೂಟಿಂಗ್ (Cloud Comput-ing) ಮತ್ತು ಡೇಟಾ ಸೈನ್ಸ್ ಪ್ರಮುಖ ChatGPT, GitHub Copilot, Gemini od Al ಸಾಧನೆಗಳು ಸಾಪ್ಟರ್ ಅಭಿವೃದ್ಧಿಯ ವೇಗ ಮತ್ತು ಗುಣಮಟ್ಟವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ.

ಬ್ಯಾಂಕಿಂಗ್ ಮಾಹಿತಿ ವಿಜ್ಞಾನ ಹಾಗೂ AI ಮತ್ತು ಮೆಷಿನ್ ಲರ್ನಿಂಗ್ ಕ್ಷೇತ್ರಗಳಲ್ಲಿ ಅಪಾರ ಪ್ರಮಾಣದ ಮಾಹಿತಿಯನ್ನು ವಿಶ್ಲೇಷಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು A I ನೆರವಾಗುತ್ತಿದೆ. ಕ್ಷೇತ್ರದಲ್ಲಿ ಹಣಕಾಸು ವಂಚನೆಗಳನ್ನು ಪತ್ತೆಹಚ್ಚುವುದು, ಆಸ್ಪತ್ರೆಗಳಲ್ಲಿ ರೋಗಗಳ ನಿಖರ ನಿರ್ಣಯ, ಭಾಷಾಂತರ, ವೈಯಕ್ತಿಕ ಶಿಫಾರಸು ವ್ಯವಸ್ಥೆಗಳು ಹಾಗೂ ಸ್ವಯಂಚಾಲಿತ ನಿರ್ಧಾರ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ AI ಯಶಸ್ವಿಯಾಗಿ ಬಳಕೆಯಾಗುತ್ತಿದೆ.

AI ಯ ಬಳಕೆ ಇಂಜಿನಿಯರಿಂಗ್ಶಿಕ್ಷಣವನ್ನು ಮೀರಿ ಕೃಷಿ ಮತ್ತು ಪರಿಸರ ಕ್ಷೇತ್ರಗಳಲ್ಲಿಯೂ ವೇಗವಾಗಿ ವಿಸ್ತರಿಸುತ್ತಿದೆ. ಸ್ಮಾರ್ಟ್ ಕೃಷಿ ಪದ್ಧತಿಗಳು, ಬೆಳೆ ರೋಗಗಳ ಆರಂಭಿಕ ಪತ್ತೆ ,ನೀರಾವರಿ ವ್ಯವಸ್ಥೆಯ ಸ್ವಯಂಚಾಲಿತ ನಿರ್ವಹಣೆ, ಹವಾಮಾನ ಮುನ್ಸೂಚನೆ. ಮಣ್ಣಿನ ಗುಣಮಟ್ಟದ ವಿಶ್ಲೇಷಣೆ ಹಾಗೂ ಡೋನ್ಗಳ ಮೂಲಕ ಬೆಳೆಗಳ ಮೇಲ್ವಿಚಾರಣೆ ಮಾಡುವಲ್ಲಿ AI ರೈತರಿಗೆ ಹೆಚ್ಚಿನ ನೆರವಾಗುತ್ತಿದೆ. ಇದರಿಂದ ಉತ್ಪಾದಕತೆ ಹೆಚ್ಚುವುದರ ಜೊತೆಗೆ ನೀರು ಮತ್ತು ರಸಗೊಬ್ಬರದ ಸಮರ್ಪಕ ಬಳಕೆಯೂ ಸಾಧ್ಯವಾಗುತ್ತಿದೆ.

ಮುಂದಿನ ದಶಕದಲ್ಲಿ ಪ್ರತಿಯೊಬ್ಬ ಇಂಜಿನಿಯರ್ ತನ್ನ ಮೂಲ ವಿಭಾಗದ ಜ್ಞಾನದ ಜೊತೆಗೆ ಕೃತಕ ಬುದ್ಧಿಮತ್ತೆ (AI), ಡೇಟಾ ವಿಶ್ಲೇಷಣೆ, ಪ್ರೋಗ್ರಾಮಿಂಗ್, ಸಮಸ್ಯೆ ಪರಿಹಾರ ಕೌಶಲ್ಯ ಹಾಗೂ ನವೀನ ಚಿಂತನೆಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ.ಈಗಾಗಲೇ ನಮ್ಮ ವರ್ತಮಾನವಾಗಿದೆ.AI ಮಾನವನ ಬುದ್ಧಿವಂತಿಕೆಯನ್ನು ಬದಲಿಸುವುದಿಲ್ಲ, ಬದಲಾಗಿ ಅವನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ಶಕ್ತಿಶಾಲಿ ಸಾಧನವಾಗಿದೆ.

ಕರ್ನಾಟಕವು ಇಂದು ಭಾರತದ ಕೃತಕ ಬುದ್ಧಿಮತ್ತೆ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಬೆಂಗಳೂರಿನ ಅನೇಕ ಸ್ಮಾರ್ಟ್ ಅಪ್ ಗಳು, ಐಟಿ ಕಂಪನಿಗಳು ಹಾಗೂ ಸಂಶೋಧನಾ ಸಂಸ್ಥೆಗಳು AI ಆಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ.

ಇನ್ಫೋಸಿಸ್, ವಿಪ್ರೋ , ಟಾಟಾ ಕನ್ಸನ್ಸಿ ಸರ್ವಿಸಸ್ (TCS), BEL, HAL ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿದಂತೆ ಹಲವು ಸಂಸ್ಥೆಗಳು ಉತ್ಪಾದನೆ, ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ, ಆರೋಗ್ಯ ಮತ್ತು ಡಿಜಿಟಲ್ ಸೇವೆಗಳಲ್ಲಿ AI ಅನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿವೆ.

