September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯರಾಜ್ಯ/ದೇಶಸಾಮಾಜಿಕ/ಇತಿಹಾಸ

ಇಂದು ಶಿಕ್ಷಕರ ದಿನಾಚರಣೆಯ ಸಂಭ್ರಮ : ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ..;

ಇಂದು ಸೆ. 5 ಶಿಕ್ಷಕರ ದಿನಾಚರಣೆಯ ಸಂಭ್ರಮ,ಶಿಕ್ಷಣವೆಂದರೆ ಕೇವಲ ಪುಸ್ತಕದ ಪಾಠ ಹಾಗೂ ಅಂಕ ಗಳಿಕೆಯಾಗದೆ ವಿದ್ಯಾರ್ಥಿಯು ತನ್ನ ವ್ಯಕ್ತಿತ್ವ ರೂಪಿಸಿ ಸಾಧನೆಯ ಹಾದಿಯ ಕಡೆಗೆ ಸಾಗಬೇಕಾದ ಮಹತ್ತರ ಜವಾಬ್ದಾರಿಯಲ್ಲಿ ಶಿಕ್ಷಕರ ಪಾತ್ರವೇ ಹಿರಿದು, ಶಿಕ್ಷಕರೆಂದರೆ ಕೇವಲ ಪಾಠ ಹೇಳುವವರಲ್ಲ; ಬದುಕಿನ ದಾರಿ ತೋರಿಸುವವರು.“ಗುರು” ಎಂಬುದು ಎರಡಕ್ಷರದ ಪದವಾದರೂ ಅದು ವಿಶಾಲವಾದ ಅರ್ಥವನ್ನು ಹೊಂದಿದೆ . ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು.

ವಿದ್ಯಾರ್ಥಿಯ ಬದುಕಿನಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು.“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಗುರುವಿನ ಮಾರ್ಗದರ್ಶನ ಮತ್ತು ಶರಣಾಗತಿಯಿಲ್ಲದೆ ಮೋಕ್ಷ (ಮುಕ್ತಿ) ದೊರೆಯುವುದಿಲ್ಲ ಎಂಬುದನ್ನು ದಾಸ ಶ್ರೇಷ್ಠ ಪುರಂದದಾಸರ ಕೀರ್ತನೆ ತಿಳಿಸುತ್ತದೆ ಅಂದರೆ ಅಂಧವಾಗಿ ಯಾರನ್ನಾದರೂ ಅನುಸರಿಸುವುದಲ್ಲ. ತನ್ನ ಅಹಂಕಾರವನ್ನು ಬದಿಗಿಟ್ಟು ಜ್ಞಾನಕ್ಕೆ ಶರಣಾಗುವುದು ಇದರ ನಿಜವಾದ ಅರ್ಥ.

ಒಳ್ಳೆಯ ಶಿಕ್ಷಕ ಪಾಠಪುಸ್ತಕದ ಜ್ಞಾನವನ್ನಷ್ಟೇ ನೀಡುವುದಿಲ್ಲ. ಶಿಸ್ತು, ಸಂಸ್ಕಾರ, ಮಾನವೀಯತೆ, ಪ್ರಾಮಾಣಿಕತೆ ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಧೈರ್ಯವನ್ನೂ ಕಲಿಸುತ್ತಾನೆ. ವಿದ್ಯಾರ್ಥಿಯ ಸೋಲಿನಲ್ಲಿ ಧೈರ್ಯ ತುಂಬಿ, ಗೆಲುವಿನಲ್ಲಿ ವಿನಯದಿಂದ ಇರಲು ಕಲಿಸುವವನೇ ನಿಜವಾದ ಗುರು.ನಾವು ಎಷ್ಟೇ ವಿದ್ಯಾವಂತರಾದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ, ನಮ್ಮ ಬದುಕಿನಲ್ಲಿ ಒಬ್ಬ ಶಿಕ್ಷಕರ ಛಾಪು ಇದ್ದೇ ಇರುತ್ತದೆ.

ನಾವು ಮೊದಲ ಅಕ್ಷರ ಕಲಿತ ಕ್ಷಣದಿಂದ ಜೀವನದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳು ವವರೆಗೂ ಯಾವುದೋ ಒಂದು ಹಂತದಲ್ಲಿ ಶಿಕ್ಷಕರ ಮಾರ್ಗದರ್ಶನ ನಮಗೆ ದಿಕ್ಕು ತೋರಿಸಿರುತ್ತದೆ.ಆದ್ದರಿಂದಲೇ ಭಾರತೀಯ ಪರಂಪರೆಯಲ್ಲಿ ಗುರು ಪರಂಪರೆಗೆ ವಿಶೇಷ ಸ್ಥಾನ.ಇಂದು ತಂತ್ರಜ್ಞಾನದ ಯುಗ ಗುರುವಿನ ಜವಾಬ್ದಾರಿ

Related posts

ಶ್ರೀರಸ್ತು ಸೌಹಾರ್ದ ಸೊಸೈಟಿ ವತಿಯಿಂದ ಮಕ್ಕಳಿಗಾಗಿ ಸಹಕಾರ ಧ್ವಜ ಚಿತ್ರ ಬಿಡಿಸುವ ಸ್ಪರ್ಧೆ;

Voiceoftulunadu

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಜಪಾನ್ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಶ್ರೀಕಲಾ ಬೊಳ್ಳಾಜೆ ನೇಮಕ ;

Voiceoftulunadu

ಉಡುಪಿ, ಆ. 1: ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ : ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ ಸ್ಥಳದಲ್ಲೇ ಮೃತ್ಯು ;

Voiceoftulunadu

Leave a Comment