ಕರ್ನಾಟಕದ యువ ಇಂಜಿನಿಯರ್ ಗಳಿಗೆ ಜಾಗತಿಕ ಮಟ್ಟದ ಉದ್ಯೋಗ, ಸಂಶೋಧನೆ ಮತ್ತು ನವೋದ್ಯಮದ ಅವಕಾಶಗಳನ್ನು ಸೃಷ್ಟಿಸುತ್ತಿದೆ.ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಸರ್ಕಾರಗಳು ក ΑΙ ಆಧಾರಿತ ಶಿಕ್ಷಣ, ಹೆಚ್ಚಿನ ಉತ್ತೇಜನ ನೀಡಬೇಕು. AI ಉದ್ಯೋಗಗಳನ್ನು ಕಡಿಮೆ ಮಾಡುವ ತಂತ್ರಜ್ಞಾನವಲ್ಲ. ಹೊಸ ರೀತಿಯ ಉದ್ಯೋಗಗಳು, ಕೈಗಾರಿಕೆಗಳು ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸುವ ಪರಿವರ್ತನಾ ಶಕ್ತಿಯಾಗಿದೆ.

ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಮೂಲ ವಿಭಾಗದ ಪರಿಣತಿಯೊಂದಿಗೆ AI ಅನ್ನು ಸಮರ್ಥವಾಗಿ ಬಳಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಕಾಲದ ಅಗತ್ಯವಾಗಿದೆ.AI ಅನ್ನು ಜವಾಬ್ದಾರಿಯುತವಾಗಿ ಕೃತಕ ಬುದ್ಧಿಮತ್ತೆ ಕೇವಲ ಒಂದು ತಂತ್ರಜ್ಞಾನವಲ್ಲ. ಅದು ಕೈಗಾರಿಕಾ ಕ್ರಾಂತಿಯ ಪ್ರಮುಖ ಶಕ್ತಿಯಾಗಿದೆ. ಅಳವಡಿಸಿಕೊಂಡು ಅದನ್ನು ಸಮಾಜದ ಒಳಿತಿಗಾಗಿ ಬಳಸುವ ಇಂಜಿನಿಯರ್ಗಳೇ ನಾಳೆಯ ತಂತ್ರಜ್ಞಾನ ಜಗತ್ತನ್ನು ಮುನ್ನಡೆಸಲಿದ್ದಾರೆ. ಆದ್ದರಿಂದ “AI ఎలా ఇంజినియరింగా విభాగగOR ಅಗತ್ಯ” ಎಂಬ ಅರಿವು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉದ್ಯಮ ವಲಯದಲ್ಲಿ ಇನ್ನಷ್ಟು ಬಲವಾಗಬೇಕಾಗಿದೆ.

“AI ನಮ್ಮ ಭವಿಷ್ಯವಲ್ಲ. ಅದುಅದನ್ನು ಅರ್ಥಮಾಡಿಕೊಂಡು, ಜ ವಾ ಬ್ಲಾ ರಿ ಯಿಂದ ಬಳಸುವವರೇ ನಾಳೆಯ ಯಶಸ್ವಿ ಇಂಜಿನಿಯರ್ಗಳಾಗುತ್ತಾರೆ.”

✍️ಡಾ. ಸುದರ್ಶನ ರಾವ್ ಕೆ. ಡೀನ್ (ಅಕಾಡೆಮಿಕ್ಸ್) ಹಾಗೂ ಪ್ರಾಧ್ಯಾಪಕರು, ಮೆಕ್ಯಾನಿಕಲ್ ఇంజినియరింగా ವಿಭಾಗ ಶ್ರೀ ಮಧ್ಯವಾದಿರಾಜ ತಾಂತ್ರಿಕ ಮತ್ತು ನಿರ್ವಹಣಾ ಮಹಾವಿದ್ಯಾಲಯ, ಬಂಟಕಲ್, ಉಡುಪಿ.

Related posts

ಶಿರ್ವ ಸಂತಮೇರಿ ಪ. ಪೂ ಕಾಲೇಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ. ಆರ್ ಪಾಟ್ಕರ್ ಪುನರಾಯ್ಕೆ : ಕಾರ್ಯದರ್ಶಿಯಾಗಿ ಮೋಹನ್ ನೊರೋನ್ಹಾ ,ಕೋಶಾಧಿಕಾರಿಯಾಗಿ ಜುಲಿಯಾನ್ ರೊಡ್ರಿಗಸ್ ಆಯ್ಕೆ;

Voiceoftulunadu

ಕಾಪು ಹೊಸ ಮಾರಿಗುಡಿಗೆ ರಾಜ್ಯ ಸಮಗ್ರ ಶಿಕ್ಷಣ ಇಲಾಖಾ ಯೋಜನಾ ನಿರ್ದೇಶಕಿ ಡಾ. ವಿದ್ಯಾಕುಮಾರಿ ಭೇಟಿ: ವಿಶೇಷ ಪೂಜೆ ಸಲ್ಲಿಸಿ ಅನುಗ್ರಹ ಪ್ರಸಾದ ನೀಡಿದ ಮಾರಿಗುಡಿಯ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ;

Voiceoftulunadu

ಇಂದು ಬಿಡುಗಡೆಯಾಗುತ್ತಿದ್ದಾಳೆ “ಈ ಶತಮಾನದ ಮಾದರಿ ಹೆಣ್ಣು” : ಬಿ ಆರ್ ಫಿಲ್ಮ್ ಐಕಾನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿರುವ ಕಿರುಚಲನಚಿತ್ರ ;

Voiceoftulunadu

Leave a Comment